
Sports
oi-Madhusudhan KR
T20 World Cup 2026: ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಕಾರಣ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯ ನಿರಂತರ ಮಳೆ ಹಿನ್ನೆಲೆ ರದ್ದುಗೊಂಡಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು.
ಈ ಅಂಕದೊಂದಿಗೆ ಜಿಂಬಾಬ್ವೆ ಒಟ್ಟು 5 ಅಂಕಗಳೊಂದಿಗೆ ಬಿ ಗುಂಪಿನಿಂದ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಿತು. ಇತ್ತ ಆಸ್ಟ್ರೇಲಿಯಾ ಮೂರು ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಮಾತ್ರ ಗಳಿಸಿದ್ದು, ಮುಂದಿನ ಓಮನ್ ವಿರುದ್ಧದ ಪಂದ್ಯವನ್ನು ಗೆದ್ದರೂ ಗರಿಷ್ಠ 4 ಅಂಕಗಳವರೆಗೆ ಮಾತ್ರ ತಲುಪಲು ಸಾಧ್ಯ ಆಗುತ್ತದೆ. ಜಿಂಬಾಬ್ವೆ ಈಗಾಗಲೇ 5 ಅಂಕಗಳನ್ನು ಪಡೆದಿರುವುದರಿಂದ ಆಸ್ಟ್ರೇಲಿಯಾದಿಗೆ ಮುಂದಿನ ಹಂತಕ್ಕೆ ಹೋಗುವ ಅವಕಾಶದ ಬಾಗಿಲು ಮುಚ್ಚಿದೆ.

ಶ್ರೀಲಂಕಾ ತಂಡ ಈಗಾಗಲೇ ಸೂಪರ್ 8ಕ್ಕೆ ಅರ್ಹತೆ ಪಡೆದುಕೊಂಡಿದೆ. ಜಿಂಬಾಬ್ವೆ ಮತ್ತು ಶ್ರೀಲಂಕಾ ಈ ಗುಂಪಿನಿಂದ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್ ಟೂರ್ನಿಯಿಂದ ಹೊರಬಿದ್ದಿವೆ. ಈ ಫಲಿತಾಂಶ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಟೂರ್ನಿಯ ಬಲಿಷ್ಠ ತಂಡ ಎನಿಸಿಕೊಂಡಿದ್ದ ಆಸ್ಟ್ರೇಲಿಯಾ ಹೊರಬಿದ್ದಿರುವುದು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ತಂಡ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಪೈಪೋಟಿ ನಡೆಸಲಿದೆ.
ಇದೇ ವೇಳೆ, ಸೂಪರ್ 8 ಹಂತದಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವಿನ ಮುಖಾಮುಖಿ ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾ ಸ್ಥಾನವನ್ನು ಜಿಂಬಾಬ್ವೆ ಪಡೆದುಕೊಂಡಿರುವುದರಿಂದ ಈ ಪಂದ್ಯಕ್ಕೆ ಮತ್ತಷ್ಟು ರೋಚಕತೆ ಹೆಚ್ಚಾಗಿದೆ.
ಆಸಿಸ್ ಟೂರ್ನಿಯಿಂದ ಹೊರಬಿದ್ದಿದ್ದು ಹೀಗೆ
ಜಿಂಬಾಬ್ವೆ ಮತ್ತು ಐರ್ಲೆಂಡ್ ಪಂದ್ಯದಲ್ಲಿ ಕನಿಷ್ಠ ಟಾಸ್ ಕೂಡ ಮಾಡಲು ಸಾಧ್ಯವಾಗದಂತೆ ಮಳೆ ಅಡ್ಡಿಪಡಿಸಿತು. ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಒಂದು ಅಂಕದೊಂದಿಗೆ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ಗ್ರೂಪ್ ಬಿ ನಿಂದ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಅಂತಿಮ ಪಂದ್ಯವನ್ನು ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಶ್ರೀಲಂಕಾ ಮತ್ತು ಜಿಂಬಾಬ್ವೆ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಆಸ್ಟ್ರೇಲಿಯಾ ತವರಿಗೆ ಮರಳುವಂತಾಗಿದೆ.
ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ
2021ರಲ್ಲಿ ಚಾಂಪಿಯನ್ ಆಸ ಆಸ್ಟ್ರೇಲಿಯಾವು ಇದೀಗ ಗ್ರೂಪ್ ಹಂತದಲ್ಲೇ ಹೊರಬಿದ್ದಿರುವುದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2009ರ ನಂತರ ಅಂದರೆ, ಬರೋಬ್ಬರಿ 17 ವರ್ಷಗಳ ಬಳಿಕ ಕಾಂಗರೂ ಪಡೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಜಿಂಬಾಬ್ವೆ ವಿರುದ್ಧ ಅನುಭವಿಸಿದ ಹೀನಾಯ ಸೋಲು ಮತ್ತು ಶ್ರೀಲಂಕಾ ವಿರುದ್ಧದ ಸೋಲು ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳು ಪ್ರಮುಖ ಕಾರಣವಾಯಿತು.
ಆಸ್ಟ್ರೇಲಿಯಾಗೆ ಹೀನಾಯ ಸೋಲು
ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸೋಲಿಸುವ ಮೂಲಕ ತಾವು ಸೂಪರ್-8ಗೆ ಅರ್ಹರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಜಿಂಬಾಬ್ವೆ ತಂಡವು ಫೆಬ್ರವರಿ 19ರಂದು ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದ್ದು, ಈ ಪಂದ್ಯವು ಗುಂಪಿನ ಅಗ್ರಸ್ಥಾನಕ್ಕೆ ಯಾರು ಎಂಬುದನ್ನು ನಿರ್ಧರಿಸಲಿದೆ. ಫೆಬ್ರವರಿ 13ರಂದು ಜಿಂಬಾಬ್ವೆ, ಫಬ್ರವರಿ 16 ಶ್ರೀಲಾಂಕಾ ವಿರುದ್ಧ ಸೋಲು ಕಂಡಿತ್ತು. ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದು ಎರಡು ಅಂಕಗಳನ್ನು ಪಡೆದುಕೊಂಡಿದೆ.
-

IND Vs PAK Match: ಪಾಕಿಸ್ತಾನ ತಂತ್ರಕ್ಕೆ ರಣತಂತ್ರ ರೂಪಿಸಿದ ಸೂರ್ಯ ಪಡೆ: ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ
-

IND Vs PAK: ಪಾಕಿಸ್ತಾನ ಬೌಲರ್ಗಳ ಚಳಿ ಬಿಡಿಸಿದ ಇಶಾನ್ ಕಿಶಾನ್: 176 ರನ್ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
-

Gold: ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ: ಬರೋಬ್ಬರಿ ₹24,500 ಇಳಿಕೆ; ಆಭರಣ ಪ್ರಿಯರಿಗೆ ನೆಮ್ಮದಿ
-

Gold Price February 15: ಚಿನ್ನ ಪ್ರಿಯರಿಗೆ ಗುಡ್ನ್ಯೂಸ್, ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ: ಎಷ್ಟಿದೆ ಇಂದಿನ ಚಿನ್ನ – ಬೆಳ್ಳಿ
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Jowar Price in Karnataka: ರಾಜ್ಯದ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಜೋಳದ ದರ ಏರಿಳಿತ; ದಾವಣಗೆರೆಯಲ್ಲಿ ರೂ.5,700 ಬೆಲೆ
-

Richard Anthony: ರಕ್ಷಿತ್ ಶೆಟ್ಟಿಯ ಬಹುನಿರೀಕ್ಷಿತ ‘ರಿಚರ್ಡ್ ಆಂಟನಿ’ ಸಿನಿಮಾ ಬಗ್ಗೆ ಕೊನೆಗೂ ಸಿಕ್ತು ಉತ್ತರ
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

Darshan Birthday: ನಟ ದರ್ಶನ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್, ಡಿ-ಉತ್ಸವಕ್ಕೆ ಸಜ್ಜಾದ ಫ್ಯಾನ್ಸ್
-

Bengaluru Family ಬೆಂಗಳೂರಲ್ಲಿ ಮಕ್ಕಳ ಆರೈಕೆ, ಅಡುಗೆ ಮಾಡುವುದಕ್ಕೆ 46,000 ರೂ., ಸೋಷಿಯಲ್ ಮೀಡಿಯಾ ಚರ್ಚೆ
-

ಆಭರಣ ಮಾರಾಟದ ನೆಪ; ಬೆಂಗಳೂರಿನ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಮಹಿಳೆಯರ ಗ್ಯಾಂಗ್ನಿಂದ ಕಳ್ಳತನ
-

ಕರಾವಳಿ Vs ಕರ್ನಾಟಕ: ಕನ್ನಡಿಗರ ಸಹಾಯವಿಲ್ಲದೆ ತುಳು ಪ್ರದೇಶ ಬೆಳೆದಿದೆಯೇ, ಕೆಲ ತುಳುನಾಡಿಗರ ನಡೆಗೆ ಕನ್ನಡಿಗರ ವಿರೋಧ
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-2026-australia-knocked-out-as-zimbabwe-qualify-for-super-8-after-rain-hit-match-444121.html. xn--babytilbehr-pgb.com does not claim ownership of this content. All rights remain with the original publisher.
