ನಮ್ಮ ಲಿಂಗಾಯತ ಸಮುದಾಯ ಬಿಟ್ಟು ಏನು ಬೇಕಾದ್ರೂ ತಿಂದ್ಕೋ: ನಟ ಡಾಲಿ ವಿರುದ್ಧ ಮತ್ತೆ ಟೀಕೆ | Dali Dhananjay Faces Fresh Criticism Over Biryani Food Choice Lingayat Community Debate Rekindled

Entertainment

oi-Manohara M

ನಟ ಡಾಲಿ ಧನಂಜಯ್‌ ಬಿರಿಯಾನಿ ತಿಂದಿದ್ದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಬಳಿಕ ಇದು ಜಾತಿ ಸ್ವರೂಪ ಪಡೆದುಕೊಂಡು ಲಿಂಗಾಯತರು ಮಾಂಸ ತಿಂತಾರಾ? ಎನ್ನುವ ಪ್ರಶ್ನೆಯೊಂದಿಗೆ ಭಾರೀ ಚರ್ಚೆಯಾಗಿತ್ತು. ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಾಲಿ ನನ್ನ ಆಹಾರ, ನನ್ನಿಷ್ಟ, ಅದು ನನ್ನ ಆಯ್ಕೆ. ಆದರೆ ಈ ವಿಚಾರಕ್ಕೆ ಲಿಂಗಾಯತ ಸಮುದಾಯವನ್ನು ಎಳೆದು ತಂದಿದ್ದು ತಪ್ಪು ಎಂದು ಖಂಡಿಸಿದ್ದರು. ಆದರೂ ಡಾಲಿ ಮೇಲೆ ಟೀಕೆಗಳು ಮುಂದುವರಿದಿವೆ. ಇದೀಗ “ನಮ್ಮ ಲಿಂಗಾಯತ ಸಮುದಾಯ ಬಿಟ್ಟು, ಏನು ಬೇಕಾದ್ರೂ ತಿಂದ್ಕೋ” ಎಂದು ಮತ್ತೆ ಚರ್ಚೆ ಶುರುವಾಗಿದೆ.

ನಟ ಡಾಲಿ ಧನಂಜಯ್ ಅವರು ಬಿರಿಯಾನಿ ಸೇವಿಸುತ್ತಿರುವ ವೀಡಿಯೋ ಕೇವಲ ವೈಯಕ್ತಿಕ ಆಹಾರ ವಿಚಾರವಾಗಿಯೇ ಉಳಿಯದೆ, ಜಾತಿ ಮತ್ತು ಧಾರ್ಮಿಕ ಗುರುತಿನ ಚರ್ಚೆಯಾಗಿ ಮಾರ್ಪಟ್ಟಿದೆ. ಈ ವೀಡಿಯೋ ವೈರಲ್ ಆದ ಬಳಿಕ “ಲಿಂಗಾಯತರು ಮಾಂಸ ತಿನ್ನುತ್ತಾರಾ?” ಎಂಬ ಪ್ರಶ್ನೆಯೊಂದಿಗೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Dali Dhananjay

ಲಿಂಗಾಯತರನ್ನ ಎಳೆದುತಂದಿದ್ದು ತಪ್ಪು ಎಂದ ಡಾಲಿ

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಡಾಲಿ ಧನಂಜಯ್, “ನನ್ನ ಆಹಾರ, ನನ್ನ ಇಷ್ಟ. ಅದು ನನ್ನ ವೈಯಕ್ತಿಕ ಆಯ್ಕೆ. ಆದರೆ ಈ ವಿಚಾರಕ್ಕೆ ಲಿಂಗಾಯತ ಸಮುದಾಯವನ್ನು ಎಳೆದು ತರುವುದು ತಪ್ಪು. ನಾನು ಈ ಹಿಂದೆಯೂ ಬಿರಿಯಾನಿ ತಿಂದಿದ್ದೇನೆ. ನನಗೆ ಬಿರಿಯಾನಿಯೂ ಇಷ್ಟ, ಮನೆಯ ಪುಳಿಯೋಗರೆಯೂ ಇಷ್ಟ. ನನ್ನ ಊಟ, ನನ್ನ ಚಟ ಎಲ್ಲವೂ ನನ್ನಿಷ್ಟ, ಈ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆಹಾರ ಪದ್ಧತಿಯನ್ನು ವ್ಯಕ್ತಿಯ ಆಯ್ಕೆಯಾಗಿ ನೋಡಬೇಕು, ಅದನ್ನು ಸಮುದಾಯ ಅಥವಾ ಜಾತಿಯೊಂದಿಗೆ ಜೋಡಿಸುವುದು ಅನಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಡಾಲಿ ಪರವಾಗಿ ಮಾತನಾಡಿದ ಅನೇಕ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು, “ಆಹಾರ ತಿನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು” “ಯಾವ ನಟ ಏನು ತಿನ್ನಬೇಕು ಎಂದು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರು. ವ್ಯಕ್ತಿಯ ಖಾಸಗಿ ಜೀವನವನ್ನು ಗೌರವಿಸಬೇಕು ಎಂಬ ಧ್ವನಿಯೂ ಬಲವಾಗಿತ್ತು.

ಲಿಂಗಾಯತ ಸಮುದಾಯಕ್ಕೆ ನೀನು ಮಾಡಿದ ಅವಮಾನ

ಡಾಲಿ ಸ್ಪಷ್ಟನೆ ನೀಡಿದ ಬಳಿಕವೂ, ಅವರ ವಿರುದ್ಧದ ಟೀಕೆಗಳು ನಿಂತಿಲ್ಲ. ಇತ್ತೀಚೆಗೆ ಡಾಲಿ ನೀಡಿರುವ ಹೇಳಿಕೆ ಹಂಚಿಕೊಂಡಿರುವ “🚩ಸಭ್ಯಸ್ಥ 🚩 (ಹಿಂದೂ ಜಾಗ್ರತನಾಗು)🚩” ಎಂಬ ಎಕ್ಸ್ (ಟ್ವಿಟರ್) ಖಾತೆಯ ಪೋಸ್ಟ್‌, ಮತ್ತೆ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟ್‌ನಲ್ಲಿ, “ನೀನು ನಮ್ಮ ಲಿಂಗಾಯತ ಸಮುದಾಯ ಬಿಟ್ಟು, ಏನು ಬೇಕಾದ್ರೂ ತಿಂದ್ಕೋ. ನಮ್ಮ ಲಿಂಗಾಯತ ಸಮುದಾಯದಲ್ಲಿದ್ದು ಮಾಂಸ ತಿಂದ್ರೆ, ಅದು ಲಿಂಗಾಯತ ಸಮುದಾಯಕ್ಕೆ ನೀನು ಮಾಡಿದ ಅವಮಾನ” ಎಂದು ಟೀಕಿಸಲಾಗಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು “ಮಾಂಸ ತಿನ್ನುವ ಪ್ರತಿಯೊಬ್ಬನನ್ನು ಲಿಂಗಾಯತ ಧರ್ಮದಿಂದ, ಬಿಜೆಪಿಯಿಂದ, ಆರೆಸ್ಸೆಸ್‌ನಿಂದ, ಹಿಂದೂ ಧರ್ಮದಿಂದ ಹೊರಹಾಕು, ಇದು ಒಳ್ಳೆಯ ಕೆಲ್ಸ” ಎಂದಿದ್ದಾರೆ.

ಈ ಪೋಸ್ಟ್‌ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಲಿಂಗಾಯತ ಸಮುದಾಯದ ಆಹಾರ ಪದ್ಧತಿ, ವೈಯಕ್ತಿಕ ಸ್ವಾತಂತ್ರ್ಯ, ಧರ್ಮ ಕುರಿತ ಚರ್ಚೆಗಳು ಭುಗಿಲೆದ್ದಿವೆ. ಕೆಲವರು ಈ ರೀತಿಯ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರೆ, ಇನ್ನೂ ಕೆಲವರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ವಿವಾದವು ಆಹಾರ ಪದ್ಧತಿ ವೈಯಕ್ತಿಕ ಹಕ್ಕೇ ಅಥವಾ ಸಮುದಾಯ ಗುರುತಿನ ಭಾಗವೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ವ್ಯಕ್ತಿಗಳ ಖಾಸಗಿ ಜೀವನವೂ ಸಾರ್ವಜನಿಕ ಚರ್ಚೆಯ ವಿಷಯವಾಗುತ್ತಿರುವ ಇಂದಿನ ಸಾಮಾಜಿಕ ಜಾಲತಾಣ ಸಂಸ್ಕೃತಿಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈ ಪೋಸ್ಟ್‌ ಬಗ್ಗೆ ನಟ ಡಾಲಿ ಧನಂಜಯ್ ಮತ್ತಷ್ಟು ಪ್ರತಿಕ್ರಿಯೆ ನೀಡುವರೇ ಎಂಬುದು ಕಾದು ನೋಡಬೇಕಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dali-dhananjay-faces-fresh-criticism-over-biryani-food-choice-lingayat-community-debate-rekindled-442261.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo