
Sports
oi-Madhusudhan KR
India Vs Pakistan Match: ಕೊಲೊಂಬೊದ ಆರ್.ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಟಿ20 ವಿಶ್ವಕಪ್ 2026 ಪಂದ್ಯ ನಡೆಯಲಿದೆ. ಈ ಮಹಾಸಮರವನ್ನು ವೀಕ್ಷಣೆ ಮಾಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಹಾಗಾದ್ರೆ, ಪಂದ್ಯದ ಸಮಯ, ಸ್ಥಳ, ಪ್ಲೇಯಿಂಗ್ 11 ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದುವರೆಗೆ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ತಲಾ ಎರಡು ಗೆಲುವು ಸಾಧಿಸಿ ಗ್ರೂಪ್ ಎ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿವೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹಾಗೂ ನಮೀಬಿಯಾ ವಿರುದ್ಧ ಜಯ ಸಾಧಿಸಿರುವ ಟೀಮ್ ಇಂಡಿಯಾ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕು ಅಂಕಗಳೊಂದಿಗೆ +3.050 ನೆಟ್ ರನ್ ರೇಟ್ ಪಡೆದು ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಪಾಕಿಸ್ತಾನ ನೆದರ್ಲ್ಯಾಂಡ್ ಹಾಗೂ ಯುಎಸ್ಎ ವಿರುದ್ಧ ಜಯ ದಾಖಲಿಸಿ +0.932 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ಇದುವರೆಗೆ ಒಟ್ಟು 16 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭಾರತ 13 ಪಂದ್ಯಗಳಲ್ಲಿ ಗೆದ್ದು 13-3 ಮುನ್ನಡೆಯಲ್ಲಿದೆ. ಇನ್ನೂ ಟಿ20 ವಿಶ್ವಕಪ್ ಇತಿಹಾಸವನ್ನು ಭಾರತ 8 ಪಂದ್ಯಗಳಲ್ಲಿ ಭಾರತ 7 ಬಾರಿ ಜಯ ಸಾಧಿಸಿದರೆ, ಪಾಕಿಸ್ತಾನ ಕೇವಲ ಒಂದು ಬಾರಿ ಮಾತ್ರ ಗೆಲುವು ದಾಖಲಿಸಿದೆ.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ , ಹಾರ್ದಿಕ್ ಪಾಂಡ್ಯ , ರಿಂಕು ಸಿಂಗ್, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್. ಒಂದು ವೇಳೆ ಅಭಿಷೇಕ್ ಶರ್ಮಾ ಹೊರಗುಳಿಸದರೆ ಅವರ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸುವ ಸಾಧ್ಯತೆಯಿದೆ ಹೆಚ್ಚಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಸೈಮ್ ಆಯುಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ (ನಾಯಕ), ಬಾಬರ್ ಆಝಂ, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಆಫ್ರಿದಿ, ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್.
ಟಿ20 ಪಂದ್ಯಗಳಲ್ಲಿ ಭಾರತ – ಪಾಕಿಸ್ತಾನ ಮುಖಾಮುಖಿ
* ಒಟ್ಟು ಪಂದ್ಯಗಳು: 16
* ಭಾರತ: 13 ಗೆಲುವು
* ಪಾಕಿಸ್ತಾನ: 3 ಗೆಲುವು
ಟಿ20 ವಿಶ್ವಕಪ್‌ನಲ್ಲಿ ಭಾರತ – ಪಾಕಿಸ್ತಾನ ಮುಖಾಮುಖಿ
* ಒಟ್ಟು ಪಂದ್ಯಗಳು: 8
* ಭಾರತ: 7 ಗೆಲುವು
* ಪಾಕಿಸ್ತಾನ: 1 ಗೆಲುವು
ಭಾರತ ಟಿ20 ವಿಶ್ವಕಪ್ 2026 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.
ಪಾಕಿಸ್ತಾನ ಟಿ20 ವಿಶ್ವಕಪ್ 2026 ತಂಡ: ಸೈಮ್ ಆಯುಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಆಗಾ (ನಾಯಕ), ಬಾಬರ್ ಆಜಂ, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್, ಸಲ್ಮಾನ್ ಮಿರ್ಜಾ, ಫಖರ್ ಜಮಾನ್, ನಸೀಮ್ ಶಾ, ಖವಾಜಾ ನಫೇ.
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ನೇರಪ್ರಸಾರ
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ 2026 ಪಂದ್ಯವನ್ನು ಭಾರತದಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡಲು ಕ್ರಿಕೆಟ್ ಅಭಿಮಾನಿಗಳಿಗೆ ಹಲವಾರು ಆಯ್ಕೆಗಳು ಲಭ್ಯವಿವೆ. ಹಾಗಾದ್ರೆ ಅವುಗಳು ಯಾವುದು ಎನ್ನುವ ಪ್ರಶ್ನೆಗೆ ಉತ್ತರವನ್ನು ಕಳೆಗೆ ನೀಡಲಾಗಿದೆ ಗಮನಿಸಿ.
* ಭಾರತದಲ್ಲಿ ಈ ಪಂದ್ಯವನ್ನು JioHotstar ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ವೀಕ್ಷಣೆ ಮಾಡಬಹುದು.
* ಟಿವಿಯಲ್ಲಿ Star Sports Network ಚಾನೆಲ್‌ಗಳಲ್ಲಿ ನೇರಪ್ರಸವಾರವನ್ನು ನೋಡಬಹುದು.
* ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿ ಯಾವುದರಲ್ಲಾದರೂ ಈ ಹೈವೋಲ್ಟೇಜ್ ಪಂದ್ಯವನ್ನು ನೇರ ಪ್ರಸಾರವನ್ನು ವೀಕ್ಷಣೆ ಮಾಡಬಹುದು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/india-vs-pakistan-t20-world-cup-date-time-venue-predicted-playing-xi-live-streaming-details-443741.html. xn--babytilbehr-pgb.com does not claim ownership of this content. All rights remain with the original publisher.
