
Business
oi-Hitesh Y
Gold: ಚಿನ್ನದ ಮೇಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ. ಚಿನ್ನದ ಬೆಲೆಯು ಕಳೆದ 10 ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇನ್ನು 1905ರಿಂದ 2026ರ ವರೆಗೆ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ. ಇಂದು ಚಿನ್ನದ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಭಾರತದ ಮಟ್ಟಿಗೆ ಚಿನ್ನವು ಆಪ್ತಕಾಲದ ಗೆಳೆಯ ಎಂದೇ ಹೇಳಬಹುದು. ಸಂಕಷ್ಟದ ಸಮಯದಲ್ಲಿ ಚಿನ್ನವು ಸಹಾಯಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಭಾರತೀಯರು ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ದಶಕಗಳಿಂದಲೂ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕೂ ಚಿನ್ನದ ಬೆಲೆಯೂ ಸಹ ಹೆಚ್ಚಳವಾಗುತ್ತಿದೆ.
ಭಾರತದಲ್ಲಿ ಚಿನ್ನವನ್ನು ಕೇವಲ ಆಭರಣಕ್ಕೆಂದು ಸೀಮಿತ ಮಾಡಿಲ್ಲ. ಅದೊಂದು ಸಂಪ್ರದಾಯವಾಗಿಯೂ, ಸುರಕ್ಷಿತ ಆದಾಯ ಮೂಲವಾಗಿಯೂ ಬೆಳೆದುಕೊಂಡು ಬಂದಿದೆ. ಮದುವೆ, ನಾಮಕರಣ ಹಾಗೂ ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ಕೊಡುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ. ಇನ್ನು ಭಾರತೀಯರು ತುರ್ತು ಸಂದರ್ಭಗಳಲ್ಲಿ ಚಿನ್ನವನ್ನು ಅಡಮಾನ ಇರಿಸಬಹುದು ಎನ್ನುವ ಧೈರ್ಯದಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಇದೆ. ಆದರೆ ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಹೆಚ್ಚಳವಾಗಿರುವ ಗ್ರಾಫ್ ಗಮನಿಸಿದರೆ, ಮುಂದಿನ ದಿನಗಳಲ್ಲಿ ಚಿನ್ನ ದುಬಾರಿ ಆಗಲಿದೆ. ಬಡವರು ಮಧ್ಯಮವರ್ಗದವರಿಗೆ ತುಸು ಕಷ್ಟವಾಗಬಹುದು ಎನ್ನುವಂತಿದೆ. ಆದರೆ, ಈಗಾಗಲೇ ಚಿನ್ನ ಖರೀದಿ ಮಾಡಿರುವವರಿಗೆ ಬಂಪರ್ ಲಾಭವನ್ನೇ ಚಿನ್ನ ತಂದಿದೆ.

1970ರಿಂದ ಚಿನ್ನದ ಬೆಲೆ ಹೆಚ್ಚಳ
1905ರಿಂದಲೂ ಚಿನ್ನದ ಬೆಲೆಯು ಏರಿಕೆಯ ಹಾದಿಯಲ್ಲೇ ಸಾಗಿದೆ. 1970ರ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. ಇದಾದ ನಂತರ 2000ನೇ ಸಾಲಿನಿಂದ ಚಿನ್ನಕ್ಕೆ ಶುಕ್ರದೆಸೆ ಎಂದೇ ಹೇಳಬಹುದು. 2000ರಲ್ಲಿ 10 ಗ್ರಾಂ ಚಿನ್ನದ ಬೆಲೆಯು 4,400 ರೂಪಾಯಿ ಇತ್ತು. ಅಲ್ಲಿಂದಾಚೆಗೆ ಚಿನ್ನದ ಬೆಲೆಯು ನಿರಂತರವಾಗ ಹೆಚ್ಚಳವಾಗುತ್ತಲ್ಲೇ ಬಂದಿದೆ. ಇನ್ನು 2060ರ ವೇಳೆಗೆ ಚಿನ್ನದ ಬೆಲೆಯು ಬರೋಬ್ಬರಿ 19 ಲಕ್ಷ ರೂ. ತಲುಪುವ ನಿರೀಕ್ಷೆ ಇದೆ.
ಹೌದು 1905ರಲ್ಲಿದ್ದ ಚಿನ್ನದ ಬೆಲೆಗೂ 2026ರ ಚಿನ್ನದ ಬೆಲೆಗೂ ಭಾರೀ ವ್ಯತ್ಯಾಸವಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಣಕಾಸು ತಜ್ಞ, ಎ.ಕೆ ಮಂಧನ್ ಅವರು ಚಿನ್ನದ ಬೆಲೆಯು ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಳವಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ವಿವರ ನೋಡೋಣ.
ಚಿನ್ನದ ಬೆಲೆ 1905 ರಿಂದ 2026 (10 ಗ್ರಾಂ ಚಿನ್ನದ ಬೆಲೆ ಹೆಚ್ಚಳದ ವಿವರ)
| ವರ್ಷ | ರೂಪಾಯಿ |
|---|---|
| 1900 | 5 |
| 1905 | 7 |
| 1910 | 10 |
| 1920 | 15 |
| 1925 | 18 |
| 1930 | 25 |
| 1935 | 50 |
| 1940 | 60 |
| 1945 | 65 |
| 1946 | 70 |
| 1947 | 80 |
| 1948 | 95 |
| 1949 | 94 |
| 1950 | 99 |
| 1951 | 98 |
| 1952 | 76 |
| 1953 | 73 |
| 1954 | 77 |
| 1955 | 79 |
| 1956 | 90 |
| 1957 | 90 |
| 1958 | 95 |
| 1959 | 102 |
| 1960 | 111 |
| 1961 | 119 |
| 1962 | 119 |
| 1963 | 99 |
| 1964 | 63 |
| 1965 | 71 |
| 1966 | 83 |
| 1967 | 102 |
| 1968 | 162 |
| 1969 | 176 |
| 1970 | 184 |
| 1971 | 193 |
| 1972 | 202 |
| 1973 | 278.50 |
| 1974 | 506 |
| 1975 | 540 |
| 1976 | 432 |
| 1977 | 486 |
| 1978 | 685 |
| 1979 | 1,937 |
| 1980 | 1,330 |
| 1981 | 1,670 |
| 1982 | 1,645 |
| 1983 | 1,800 |
| 1984 | 1,970 |
| 1985 | 2,130 |
| 1986 | 2,140 |
| 1987 | 2,570 |
| 1988 | 3,130 |
| 1989 | 3,140 |
| 1990 | 3,200 |
| 1991 | 3,466 |
| 1992 | 4,334 |
| 1993 | 4,140 |
| 1994 | 4,598 |
| 1995 | 4,680 |
| 1996 | 5,160 |
| 1997 | 4,725 |
| 1998 | 4,045 |
| 1999 | 4,234 |
| 2000 | 4,400 |
| 2001 | 4,300 |
| 2002 | 4,990 |
| 2003 | 5,600 |
| 2004 | 5,850 |
| 2005 | 7,000 |
| 2006 | 8,400 |
| 2007 | 10,800 |
| 2008 | 12,500 |
| 2009 | 14,500 |
| 2010 | 18,500 |
| 2011 | 26,400 |
| 2012 | 31,050 |
| 2013 | 29,600 |
| 2014 | 28,006 |
| 2015 | 26,343 |
| 2016 | 28,620 |
| 2017 | 29,667 |
| 2018 | 31,438 |
| 2019 | 35,220 |
| 2020 | 48,651 |
| 2021 | 48,720 |
| 2022 | 52,677 |
| 2023 | 65,337 |
| 2024 | 77,917 |
| 2025 | 1,35,260 |
| 2026 | 1,79,590 |
PRICE OF #GOLD IN INDIA 🇮🇳
(Price per 10 grams)From 1905 to 2026.🔥
1900 – ₹ 5
1905 – ₹ 7
1910 – ₹ 10
1920 – ₹ 15
1925 – ₹ 18
1930 – ₹ 25
1935 – ₹ 50
1940 – ₹ 60
1945 – ₹ 65
1946 – ₹ 70
1947 – ₹80
1948 – ₹95
1949 – ₹94
1950 – ₹99
1951 – ₹98
1952 – ₹76
1953 –…— A K Mandhan (@A_K_Mandhan) February 15, 2026
Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-investment-boom-from-7-rs-in-1905-1-79-lakh-in-2026-massive-returns-for-gold-buyers-gold-never-443881.html. xn--babytilbehr-pgb.com does not claim ownership of this content. All rights remain with the original publisher.
