ARAI: ಮಂಡ್ಯದಲ್ಲಿ 100 ಎಕರೆ ಭೂಮಿ ಲಭ್ಯವಿದ್ದು ಪರಿಶೀಲನೆಗೆ ಬನ್ನಿ: ಎಚ್‌ಡಿಕೆಗೆ ಎಂಬಿ ಪಾಟೀಲ್ ಪತ್ರ | Mandya Infrastructure Hub: 100 Acres Identified for ARAI Testing Plant; MB Patil Responds to HDK

Karnataka

oi-Shankrappa Parangi

ಮಂಡ್ಯ: ಜಿಲ್ಲೆಯಲ್ಲಿ ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ ನಿರ್ಮಾಣಕ್ಕೆ ಜಾಗ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ 100ಕ್ಕೂ ಅಧಿಕ ಎಕರೆ ಭೂಮಿ ಲಭ್ಯವಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ಪತ್ರ ಬರೆದಿದ್ದಾರೆ.

ತಾವು ಮಂಡ್ಯ ಜಿಲ್ಲೆಯಲ್ಲಿ ಅಪೇಕ್ಷಿಸಿದ್ದ 100 ಎಕರೆ ಜಮೀನು ಲಭ್ಯವಿದೆ. ಈ ಸಂಬಂಧ ಭಾರತೀಯ ಆಟೋಮೋಟೀವ್ ಸಂಶೋಧನಾ ಒಕ್ಕೂಟಕ್ಕೆ (ಎ.ಆರ್.ಎ.ಐ) ಸೂಕ್ತ ನಿರ್ದೇಶನ ನೀಡಿ, ಯೋಜನಾ ಪ್ರಸ್ತಾವನೆ ಕಳುಹಿಸಿಕೊಡಲು ಸೂಚಿಸಬೇಕು ಎಂದು ಪತ್ರದಲ್ಲಿ ಎಂಬಿ ಪಾಟೀಲರು ತಿಳಿಸಿದ್ದಾರೆ.

Mandya Infrastructure Hub

ಕುಮಾರಸ್ವಾಮಿ ಅವರು ಈ ಸಂಬಂಧವಾಗಿ ಜನವರಿ 8 ರಂದು ಬರೆದಿದ್ದ ಪತ್ರಕ್ಕೆ ಸೋಮವಾರ ಉತ್ತರಿಸಿರುವ ಪಾಟೀಲರು, ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಿತಿಹಳ್ಳಿ ವ್ಯಾಪ್ತಿಯಲ್ಲಿ 105 ಎಕರೆ ಸರಕಾರಿ ಭೂಮಿ ಲಭ್ಯವಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಭೂಮಿಯು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ ಕೇವಲ 500 ಮೀಟರ್ ದೂರದಲ್ಲಿದೆ ಎಂದರು.

ಜಾಗ ಪರಿಶೀಲನೆ ನಡೆಸಲು ಆಹ್ವಾನ

ಉದ್ದೇಶಿತ ಸ್ಥಾವರ ಸ್ಥಾಪಿಸಲು ನೀವು ಕೇಳಿದ್ದಕ್ಕಿಂತ ಹೆಚ್ಚಿನ ಭೂಮಿ ಇದೆ. ಆದ್ದರಿಂದ ಎ.ಆರ್.ಎ.ಐ. ಪ್ರತಿನಿಧಿಗಳು ಮತ್ತು ನಿಮ್ಮ ಸಚಿವಾಲಯದ ತಂಡ ಎರಡೂ ರಾಜ್ಯಕ್ಕೆ ಭೇಟಿ ನೀಡಬೇಕು. ಈ ಭೂಮಿಯು ತಮಗೆ ಸೂಕ್ತವಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಜಂಟಿ ಪರಿಶೀಲನೆ ನಡೆಸುವಂತೆ ತ್ವರಿತವಾಗಿ ಸೂಚಿಸಬೇಕು. ಇದು ಸೂಕ್ತವಾಗಿದೆ ಎನಿಸಿದರೆ, ನಂತರ ಇದನ್ನು ಉದ್ದೇಶಿತ ಸ್ಥಾವರ ಸ್ಥಾಪನೆಗೆ ಮಂಜೂರು ಮಾಡಲಾಗುವುದು. ಈ ಸಂಬಂಧವಾಗಿ ಎ.ಆರ್.ಎ.ಐ. ಒಕ್ಕೂಟವು ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರೊಂದಿಗೆ ನೇರವಾಗಿ ವ್ಯವಹರಿಸಬಹುದು ಎಂದು ಪಾಟೀಲರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಪ್ರಮುಖಾಂಶಗಳು

* ಯೋಜನೆ: ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ

* ಸ್ಥಳ: ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ (ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಗೆ ಕೇವಲ 500 ಮೀ. ದೂರ).

* ಭೂಮಿ: ಕೇಂದ್ರ ಕೇಳಿದ್ದು 100 ಎಕರೆ, ರಾಜ್ಯ ಸರ್ಕಾರ 105 ಎಕರೆ ಭೂಮಿ ನೀಡಲು ಸಿದ್ಧ

* ಹೂಡಿಕೆ: ₹500 ಕೋಟಿ ವೆಚ್ಚದ ಅತಿ ಆಧುನಿಕ ಟೆಸ್ಟಿಂಗ್, ವ್ಯಾಲಿಡೇಶನ್ ಮತ್ತು ಪ್ರಮಾಣೀಕರಣ ಕೇಂದ್ರ

* ಮಂಡ್ಯ ಜಿಲ್ಲೆಯ ಅಭಿವೃದ್ಧಿಯಲ್ಲಿ ಇದೊಂದು ಮೈಲಿಗಲ್ಲು!

* ವಿಶೇಷತೆ: ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣ ಕ್ಷೇತ್ರಕ್ಕೆ ದೇಶದಲ್ಲೇ ಮೊದಲ ಸಮರ್ಪಿತ ಕೇಂದ್ರ ಇದಾಗಲಿದೆ.

* ಕೇಂದ್ರದ ತಂಡ ಹಾಗೂ ARAI ಪ್ರತಿನಿಧಿಗಳು ತಕ್ಷಣವೇ ಜಂಟಿ ಪರಿಶೀಲನೆ ನಡೆಸಲು ಆಹ್ವಾನ

* ವಿಶ್ವಮಟ್ಟದ ಮೂಲಸೌಕರ್ಯ ಹಾಗೂ ಉತ್ಪಾದನಾ ಶಕ್ತಿಯನ್ನು ಬಲಪಡಿಸಲು ನಮ್ಮ ಸರ್ಕಾರ ಬದ್ಧ


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mandya-infrastructure-hub-100-acres-identified-for-arai-testing-plant-mb-patil-responds-to-hdk-443195.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo