
Karnataka
oi-Shankrappa Parangi
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ನ್ಯಾಯಾಲಯ ನೀಡಿದ್ದ ಆದೇಶ ಉಲ್ಲಂಘಿಸಿದ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂತೋಷ್ ಅವರನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ. ಕೋರ್ಟ್ ನಿರ್ದೇಶನದನ್ವಯ ವಾರೆಂಟ್ ಜಾರಿ ಮಾಡಿ ಬಂಧಿಸಲಾಗಿದ್ದು, ಒಟ್ಟು 30 ದಿನ ಸಂತೋಷ್ ಪೊಲೀಸ್ ವಶದಲ್ಲಿರಲಿದ್ದಾರೆ.
ದಕ್ಷಿಣ ಕನ್ನಡದ ಧರ್ಮಸ್ಥಳ ಪ್ರಕರಣವು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸೂಕ್ತ ತನಿಖೆ ನಡೆದು, ಕೆಲವು ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಎಸ್ಐಟಿ ಕೋರ್ಟ್ಗೆ ವರದಿ ಸಹ ಸಲ್ಲಿಸಿತ್ತು. ಮತ್ತೊಂದೆಡೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮತ್ತವರ ಕುಟುಂಬ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡದಂತೆ ಕೋರ್ಟ್ನಿಂದ ವರ್ಷಗಳ ಹಿಂದೆಯೇ ಆದೇಶ (ಇಂಜೆಕ್ಷನ್) ನೀಡಲಾಗಿತ್ತು.

ಸಂತೋಷ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು
ಕೋರ್ಟ್ ಆದೇಶ ನೀಡಿದರೂ ಸಹಿತ ಆದೇಶ ಉಲ್ಲಂಘಿಸಿದ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂತೋಷ್ ಅವರನ್ನು ಬಂಧಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯವಾದಿ ರಾಜಶೇಖರ್ ಹಿಲಿಯಾರು ಅವರು ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದೇಶ ಉಲ್ಲಂಘಿಸಿದ ಯೂಟ್ಯೂಬ್ ಚಾನಲ್ನ ಸಂತೋಷ್ ಅವರ ಬಂಧನಕ್ಕೆ ವಾರೆಂಟ್ ಜಾರಿಗೆ ಕೋರಿದ್ದರು. ಅರ್ಜಿದಾರರು ಮಾನಹಾನಿ ಪ್ರಕರಣವನ್ನು ದಾಖಲಿಸಿ ಪ್ರತಿವಾದಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವಂತೆ ಅವರು ಮನವಿ ಮಾಡಿದ್ದರು.
ನ್ಯಾಯಾಲವು ‘2023ರ ಸೆಪ್ಟೆಂಬರ್ 13ರಂದು ನೀಡಲಾದ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿನೆ ಮಾಡಿದ ಆರೋಪದ ಮೇಲೆ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ವಿರುದ್ಧ ಬೆಂಗಳೂರು ಪ್ರಿನ್ಸಿಪಲ್ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಬಂಧನಕ್ಕೆ ವಾರೆಂಟ್ ಜಾರಿ ಮಾಡಿದೆ.
ನ್ಯಾಯಾಲಯ ಮಂಗಳೂರು ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯದ ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವಂತೆ ನಿರ್ದೇಶಿಸಿತು. ಇನ್ನೂ ಬಂಟ್ವಾಳ ಪೊಲೀಸ್ ಠಾಣೆ ಮತ್ತು ಕಡಬ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪ್ರತಿವಾದಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚನೆ ನೀಡಿತು. ನ್ಯಾಯಾಂಗ ನಿಂದನೆಗಾಗಿ ಪ್ರತಿವಾದಿಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಬಂಧನ ವಾರಂಟ್ ಜಾರಿ ಮಾಡುತ್ತಿದ್ದಂತೆ ಸಂಚಾರಿ ಸ್ಟುಡಿಯೋನ ಸಂತೋಷ್ ರನ್ನು ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರರು ಸುಳ್ಳು ಸುದ್ದಿ, ಮಾನಹಾನಿ ವಿಷಯಗಳಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ತಡೆ ಆದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2023ರ ಸೆಪ್ಟೆಂಬರ್ 13ರಂದು ನ್ಯಾಯಾಲಯವು ತಾತ್ಕಾಲಿಕ ತಡೆ ಆದೇಶ ನೀಡಿತ್ತು. ಪ್ರತಿವಾದಿ ಅಥವಾ ಯಾರಾದರೂ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸ್ಥೆ, ಕುಟುಂಬ ಸದಸ್ಯರು ಅಥವಾ ದೇವಸ್ಥಾನದ ವಿರುದ್ಧ ಸುಳ್ಳು ಆರೋಪ ಮಾಡಬಾರದು, ಮಾನಹಾನಿ ವಿಡಿಯೋಗಳನ್ನು ಪ್ರಕಟಿಸಬಾರದು ಅಥವಾ ಹರಡಬಾರದು ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಲಾಗಿತ್ತು. ಹೀಗಿದ್ದರೂ ಈ ಸಂತೋಷ್ ಯೂಟ್ಯೂಬ್ನಲ್ಲಿ ಒಂದಷ್ಟು ವಿಷಯಗಳನ್ನು ಪ್ರಕಟಿಸುತ್ತಲೇ ಇದ್ದ. ಹೀಗಾಗಿ ಅರ್ಜಿದಾರರು ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ.
-

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ಭಕ್ತರ ಜೊತೆ 320 ಕಿ.ಮೀ ನಡೆದ ‘ಶಿವನ ದೂತ’ ಶ್ವಾನ!
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video
-

Horoscope February 16: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ದಿನ ಭವಿಷ್ಯ ಇಲ್ಲಿದೆ
-

ಫೆಬ್ರವರಿ 17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
-

Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನ ಹೇಗಿರಲಿದೆ ಹವಾಮಾನ, ಇಲ್ಲಿದೆ ಮಾಹಿತಿ
-

ಕರ್ನಾಟಕದ ಕರಾವಳಿಗೆ ಬರಲು ಐಟಿ – ಬಿಟಿ ಕಂಪನಿಗಳ ಹಿಂದೇಟು ಚರ್ಚೆ, ಸೋಷಿಯಲ್ ಮೀಡಿಯಾದಲ್ಲಿ ವಾಕ್ಸಮರ
-

Darshan Thoogudeepa Birthday: ನಟ ದರ್ಶನ್ ಹುಟ್ಟುಹಬ್ಬ: ವಿಶೇಷ ಪೋಸ್ಟ್ ಹಂಚಿಕೊಂಡ ಸೆಲೆಬ್ರಿಟಿಗಳು
-

Taapsee Pannu: ನರೇಂದ್ರ ಮೋದಿ ಇಷ್ಟದ ರಾಜಕಾರಣಿ; ಯಾಕೆಂದರೆ ಈ ದೇಶದಲ್ಲಿ ನಾನು ಇನ್ನೂ ಇರಬೇಕು: ನಟಿ ತಾಪ್ಸಿ ಪನ್ನು
-

ಕರ್ನಾಟಕದ ಐಪಿಎಸ್ ಸಿಂಗಂ ತಮಿಳುನಾಡಿಗೆ ಹೋಗಿ ಅತಂತ್ರವಾದ ಕಥೆಯಿದು: ಅಣ್ಣಾಮಲೈ ಬದುಕಿನ ತಿರುವು ಹಲವು
-

National Highway: ರಾಮನಗರ ಜಿಲ್ಲೆ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ ವೇ
-

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಆಹ್ವಾನ ಪತ್ರಿಕೆಯ ಫೋಟೋ ವೈರಲ್; ಮುಹೂರ್ತ, ಆರತಕ್ಷತೆ ದಿನಾಂಕ ರಿವೀಲ್
-

Kavya Gowda: ನಟಿ ಕಾವ್ಯಾ ಗೌಡಗೆ ಸಣ್ಣ ರಿಲೀಫ್, ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ನಿಂದ ಮಧ್ಯಂತರ ತಡೆ
-

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ; ಏಪ್ರಿಲ್ 7 ರಿಂದ ಸುಪ್ರೀಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ವಿಚಾರಣೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/youtuber-santosh-arrested-by-bantwal-police-for-contempt-of-court-over-the-dharmasthala-case-444215.html. xn--babytilbehr-pgb.com does not claim ownership of this content. All rights remain with the original publisher.
