
Entertainment
oi-Manohara M
Rashmika Mandanna wedding: ದಕ್ಷಿಣ ಭಾರತದ ಸಿನಿರಂಗದಲ್ಲಿ ಕಳೆದ ಕೆಲವು ವಾರಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ಇಬ್ಬರೂ ತಮ್ಮ ಸಂಬಂಧದ ಕುರಿತು ಸಾರ್ವಜನಿಕವಾಗಿ ಹೆಚ್ಚು ಮಾತನಾಡದೇ ಮೌನ ವಹಿಸಿದ್ದರೂ, ಫೆಬ್ರವರಿ ಕೊನೆಯ ವಾರದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯಲಿದೆ ಎಂಬ ವರದಿಗಳು ಸದ್ದು ಮಾಡುತ್ತಿವೆ. ಇದರ ನಡುವೆ ಪ್ರಮುಖ ಓಟಿಟಿ (OTT) ವೇದಿಕೆಯೊಂದು ಈ ಜೋಡಿಯನ್ನು ಸಂಪರ್ಕಿಸಿ ಮದುವೆಯ ವಿಶೇಷ ವಿಡಿಯೋ ಹಕ್ಕುಗಳನ್ನು ಪಡೆಯಲು ಭಾರೀ ಮೊತ್ತದ ಆಫರ್ ನೀಡಿದೆ ಎಂದು ವರದಿಯಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಸಿನಿತಾರೆಯರ ಮದುವೆ ಕಾರ್ಯಕ್ರಮಗಳನ್ನು ಓಟಿಟಿಗಳಲ್ಲಿ ಪ್ರಸಾರ ಮಾಡುವ ಟ್ರೆಂಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಆಫರ್ ಕೂಡ ದೊಡ್ಡ ಮಟ್ಟದಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಚಿತ್ರರಂಗದ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕಳೆದ ವರ್ಷವೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಆದರೂ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ರಾಜಸ್ಥಾನದ ಐತಿಹಾಸಿಕ ನಗರ ಉದಯಪುರದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈಭವದ ಸಮಾರಂಭಕ್ಕಿಂತ ಸರಳ ಹಾಗೂ ಖಾಸಗಿ ಕಾರ್ಯಕ್ರಮವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಪ್ರಮುಖ ಓಟಿಟಿ ವೇದಿಕೆಯೊಂದು ಈ ಜೋಡಿಯನ್ನು ಸಂಪರ್ಕಿಸಿ, ತಮ್ಮ ಮದುವೆಯ ವಿಶೇಷ ವಿಡಿಯೋ ಪ್ರಸಾರದ ಹಕ್ಕುಗಳನ್ನು ಪಡೆಯಲು ಭಾರೀ ಮೊತ್ತದ ಆಫರ್ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಸಿನಿತಾರೆಯರ ಮದುವೆ ಕಾರ್ಯಕ್ರಮಗಳನ್ನು ಓಟಿಟಿಗಳಲ್ಲಿ ಪ್ರಸಾರ ಮಾಡುವ ಟ್ರೆಂಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಆಫರ್ ಕೂಡ ದೊಡ್ಡ ಮಟ್ಟದಲ್ಲೇ ನೀಡಿರುವುದಾಗಿ ಉಲ್ಲೇಖಿಸಿವೆ.
ಆಫರ್ ತಿರಸ್ಕರಿಸಿದ ವಿಜಯ್-ರಶ್ಮಿಕಾ
ಆದರೆ, ವರದಿಗಳ ಪ್ರಕಾರ ವಿಜಯ್ ದೇವರಕೊಂಡ ವಿಶೇಷವಾಗಿ ಈ ಮದುವೆಯನ್ನು ಖಾಸಗಿ ಕಾರ್ಯಕ್ರಮವಾಗಿಯೇ ಇರಿಸಿಕೊಳ್ಳಲು ಬಯಸಿದ್ದಾರಂತೆ. ತಮ್ಮ ಜೀವನದ ಅತ್ಯಂತ ವೈಯಕ್ತಿಕ ಕ್ಷಣವನ್ನು ಈ ರೀತಿ ಕಮರ್ಷಿಯಲ್ ದೃಷ್ಟಿಯಿಂದ ನೋಡುವುದು ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಹೀಗಾಗಿ ನೇರವಾಗಿ ಓಟಿಟಿ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಇದುವರೆಗೆ ಈ ಜೋಡಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ ವರದಿಗಳು ನಿಜವಾಗಿದ್ದರೆ, ಫೆಬ್ರವರಿ ಕೊನೆಯ ವಾರದಲ್ಲಿ ಉದಯಪುರದಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆ ನೆರವೇರಲಿದೆ.
ಮದುವೆ ಖಾಸಗಿಯಾಗಿಡಲು ನಿರ್ಧಾರ
ಓಟಿಟಿ ಆಫರ್ ತಿರಸ್ಕರಿಸಿರುವುದರಿಂದ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಡಲು ವಿಜಯ್-ರಶ್ಮಿಕಾ ಬಯಸಿದ್ದಾರೆ ಎನ್ನಲಾಗಿದೆ. ದೊಡ್ಡ ಮೊತ್ತದ ಆಫರ್‌ಗಿಂತ ಖಾಸಗಿತನಕ್ಕೆ ಆದ್ಯತೆ ನೀಡಿದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ನಿರ್ಧಾರ ಸಿನಿರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ನಟಿ ನಯನತಾರಾ ಅವರ ಮದುವೆ ವಿಡಿಯೋ ಹಕ್ಕುಗಳ ವಿಷಯದಲ್ಲಿ ಕಾನೂನು ಸಂಬಂಧಿತ ವಿವಾದಗಳು ಸೃಷ್ಟಿಯಾಗಿದ್ದವು. ಆ ಅನುಭವವನ್ನು ಗಮನದಲ್ಲಿಟ್ಟುಕೊಂಡು, ವಿಜಯ್-ರಶ್ಮಿಕಾ ಜೋಡಿ ಯಾವುದೇ ರೀತಿಯ ಕಾನೂನು ಗೊಂದಲಗಳಿಗೆ ಅವಕಾಶ ನೀಡಬಾರದು ಎಂಬ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗೀತ ಗೋವಿಂದಂ’ ಚಿತ್ರದಿಂದಲೂ ಈ ಜೋಡಿ ಅಭಿಮಾನಿಗಳ ಹೃದಯ ಗೆದ್ದಿದೆ. ಪರದೆ ಮೇಲೆ ಕಂಡ ಕೆಮಿಸ್ಟ್ರಿಯೇ ನಿಜ ಜೀವನದಲ್ಲೂ ಮುಂದುವರಿದಿದೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ. ಈಗ ಮದುವೆ ಸುದ್ದಿಗಳು ಜೋರಾಗಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭಾಶಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-vijay-deverakonda-wedding-ott-platform-offers-huge-deal-for-exclusive-video-rights-443567.html. xn--babytilbehr-pgb.com does not claim ownership of this content. All rights remain with the original publisher.
