
International
oi-Malathesha M
ಭಾರತ ಮತ್ತು ಅಮೆರಿಕ ನಡುವೆ ಮೊದಲಿನಿಂದ ಕೂಡ ಸ್ನೇಹ & ಬಾಂಧವ್ಯ ಚನ್ನಾಗಿಯೇ ಇದೆ. ಈ ರೀತಿ ಇದ್ದರೂ ಭಾರತೀಯರಿಗೆ ಅಮೆರಿಕದ ನೆಲದಲ್ಲಿ ಸೂಕ್ತ ಭದ್ರತೆ ಇಲ್ಲ ಎಂಬ ಆರೋಪಗಳ ನಡುವೆ, ಪದೇ ಪದೇ ಭಾರತ ಮೂಲದ ವಿದ್ಯಾರ್ಥಿಗಳು ಹಾಗೂ ಪ್ರಜೆಗಳ ಮೇಲೆ ದಾಳಿ ಆಗುತ್ತಲೇ ಇದೆ. ಈ ರೀತಿ ಭಾರತ ಮೂಲದ ವಿದ್ಯಾರ್ಥಿ, ಅದರಲ್ಲೂ ಕನ್ನಡ ನಾಡಿನ ಯುವಕ ಅಮೆರಿಕದಲ್ಲಿ ಶವವಾಗಿ ಸಿಕ್ಕಿದ್ದಾನೆ. ಅಮೆರಿಕದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಆಗಿದ್ದ ಕರ್ನಾಟಕ ಮೂಲದ ಯುವಕ ಕಳೆದ 6 ದಿನದಿಂದ ನಾಪತ್ತೆ ಆಗಿದ್ದರು, ಆದರೆ ಇದೀಗ ದಿಢೀರ್ ಶವವಾಗಿ ಪತ್ತೆಯಾಗಿದ್ದಾರೆ.
ಸಾವಿರಾರು ಕನಸು ಕಟ್ಟಿಕೊಂಡು ಅಮೆರಿಕ ಎಂಬ ದೂರದ ನಾಡಿಗೆ ಹಾರಿದ್ದ ಕರ್ನಾಟಕ ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಸಾವು ಇದೀಗ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಅಲ್ಲದೇ ಅಮೆರಿಕದಲ್ಲಿ ಓದುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳ ಅಪ್ಪ & ಅಮ್ಮನಿಗೂ ಟೆನ್ಷನ್ ಶುರುವಾಗಿದೆ. ಸಾಕೇತ್ ಶ್ರೀನಿವಾಸಯ್ಯ ಕಳೆದ 6 ದಿನದಿಂದ ನಾಪತ್ತೆ ಆಗಿದ್ದರು, ಅಮೆರಿಕದ ಬರ್ಕ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಸಮೀಪ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಸಾಕೇತ್ ಶ್ರೀನಿವಾಸಯ್ಯ ಕೊನೇ ಬಾರಿ ಕಾಣಿಸಿದ್ದು ಆ ನಂತರ ಅವರ ಸುಳಿವು ಇರಲಿಲ್ಲ. ಹೀಗಾಗಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಅತ್ತ ಸಾಕೇತ್ ಶ್ರೀನಿವಾಸಯ್ಯಗೆ ಹುಡುಕಾಟ ತೀವ್ರಗೊಳಿಸಿದ್ದರು. ಆದರೆ ಇದೀಗ ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ಜಗತ್ತಿನಾದ್ಯಂತ ಈ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ.

ದಿಢೀರ್ ಸಾವಿನ ಸುದ್ದಿಯಿಂದ ಆತಂಕ
ಸಾಕೇತ್ ಶ್ರೀನಿವಾಸಯ್ಯ ಮಾಸ್ಟರ್ ಆಫ್ ಸೈನ್ಸ್, ಪ್ರೊಡಕ್ಟ್ ಡೆವಲಪ್ಮೆಂಟ್ ಪ್ರೋಗ್ರಾಂ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಇರುವ ಬರ್ಕ್ಲಿ ವಿವಿಯಲ್ಲಿ ಸಾಕೇತ್ ಶ್ರೀನಿವಾಸಯ್ಯ 2025ರ ಆಗಸ್ಟ್ ತಿಂಗಳಿಂದ ಓದುತ್ತಿದ್ದರು. ಹೀಗಿದ್ದಾಗಲೇ ಇದೇ ಫೆಬ್ರವರಿ 10ರ ಮಂಗಳವಾರ ಸಾಕೇತ್ ಶ್ರೀನಿವಾಸಯ್ಯ ದಿಢೀರ್ ನಾಪತ್ತೆ ಆಗಿದ್ದರು. ಆದರೆ ಅವರ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಇದ್ದ ಬ್ಯಾಗ್ ಪಾರ್ಕ್ ಹಿಲ್ಸ್ ಪ್ರದೇಶದ ಮನೆಯ ಬಾಗಿಲಿನ ಎದುರು ಪತ್ತೆಯಾಗಿದ್ದು ಆತಂಕವನ್ನು ಹೆಚ್ಚಿಸಿತ್ತು.
ಹೀಗಾಗಿ ಸ್ಥಳೀಯ ಪೊಲೀಸರು ಕೂಡ ತೀವ್ರ ಹುಡುಕಾಟ ನಡೆಸಿದಾಗ ಸಾಕೇತ್ ಶ್ರೀನಿವಾಸಯ್ಯರ ಶವ ಪತ್ತೆಯಾಗಿದೆ. ಈ ಸುದ್ದಿಯು ಇದೀಗ ಅಮೆರಿಕದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದ್ದು, ಘಟನೆ ಹಿನ್ನೆಲೆ ಅಮೆರಿಕದಲ್ಲಿ ಓದುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳ ಅಪ್ಪ & ಅಮ್ಮ ಚಿಂತಿಸುವಂತೆ ಆಗಿದೆ. ಅಮೆರಿಕದಲ್ಲಿ ಲಕ್ಷಾಂತರ ಭಾರತ ಮೂಲದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಾ ಇದ್ದಾರೆ.
Consulate General of India in San Francisco is deeply concerned about the disappearance of Saketh Sreenivasaiah, an Indian post-graduate student of UC Berkeley, hailing from the State of Karnataka. The Consulate is in touch with the family and also is in contact with the…
— India in San Francisco (@CGISFO) February 14, 2026
ಸಾಕೇತ್ ಸಾವಿಗೆ ಕಾರಣ ಏನು?
ಸಾಕೇತ್ ಶ್ರೀನಿವಾಸಯ್ಯ ಸುಮಾರು 6 ಅಡಿ 1 ಇಂಚು ಎತ್ತರ ಇದ್ದರು, ಹಾಗೇ 73 ಕೆ.ಜಿ. ಅವರ ತೂಕ ಆಗಿತ್ತು. ಕೆಲವು ದಿನಗಳಿಂದ ಮೃತ ಸಾಕೇತ್ ಒಂಟಿಯಾಗಿ ಇರುತ್ತಿದ್ದರು ಹಾಗೂ ಯಾರ ಜೊತೆಗೂ ಬೆರೆಯಲು ಹಿಂದೇಟು ಹಾಕುತ್ತಿದ್ದರು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಸಾಕೇತ್ ಸಾವಿನ ಸುದ್ದಿಯನ್ನು ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದ್ದು, ಕಾಣೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹವನ್ನ ಈಗ ಸ್ಥಳೀಯ ಪೊಲೀಸರು ಪತ್ತೆಹಚ್ಚಿರುವ ಸುದ್ದಿ ತಿಳಿಸಲು ನಮಗೆ ಅತ್ಯಂತ ವಿಷಾದವಾಗಿದೆ. ಕಠಿಣ ಸಂದರ್ಭದಲ್ಲಿ ಅವರ ಕುಟುಂಬದವರಿಗೂ, ಬಂಧು-ಬಳಗಕ್ಕೆ ಸಂತಾಪ, ಎಂದು ಪ್ರಕಟಣೆ ಹೊರಡಿಸಲಾಗಿದೆ.
ಒಟ್ನಲ್ಲಿ ಸಾಕೇತ್ ಶ್ರೀನಿವಾಸಯ್ಯ ಅವರ ಸಾವಿನ ಸುದ್ದಿ ಇದೀಗ ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು, ಒಂದು ಕಡೆ ಅಮೆರಿಕದಲ್ಲಿ ಲಕ್ಷಾಂತರ ಭಾರತ ಮೂಲದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಿದ್ದಾಗ ಅವರಿಗೆ ಸೂಕ್ತ ರಕ್ಷಣೆ ಇಲ್ಲವಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಮತ್ತೊಂದು ಕಡೆ ಈ ವಿಚಾರವಾಗಿ ಸೂಕ್ತ ತನಿಖೆ ನಡೆಯಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/saketh-srinivasaiah-incident-at-united-states-has-been-created-the-storm-for-this-reason-now-443799.html. xn--babytilbehr-pgb.com does not claim ownership of this content. All rights remain with the original publisher.
