
Sports
oi-Madhusudhan KR
India vs Pakistan T20 World Cup: ಟಿ20 ವಿಶ್ವಕಪ್ ಬಹಿಷ್ಕಾರ ವಿವಾದದ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಟ್ಟಿದ್ದ ಪ್ರಮುಖ ಬೇಡಿಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿರಸ್ಕರಿಸಿದೆ. ಭಾರತ ತಂಡದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸುವಂತೆ ಪಿಸಿಬಿ ಒತ್ತಾಯಿಸಿತ್ತು. ಆದರೆ, ಈ ವಿಚಾರದಲ್ಲಿ ತಮಗೆ ಯಾವುದೇ ಅಧಿಕಾರವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಬೇಡಿಕೆಗಳು ಯಾವುವು?: 2026ರ ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಆಡಬೇಕೇ ಬೇಡವೇ ಎಂಬ ಪ್ರಶ್ನೆ ಮೇಲೆ ಬಿಕ್ಕಟ್ಟು ಉಂಟಾದ ಬಳಿಕ, ಪಿಸಿಬಿ ಐಸಿಸಿಯ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿತ್ತು. ಅದರಲ್ಲೂ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಪುನರಾರಂಭ, ಭಾರತ-ಬಾಂಗ್ಲಾದೇಶ-ಪಾಕಿಸ್ತಾನ ತ್ರಿಕೋನ ಸರಣಿ ಆಯೋಜನೆ ಹಾಗೂ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡವನ್ನು ಮನವಿ ಮಾಡುವುದೂ ಸೇರಿತ್ತು.

ಆದರೆ, ಐಸಿಸಿ, ಭಾರತ ತಂಡದ ದ್ವಿಪಕ್ಷೀಯ ಸರಣಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಬಿಸಿಸಿಐ ಹಾಗೂ ಭಾರತ ಸರ್ಕಾರದ ಬಳಿ ಮಾತ್ರವಿದೆ. ಈ ಹಿನ್ನೆಲೆ ಪಿಸಿಬಿಯ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಲಾಹೋರ್ನಲ್ಲಿ ನಡೆದ ಸಭೆಯ ಬಳಿಕ, ಫೆಬ್ರವರಿ 15ರಂದು ನಡೆಯಬೇಕಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದೇ ಇಲ್ಲವೇ ಎಂಬ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ ಪಿಸಿಬಿಗೆ ಸಮಯಾವಕಾಶ ನೀಡಿದೆ.
ಶೀಘ್ರದಲ್ಲೇ ನಿರ್ಧಾರ ಪ್ರಕಟ ಸಾಧ್ಯತೆ: ಇದರ ನಡುವೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸಭೆಯ ನಂತರ, ಫೆಬ್ರವರಿ 9ರ ತಡರಾತ್ರಿ ಅಥವಾ ಫೆಬ್ರವರಿ 10ರ ಮಂಗಳವಾರ ಬೆಳಗ್ಗೆ ಪಾಕಿಸ್ತಾನದ ನಿರ್ಧಾರಗಳು ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳು ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಬಗ್ಗೆ ಕುತೂಹಲ ಹೆಚ್ಚಿಸಿರುವಂತೆಯೇ, ಕ್ರಿಕೆಟ್ ಜಗತ್ತಿನ ಗಮನವನ್ನು ಸೆಳೆದಿವೆ.
ಪಿಸಿಬಿ ಬೇಡಿಕೆಗಳು
* ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗಳನ್ನು ಪುನರಾರಂಭ ಮಾಡಬೇಕು.
* ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ತ್ರಿಕೋನ ಸರಣಿ ಆಯೋಜನೆ ಮಾಬೇಕು
* ಭಾರತ ತಂಡಕ್ಕೆ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಅವಕಾಶ ನೀಡಬೇಕು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/icc-rejects-pcb-demand-for-resuming-bilateral-series-with-india-amid-t20-world-cup-2026-dispute-443143.html. xn--babytilbehr-pgb.com does not claim ownership of this content. All rights remain with the original publisher.
