
India
oi-Malathesha M
ದೂರದರ್ಶನ ಎಂಬುದು ಭಾರತೀಯರ ಭಾವನೆ ಜೊತೆಗೆ ಬೆರೆತು ಹೋಗಿದ್ದು, ಹತ್ತಾರು ವರ್ಷಗಳಿಂದಲೂ ದೂರದರ್ಶನಕ್ಕೆ ಗೌರವ ತೋರುತ್ತಾ ಹಾಗೂ ಪ್ರೀತಿ ಕೊಡುತ್ತಾ ಬಂದಿದ್ದಾರೆ ಶತಕೋಟಿ ಭಾರತೀಯರು. ಈಗಿನ ಆಧುನಿಕ ಕಾಲಘಟ್ಟದಲ್ಲಿ ಸಾವಿರಾರು ಟಿವಿ ಚಾನಲ್ ಶುರುವಾಗಿದ್ದರೂ, ಕೆಲವು ದಶಕದ ಹಿಂದೆ ಎಲ್ಲರಿಗೂ ಆಸರೆ ಆಗಿದ್ದೇ ದೂರದರ್ಶನ. ಹೀಗಿದ್ದಾಗ ದೂರದರ್ಶನ ಮೂಲಕ ವಾರ್ತೆ ಓದಲು ಬರುತ್ತಿದ್ದ ನ್ಯೂಸ್ ಆಂಕರ್ಗಳಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದರು. ಅವರನ್ನು ಜನರು ಈಗಲೂ ಮರೆತಿಲ್ಲ, ಮುಂದೆ ಕೂಡ ಮರೆಯಲ್ಲ. ಹೀಗಿದ್ದಾಗ ದೂರದರ್ಶನದ ಖ್ಯಾತ ಹಾಗೂ ಮಾಜಿ ನ್ಯೂಸ್ ಆಂಕರ್ ಕೋಟಿ ಕೋಟಿ ಅಭಿಮಾನಿಗಳನ್ನು ಇಂದು ಅಲಿದ್ದಾರೆ.
ಅದು 1976 ಅಂದರೆ ಸರಿಯಾಗಿ 40 ವರ್ಷಗಳ ಹಿಂದೆ ಜನಪ್ರಿಯ ನಿರೂಪಕಿಯೊಬ್ಬರ ಆಗಮನ ಆಗಿತ್ತು. ಆಗಿನ್ನೂ ದೂರದರ್ಶನಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಎಂಟ್ರಿ ಕೊಟ್ಟವರು, ಮುಂದೆ ವಾರ್ತಾ ವಾಚಕಿ ಎಂದರೆ ನ್ಯೂಸ್ ಆಂಕರ್ ಆಗಿ ಇಡೀ ಇಂಡಿಯಾ ತಿರುಗಿ ನೋಡುವಂತೆ ಗಮನ ಸೆಳೆದರು. ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ಹೀಗೆ ಸುಮಾರು 3 ದಶಕ ಎಂದರೆ, 30 ವರ್ಷಗಳ ಕಾಲ ದೂರದರ್ಶನಕ್ಕೆ ಸೇವೆ ಸಲ್ಲಿಸಿ ಭಾರತೀಯರ ಮನಸ್ಸು ಗೆದ್ದರು. ಆದರೆ ಇಂದು ಅವರು ತಮ್ಮ ಅಭಿಮಾನಿಗಳನ್ನು ಅಗಲಿದ್ದು, ನಿರೂಪಕಿ ಸರಳ ಮಹೇಶ್ವರಿ ಅವರು ಇದೀಗ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಭಾರತೀಯರ ನೆಚ್ಚಿನ ನಿರೂಪಕಿ ಸರಳ ಮಹೇಶ್ವರಿ
ದೂರದರ್ಶನ ನ್ಯೂಸ್ ಎಂದರೆ ಆಗಿನ ಕಾಲದಲ್ಲಿ ಎಲ್ಲಾ ಕೆಲಸ ಬಿಟ್ಟು ಟಿವಿ ಎದುರು ಕೂರುವ ಕೋಟಿ ಕೋಟಿ ಜನರು ಇದ್ದರು. ಏಕೆಂದರೆ ಸುದ್ದಿ ತಿಳಿಯಲು ಆಗ ಇದ್ದ ಒಂದೇ ಒಂದು ಚಾನಲ್ ಎಂದರೆ ಅದು ದೂರದರ್ಶನ ಮಾತ್ರ. ಹೀಗಿದ್ದಾಗ ದೂರದರ್ಶನದ ತೆರೆ ಮೇಲೆ ನಿರೂಪಕಿ ಸರಳ ಮಹೇಶ್ವರಿ ಅವರು ನ್ಯೂಸ್ ಓದುತ್ತಿದ್ದರೆ, ಭಾರತೀಯರು ಕಣ್ಣು ಮಿಟುಕಿಸದೆ ನೋಡುತ್ತಿದ್ದ ಸಮಯ ಇತ್ತು. ಸುದ್ದಿಗೆ ಸೊಬಗು ಮತ್ತು ಸರಳತೆ ತುಂಬುವ ಜೊತೆಯಲ್ಲೇ ಜೀವಂತಿಕೆ ಕೊಡುತ್ತಿದ್ದರು ಸರಳ ಮಹೇಶ್ವರಿ ಅವರು.
दूरदर्शन परिवार की ओर से श्रीमती सरला माहेश्वरी को भावपूर्ण श्रद्धांजलि। वह दूरदर्शन की सम्मानित और प्रतिष्ठित समाचार वाचिका थीं, जिन्होंने अपनी सौम्य आवाज़, सटीक उच्चारण और गरिमापूर्ण प्रस्तुति से भारतीय समाचार जगत में विशेष स्थान बनाया। उनकी सादगी, संयम और व्यक्तित्व ने दर्शकों… pic.twitter.com/Hx8glZI7rk
— Doordarshan National दूरदर्शन नेशनल (@DDNational) February 12, 2026
ಈ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿದ್ದರು. ಹಾಗೇ ಇಂದಿಗೂ ನಿರೂಪಕಿ ಸರಳ ಮಹೇಶ್ವರಿ ಅವರ ಹಳೆಯ & ನ್ಯೂಸ್ ಓದುವ ವಿಡಿಯೋಗಳು, ಆಗಾಗ ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗುತ್ತಿದ್ದವು. ಆದರೆ ಇಂದು ಅವರು ನಿಧನರಾಗಿದ್ದು ಭಾರತೀಯರು ಕಂಬನಿ ಮಿಡಿದು & ಸಂತಾಪ ಸೂಚಿಸಿದ್ದಾರೆ. ಅಲ್ಲದೇ ವಿದೇಶದಲ್ಲೂ ಅಪಾರ ಖ್ಯಾತಿ ಗಳಿಸಿರುವ ನಿರೂಪಕಿ ಸರಳ ಮಹೇಶ್ವರಿ ಅವರಿಗೆ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
I feel utmost grief in announcing the sad demise of my ex co-News anchor at Doordarshan, Sarala Maheshwari 🙏
She was the embodiment of grace and courtesy.
Beautiful not just in appearance but even more so at heart, she had a remarkable command over language and was a reservoir… pic.twitter.com/VIX8khALBC— Shammi Narang (@iamshamminarang) February 12, 2026
Disclaimer: This content was automatically imported from a third-party source via RSS feed. The original source is: https://kannada.oneindia.com/news/india/sarla-maheshwari-is-no-more-and-this-is-how-fans-are-tributing-to-the-veteran-doordarshan-anchor-443455.html. xn--babytilbehr-pgb.com does not claim ownership of this content. All rights remain with the original publisher.
