ಬಾಂಗ್ಲಾದಲ್ಲಿ ನೂತನ ಪ್ರಧಾನಿ ಪದಗ್ರಹಣಕ್ಕೆ ಕ್ಷಣಗಣನೆ, ಗಡಿಯಲ್ಲಿ ಬಿಗಿ ಬಂದೋಬಸ್ತ್ | Bangladesh Election | Bangladesh Election Result 2026 And New Prime Minister Will Take The Oath Very Soon From BNP Party

International

oi-Malathesha M

ಬಾಂಗ್ಲಾದೇಶ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಇಷ್ಟು ದಿನಗಳ ಕಾಲ ಇದ್ದ ಕಿರಿಕ್ ಇದೀಗ ಮಾಯವಾಗುವ ನಿರೀಕ್ಷೆ ಮೂಡಿದೆ. ಭಾರತದ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದ್ದ ಸರ್ಕಾರ ಇದೀಗ ಬಾಂಗ್ಲಾ ಬಿಟ್ಟು ತೊಲಗಲಿದ್ದು, ಹೊಸ ಸರ್ಕಾರ ಬಾಂಗ್ಲಾದೇಶದ ಆಡಳಿತ ನೋಡಿಕೊಳ್ಳಲಿದೆ. ಜನರಿಂದ ಬಹುಮತ ಪಡೆದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಮುಖ್ಯಸ್ಥ, ತಾರಿಕ್ ರಹ್ಮಾನ್‌ಗೆ ಬಾಂಗ್ಲಾದೇಶದ ಪ್ರಧಾನಿ ಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ. ಇಂತಹ ಸಮಯದಲ್ಲೇ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ, ಮತ್ತೊಂದು ಕಡೆ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಕಣ್ಣು ಇದೀಗ ಬಾಂಗ್ಲಾ ಮೇಲೆ ನೆಟ್ಟಿದೆ.

ಬಿಎನ್‌ಪಿ ಎಂದರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ಬಾಂಗ್ಲಾದಲ್ಲಿ ಸಂಪೂರ್ಣ ಬಹುಮತ ಸಿಕ್ಕಿದೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ತಾರಿಕ್ ರಹ್ಮಾನ್‌ಗೆ ಬಾಂಗ್ಲಾ ಪ್ರಧಾನಿ ಪಟ್ಟ ಗ್ಯಾರಂಟಿಯೂ ಆಗಿದೆ. ಭಾರತದ ಜೊತೆಗೆ ತಾರಿಕ್ ರಹ್ಮಾನ್ ಉತ್ತಮ ಸ್ನೇಹ ಹೊಂದಿರುವುದು ಮತ್ತೊಂದು ಗಮನ ಸೆಳೆಯುವ ಅಂಶವಾಗಿದೆ. ಹಾಗೆಯೇ 291 ಅಭ್ಯರ್ಥಿಗಳ ಪೈಕಿ ಈಗಾಗಲೇ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ 209 ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. 2 ವರ್ಷ ತಿಕ್ಕಾಟದ ನಂತರ ಬಾಂಗ್ಲಾದ ನೆಲದಲ್ಲಿ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಇದೀಗ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Bangladesh Election

ಸಂಬಂಧ ಸುಧಾರಣೆಗೆ ಒತ್ತು ನೀಡುತ್ತಾರಾ?

ಭಾರತ ಮಾಡಿರುವ ಬಹುದೊಡ್ಡ ಸಹಾಯವನ್ನು ಬಾಂಗ್ಲಾದೇಶವು ಎಂದೆಂದಿಗೂ ಮರೆಯಬಾರದು. ಬಾಂಗ್ಲಾದೇಶ 1971ರ ಸಮಯದಲ್ಲಿ ಹೋರಾಡಿ, ಪಾಕಿಸ್ತಾನದ ಹಿಡಿತದಿಂದ ತಪ್ಪಿಸಿಕೊಂಡು ಹೊಸ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಭಾರತವೇ ಕಾರಣ. ಹೀಗೆ ಬಾಂಗ್ಲಾದೇಶ ಎಂದೆಂದಿಗೂ ಈ ಸಹಾಯವನ್ನು ಮತ್ತು ಭಾರತ ಕೊಟ್ಟಿದ್ದ ಬೆಂಬಲವನ್ನು ಮರೆಯಬಾರದು ಕೂಡ. ಹೀಗಿದ್ದರೂ ಎಲ್ಲಾ ಸಹಾಯವನ್ನು ಮರೆತವರ ರೀತಿ ಬಾಂಗ್ಲಾದೇಶ ಇತ್ತೀಚೆಗೆ ವರ್ತಿಸಿತ್ತು. ಅದರಲ್ಲೂ ಬಾಂಗ್ಲಾ ಹಂಗಾಮಿ ಸರ್ಕಾರ ಭಾರತದ ಜೊತೆಗೆ ಕಿರಿಕ್ ಮಾಡಿಕೊಳ್ಳುವುದನ್ನೇ ಕೆಲಸ ಮಾಡಿಕೊಂಡಿತ್ತು, ಜಾಗತಿಕವಾಗೂ ಭಾರತದ ಜೊತೆಗೆ ತಿಕ್ಕಾಟ ನಡೆಸುತ್ತಾ ಬಂದಿತ್ತು ಹಂಗಾಮಿ ಸರ್ಕಾರ.

ಹಿಂದೂಗಳ ಮೇಲೆ ನಿರಂತರ ದಾಳಿ

ಇದೂ ಅಲ್ಲದೆ ಬಾಂಗ್ಲಾದೇಶ ನೆಲದಲ್ಲಿ ಇರುವ ಶೇಕಡಾ 7.94ರಷ್ಟು ಹಿಂದೂ ಧರ್ಮಿಯರನ್ನ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದ ಆರೋಪವೂ ಕೇಳಿಬಂದಿತ್ತು. ಹೀಗೆ ತನ್ನ ನೆಲದಲ್ಲಿ ಹಿಂಸಾಚಾರ ನಡೆದರೂ ಇದರ ಬಗ್ಗೆ ಬಾಂಗ್ಲಾ ಹಂಗಾಮಿ ಸರ್ಕಾರ ಕ್ರಮ ಕೈಗೊಂಡು, ಹಿಂಸೆ ನಿಲ್ಲಿಸುವ ಯತ್ನ ಮಾಡುತ್ತಿರಲಿಲ್ಲ ಎಂಬ ಗಂಭೀರ ಆರೋಪ ಕೂಡ ಇದೆ. ಆದರೆ ಇದೀಗ ಹಂಗಾಮಿ ಸರ್ಕಾರ ತೊಲಗಿದ್ದು, ಬಾಂಗ್ಲಾ ಪ್ರಜೆಗಳು ಹೊಸ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಶಾಂತವಾಗಿ ಜೀವನ ನಡೆಸುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ನೂತನ ಪ್ರಧಾನಿ ಆಗುವ ನಿರೀಕ್ಷೆಯಲ್ಲಿ ಇರುವ ತಾರಿಕ್ ರಹ್ಮಾನ್ ಎದುರು ಬೆಟ್ಟದಷ್ಟು ಸವಾಲುಗಳು ಕೂಡ ಕಾಯುತ್ತಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/bangladesh-election-result-2026-and-new-prime-minister-will-take-the-oath-very-soon-from-bnp-party-443671.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo