
Entertainment
oi-Manohara M
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic teaser) ಸಿನಿಮಾದ ಟೀಸರ್ ಭಾರೀ ಟೀಕೆಗಳಿಗೆ ಗುರಿಯಾಗಿದ್ದು ಗೊತ್ತೇ ಇದೆ. ಟೀಸರ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೇರವಾಗಿ ಮಾತನಾಡಿದ್ದಾರೆ. ಸಿನಿಮಾ, ರಾಜಕೀಯ ಹಾಗೂ ತಂತ್ರಜ್ಞಾನ ಕುರಿತಂತೆ ಮಾತನಾಡಿದ ಅನುರಾಗ್, ‘ಟಾಕ್ಸಿಕ್’ ಟೀಸರ್‌ಗೆ ಎದುರಾದ ವಿರೋಧದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ ಅನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಪ್ರಶಂಸಿಸಿದ್ದಾರೆ.
ಇದು ಸಮಾಜದ ದ್ವಂದ್ವ
ನಟ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಟೀಸರ್‌ನಲ್ಲಿ ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಅನುರಾಗ್ ಕಶ್ಯಪ್ ಈ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವನ್ನು ಅವರು ಸಮಾಜದ “ಸಾಂಸ್ಕೃತಿಕ ದ್ವಂದ್ವ ಮತ್ತು ಕಪಟ ನೈತಿಕತೆ” ಎಂದು ಕರೆದಿದ್ದಾರೆ.

“ನಟರು ಪರದೆಯ ಮೇಲೆ ಶರ್ಟ್ ಇಲ್ಲದೆ ಕಾಣಿಸಿಕೊಂಡಾಗ ಅಥವಾ ಅತಿಯಾದ ಪುರುಷತ್ವ ಪ್ರದರ್ಶಿಸಿದಾಗ ಅದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಮಾತ್ರ ಅದನ್ನು ಸಮಾಜ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಇದುವೇ ನಮ್ಮ ಸಾಂಸ್ಕೃತಿಕ ದ್ವಂದ್ವವನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದ್ದಾರೆ.
ಟೀಸರ್ ವಿವಾದಕ್ಕೆ ಕಾರಣವೇನು?
‘ಟಾಕ್ಸಿಕ್’ ಟೀಸರ್‌ನಲ್ಲಿ ಯಶ್ ಪಾತ್ರವನ್ನು ಸ್ಮಶಾನದ ಪ್ರದೇಶದಲ್ಲಿ ಹಸಿಬಿಸಿ ದೃಶ್ಯಗಳ ಮೂಲಕ ಪರಿಚಯಿಸಲಾಗಿದೆ. ಆದರೆ ಅದಕ್ಕೂ ಮೊದಲು, ಕಾರಿನಲ್ಲಿ ಲೈಂಗಿಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಅನೇಕರು ಈ ದೃಶ್ಯ ಅನಾವಶ್ಯಕ ಎಂದು ಕರೆದಿದ್ದರು. ಆದರೆ ಸಿನಿಮಾ ಪ್ರಿಯರು ಮಾತ್ರ ಇದನ್ನು ಕೊಂಡಾಡಿದ್ದರು. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ವಿದೇಶಿ ನಟಿ ಬಿಯಾಟ್ರಿಸ್ ಟಾಫೆನ್‌ಬಾಚ್ ವಿರುದ್ಧವೂ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ನಡೆದಿತ್ತು. ತೀವ್ರ ವಿರೋಧದ ಹಿನ್ನೆಲೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಡಿಲೀಟ್ ಕೂಡ ಮಾಡಿದ್ದರು. ಈ ವಿವಾದಕ್ಕೆ ಮಹಿಳಾ ಆಯೋಗ ಕೂಡ ಟೀಕೆ ವ್ಯಕ್ತಪಡಿಸಿತ್ತು.
‘ಟಾಕ್ಸಿಕ್’ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಯಶ್ ಹಾಗೂ ಗೀತು ಮೋಹನ್‌ದಾಸ್ ಒಟ್ಟಾಗಿ ಬರೆದಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
-

Radhika Pandit: ಮಗ ಯಥರ್ವ್ಗೆ ‘ಬೊಂಬೆ ಮಿಠಾಯಿ’ ಕೊಡಿಸಿ ತನ್ನ ಬಾಲ್ಯ ನೆನೆದ ರಾಧಿಕಾ ಪಂಡಿತ್
-

ಅವಾಚ್ಯ ಪದಗಳಿಂದ ನಿಂದನೆ; ಕನಕಪುರ ಶ್ರೀನಿವಾಸ್ ವಿರುದ್ಧ ಫಿಲ್ಮ್ ಚೇಂಬರ್ಗೆ ನಿರ್ದೇಶಕ ಪ್ರೇಮ್ ದೂರು
-

Tara Sutaria: ಬ್ರೇಕಪ್ ವದಂತಿಗೆ ಉತ್ತರ ನೀಡಬೇಕಿಲ್ಲ, ಸತ್ಯ ನನಗೆ ಗೊತ್ತಿದೆ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ
-

Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
-

ಫೆಬ್ರವರಿ 7 ದಿನ ಭವಿಷ್ಯ: ಎಲ್ಲಾ ರಾಶಿಯವರ ಉದ್ಯೋಗ, ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಂಪೂರ್ಣ ಭವಿಷ್ಯ ತಿಳಿಯಿರಿ
-

Karnataka Heat Wave: ರಾಜ್ಯದಲ್ಲಿ ಫೆಬ್ರವರಿ ಅಂತ್ಯಕ್ಕೆ ಶಾಖದ ಅಲೆ ವಾತಾವರಣ ನಿರೀಕ್ಷೆ, 7 ದಿನದ ಮುನ್ಸೂಚನೆ
-

Bengaluru Rail Project: ಉಪನಗರ ರೈಲು ಕಾರಿಡಾರ್-3 ‘ಪಾರಿಜಾತ’ಗೆ ಅನುಮೋದನೆ, ವೈಟ್ಫಿಲ್ಡ್-ಕೆಂಗೇರಿಗೆ ಸಂಪರ್ಕ
-

Namma Metro: ಮೆಟ್ರೋ ದರ ಹೆಚ್ಚಳದಲ್ಲಿ ಸರ್ಕಾರ ಪಾತ್ರ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ
-

Krishi Thapanda: ನಿರ್ಮಾಪಕನಿಗೆ ಬ್ಲಾಕ್ಮೇಲ್ ಪ್ರಕರಣ: ನಟಿ ಕೃಷಿ ತಾಪಂಡಗೆ ಪೊಲೀಸರಿಂದ ನೋಟಿಸ್
-

SSLC Exam: 625 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನಗದು ಬಹುಮಾನ: ಚನ್ನಗಿರಿ ಶಾಸಕ ಘೋಷಣೆ
-

ಭಾರತಕ್ಕೆ ಭರ್ಜರಿ ಲಾಭ, ಅಮೆರಿಕ ಜೊತೆಗಿನ ಒಪ್ಪಂದದ ಪರಿಣಾಮ ಭರ್ಜರಿ ಲಾಟರಿ… India And America
-

DEMU Rail: ದಾಂಡೇಲಿ-ಅಳ್ನಾವರ ಮಧ್ಯ ಡೆಮು ರೈಲುಗಳ ಸೇವೆ ಆರಂಭ, ವೇಳಾಪಟ್ಟಿ, ಸಂಚಾರ ವಿವರ
-

ಅಂಡರ್ 19 ವಿಶ್ವಕಪ್ ಫೈನಲ್ನಲ್ಲಿ 15 ಸಿಕ್ಸ್, 15 ಬೌಂಡರಿ ಬಾರಿಸಿ ದಾಖಲೆ ಬರೆದ 16 ವರ್ಷದ ವೈಭವ್ ಸೂರ್ಯವಂಶಿ ಯಾರು ಗೊತ್ತಾ?
-

ತಾಯಿಯಾಗುವುದು ಹೆಣ್ಣಿನ ಹಕ್ಕು, ಒತ್ತಾಯ ಸಲ್ಲದು: 30ನೇ ವಾರದಲ್ಲಿಯೂ ಗರ್ಭಪಾತಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್
-

ಗಿಲ್ಲಿ ಮೇಲೆ ಸಿನಿಮಾ ಪ್ರಚಾರಕ್ಕೆ ಬಾರದ ಆರೋಪ; ವೈರಲ್ ಆಯ್ತು ಪ್ರಮೋಷನ್ ಮಾಡಿರುವ ಹಳೆಯ ವಿಡಿಯೋ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/toxic-teaser-is-a-bold-attempt-director-anurag-kashyap-praises-intense-visuals-in-yash-movie-442211.html. xn--babytilbehr-pgb.com does not claim ownership of this content. All rights remain with the original publisher.
