Tara Sutaria: ಬ್ರೇಕಪ್‌ ವದಂತಿಗೆ ಉತ್ತರ ನೀಡಬೇಕಿಲ್ಲ, ಸತ್ಯ ನನಗೆ ಗೊತ್ತಿದೆ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ | Tara Sutaria on Breakup Rumours Toxic Movie Actress Says I Know My Truth Peace Matters Most

Entertainment

oi-Manohara M

ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ತಾರಾ ಸುತಾರಿಯಾ (Tara Sutaria) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ನಟ ವೀರ್ ಪಹಾರಿಯಾ ಜೊತೆಗಿನ ಬ್ರೇಕಪ್‌ ವದಂತಿಗಳ ನಡುವೆ, ಮಾನಸಿಕ ಶಾಂತಿಯ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಬ್ರೇಕಪ್‌ ಬಗ್ಗೆಯೂ ತಮ್ಮದೇ ಆದ ನಿಲುವು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಎಲ್ಲೆ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತಾರಾ, “ನನ್ನ ಜೀವನದಲ್ಲಿ ನಿಜವಾದ ಯಶಸ್ಸು ಎಂದರೆ ಶಾಂತಿಯುತ ಮನಸ್ಸು, ನನ್ನನ್ನು ನಾನು ಅರಿತುಕೊಳ್ಳುವುದು ಮತ್ತು ನನ್ನನ್ನು ನಿಜವಾಗಿ ಕಾಳಜಿ ವಹಿಸುವ ಕೆಲವೇ ಜನರೊಂದಿಗೆ ಇರೋದು” ಎಂದು ಹೇಳಿದ್ದಾರೆ. ನಿರಂತರ ವದಂತಿಗಳು, ಟೀಕೆಗಳು ಮತ್ತು ಸಾಮಾಜಿಕ ಜಾಲತಾಣದ ನೆಗೆಟಿವ್‌ ಪ್ರತಿಕ್ರಿಯೆಗಳ ನಡುವೆಯೂ, ತಮ್ಮ ಮನಸ್ಸಿನ ಶಾಂತಿಯನ್ನು ರಕ್ಷಿಸಿಕೊಳ್ಳುವುದನ್ನು ಕಲಿತಿದ್ದೇನೆ ಎಂದು ಅವರು ಹೇಳಿದ್ದಾರೆ.

Tara Sutaria

ವದಂತಿಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ

ನಟಿ ತಾರಾ ಮತ್ತು ವೀರ್ ಪಹಾರಿಯಾ ಇಬ್ಬರೂ ತಮ್ಮ ಬ್ರೇಕಪ್‌ ಬಗ್ಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ, ಇಬ್ಬರೂ ವಿಭಿನ್ನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದು, ವೀರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ತಾರಾ ಕಾಣಿಸದಿರುವುದು ಬ್ರೇಕಪ್‌ ವದಂತಿಗಳಿಗೆ ಪುಷ್ಟಿ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಾರಾ, “ನಾನು ಪ್ರತಿಯೊಂದು ವದಂತಿಗೂ ಉತ್ತರ ನೀಡಬೇಕೆಂಬ ಒತ್ತಡ ಇನ್ನು ನನಗೆ ಇಲ್ಲ. ನನಗೆ ಸತ್ಯ ಗೊತ್ತು, ನನ್ನ ಹತ್ತಿರದವರಿಗೆ ಗೊತ್ತು. ಅಷ್ಟೇ ಸಾಕು” ಎಂದು ಸ್ಪಷ್ಟಪಡಿಸಿದ್ದಾರೆ.

ಶಾಂತತೆಯ ಮಾರ್ಗ ನನ್ನದು

ಆನ್‌ಲೈನ್‌ನಲ್ಲಿ ಹರಡುವ ಟೀಕೆಗಳು ಮತ್ತು ಊಹಾಪೋಹಗಳು ತಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ ತಾರಾ, ಭಾವನಾತ್ಮಕ ಸಮತೋಲನ ಮತ್ತು ಸ್ವಯಂ ಬೆಳವಣಿಗೆಯೇ ತಮ್ಮ ಆದ್ಯತೆ ಎಂದು ತಿಳಿಸಿದ್ದಾರೆ. ಶಾಂತವಾಗಿರುವುದು ಮತ್ತು ತನ್ನೊಳಗಿನ ಶಕ್ತಿಯನ್ನು ಉಳಿಸಿಕೊಳ್ಳುವುದೇ ತಾನು ಆಯ್ಕೆ ಮಾಡಿಕೊಂಡ ಮಾರ್ಗ ಎಂದು ಹೇಳಿದ್ದಾರೆ.

ವೈಯಕ್ತಿಕ ಜೀವನದ ಚರ್ಚೆಗಳ ನಡುವೆಯೂ, ತಾರಾ ಸುತಾರಿಯಾ ತಮ್ಮ ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ರೆಬೆಕಾ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಚಿತ್ರದಿಂದ ಭಾರತೀಯ ಸಿನಿರಂಗದಲ್ಲಿ ಹೊಸ ಅಧ್ಯಾಯ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಮೂಡಿದೆ. ಬ್ರೇಕಪ್‌ ವದಂತಿಗಳ ನಡುವೆಯೂ, ಮಾನಸಿಕ ಶಾಂತಿ ಮತ್ತು ವೃತ್ತಿಪರ ಬದ್ಧತೆಯ ಮೂಲಕ ಗಮನ ಸೆಳೆಯುತ್ತಿರುವ ತಾರಾ ಸುತಾರಿಯಾ, ‘ಟಾಕ್ಸಿಕ್’ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/tara-sutaria-on-breakup-rumours-toxic-movie-actress-says-i-know-my-truth-peace-matters-most-442989.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo