Kiccha Sudeep: 12 ವರ್ಷಗಳ ಬಳಿಕ ಕರ್ನಾಟಕದ ಮುಡಿಗೆ ಸಿಸಿಎಲ್‌ ಕಪ್‌; ಆ ಗಾಯ ಇನ್ನೂ ಮಾಸಿಲ್ಲ: ಕಿಚ್ಚ ಸುದೀಪ್‌ | Kiccha Sudeep Special Post About Karnataka Bulldozers Win CCL 2026 After 12 Years sacrifices

Entertainment

oi-Manohara M

12 ವರ್ಷಗಳ ಬಳಿಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ (CCL) ಕಪ್‌ ಮತ್ತೆ ಕಿಚ್ಚ ಬಾಯ್ಸ್‌ ಪಾಲಾಗಿದೆ. ಕಳೆದ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್‌ ತಂಡ ಈ ಸೀಸನ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲೂ ಅಜೇಯರಾಗಿ ಕಪ್‌ ಗೆದ್ದು ಸಂಭ್ರಮಾಚರಣೆ ನಡೆಸಿದೆ. ಈ ಗೆಲುವಿನ ಬಳಿಕ ತಂಡದ ನಾಯಕ, ನಟ ಕಿಚ್ಚ ಸುದೀಪ್‌ ಅವರು ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡು, ತಮ್ಮ ಸಂತಸ, ಹೆಮ್ಮೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

“12 ವರ್ಷಗಳ ಕಾಯುವಿಕೆ ಇಷ್ಟು ಅದ್ಭುತವಾಗಿ ಅಂತ್ಯಗೊಂಡಿದೆ. ಇದಕ್ಕಿಂತ ಒಳ್ಳೆಯ ಅಂತ್ಯ ಮತ್ತೊಂದಿಲ್ಲ” ಎಂದು ಸುದೀಪ್‌ ಬರೆದಿದ್ದಾರೆ. ತಮ್ಮ ತಂಡದ ಆಟಗಾರರನ್ನು ಹೊಗಳಿರುವ ಸುದೀಪ್‌, “ನನ್ನ ತಂಡದ ಮೇಲೆ ನನಗೆ ಅಪಾರ ಹೆಮ್ಮೆ ಇದೆ. ಈ ಬಾರಿ ಎಲ್ಲರೂ ತಮ್ಮ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ನಂಬಿಕೆ ಇಟ್ಟುಕೊಂಡು ಸಿಸಿಎಲ್‌ ಆಡಿದರು. ಅವರು ಈ ಸೀಸನ್‌ಗೆ ತಮ್ಮೆಲ್ಲವನ್ನೂ ಕೊಟ್ಟಿದ್ದಾರೆ. ಲವ್ ಯು ಬಾಯ್ಸ್‌” ಎಂದು ಮನಸಾರೆ ಶ್ಲಾಘಿಸಿದ್ದಾರೆ.

Kiccha Sudeep

ಪತ್ನಿ ಮಗಳಿಗೆ ವಿಶೇಷ ಧನ್ಯವಾದ

ತಂಡದ ಬೆಂಬಲದ ಕುರಿತು ಮಾತನಾಡಿರುವ ಸುದೀಪ್‌, ಬಹುಕಾಲದಿಂದ ತಂಡದ ಬಲವಾಗಿ ನಿಂತಿರುವ ತಮ್ಮ ಮಡದಿ ಪ್ರಿಯಾ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. “ಪ್ರತಿಯೊಂದು ಕ್ಷಣದಲ್ಲೂ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ಧನ್ಯವಾದಗಳು. ಫೈನಲ್‌ನಲ್ಲಿ ‘ಬೆಸ್ಟ್ ಎಂಟರ್ಟೈನರ್’ ಆಗಿ ನೀವು ತಂದ ಎನರ್ಜಿ ಅದ್ಭುತ” ಎಂದು ಅವರು ಬರೆದಿದ್ದಾರೆ. ಮಗಳು ಸಾನ್ವಿ ಸುದೀಪ್‌ ಅವರಿಗೂ ಧನ್ಯವಾದ ಸಲ್ಲಿಸಿರುವ ಕಿಚ್ಚ, “ನಿನ್ನದೇ ಆದ ಶೈಲಿಯಲ್ಲಿ ತಂಡಕ್ಕೆ ಚಿಯರ್‌ ಮಾಡಿದ ಕ್ಷಣಗಳು ತುಂಬಾ ವಿಶೇಷ. ನಮ್ಮ ಡ್ಯಾನ್ಸ್‌ ಮೂವ್‌ಗಳು ಮರೆಯಲಾಗದವು” ಎಂದು ಸುದೀಪ್‌ ಉಲ್ಲೇಖಿಸಿದ್ದಾರೆ.

ಪ್ರತಿಕ್ಷಣ ತಂಡವನ್ನು ಉತ್ತೇಜಿಸಿದ ಪ್ರತಿಯೊಬ್ಬರಿಗೂ ಕಿಚ್ಚ ಧನ್ಯವಾದ ಹೇಳಿದ್ದಾರೆ. “ಕಷ್ಟದ ಸಮಯಗಳಲ್ಲಿ ನಿಮ್ಮ ಹಾಜರಾತಿ ಮತ್ತು ಚಿಯರಿಂಗ್‌ ತಂಡಕ್ಕೆ ದೊಡ್ಡ ಶಕ್ತಿ. ಅದು ಸದಾ ವಿಶೇಷವಾಗಿಯೇ ಉಳಿಯುತ್ತದೆ” ಎಂದು ತಿಳಿಸಿದ್ದಾರೆ.

ತಂಡದ ಮೇಲೆ ನಂಬಿಕೆ ಇಟ್ಟುಕೊಂಡ ಅಶೋಕ್ ಖೇಣಿ ಅವರಿಗೆ ಧನ್ಯವಾದ ಹೇಳಿರುವ ಸುದೀಪ್‌, “ನಿಮ್ಮ ಕಾಯುವಿಕೆಯೂ ಇಂದಿಗೆ ಮುಗಿದಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸಿಸಿಎಲ್‌ ಮೂಲಕ ವಿಭಿನ್ನ ಚಿತ್ರರಂಗಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಂತೋಷ ತಂದಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

ವಾರ ಕಳೆದರೂ ಗಾಯಗಳು ಉಳಿದಿವೆ

ಪೋಸ್ಟ್‌ನ ಕೊನೆಯಲ್ಲಿ ಸುದೀಪ್‌ ಭಾವನಾತ್ಮಕವಾಗಿ, “ಒಂದು ವಾರ ಕಳೆದರೂ ಇನ್ನೂ ಗಾಯಗಳು ಮತ್ತು ನೋವುಗಳು ನಾವು ಗುರಿಯತ್ತ ತಲುಪಲು ಎಷ್ಟು ಹೋರಾಡಿದ್ದೇವೆ ಎಂಬ ಪ್ರತಿಕ್ಷಣವನ್ನು ನೆನಪಿಸುತ್ತಿವೆ” ಎಂದು ಬರೆದು, #CCL2026 🏆 ಹ್ಯಾಷ್‌ಟ್ಯಾಗ್‌ನೊಂದಿಗೆ ತಮ್ಮ ಪೋಸ್ಟ್‌ಗೆ ತೆರೆ ಎಳೆದಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳು ಕರ್ನಾಟಕ ಬುಲ್ಡೋಜರ್ಸ್‌ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kiccha-sudeep-special-post-about-karnataka-bulldozers-win-ccl-2026-after-12-years-sacrifices-443003.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo