The Karala Story 2: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪ | The Kerala Story 2 is False Propaganda, Poisonous Work: Kerala CM Pinarayi Vijayan Allegations

Entertainment

oi-Madhusudhan KR

The Karala Story 2: ಕೇರಳ ಸಿಎಂ ಪಿಣರಾಯಿ ವಿಜಯನ್ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಂಡ್’ ಚಿತ್ರದ ಟ್ರೇಲರ್ ಬಗ್ಗೆ ತೀವ್ರವಾಗಿ ಟೀಕೆ ಮಾಡಿದ್ದಾರೆ. ಅವರು ಹೇಳುವ ಪ್ರಕಾರ, ಈ ಸಿನಿಮಾವನ್ನು ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಪ್ರಚಾರ ಮಾಡಲು ನಿರ್ಮಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.

2023ರಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರವು ಬಲವಂತದ ಮತಾಂತರ ಹಾಗೂ ದ್ವೇಷ ಹರಡುವ ವಿಷಯವನ್ನು ಪ್ರಚಾರ ಮಾಡುವ ಆರೋಪವನ್ನು ಎದುರಿಸಿದೆ. ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೇಳಿದ್ದಾರೆ.

The Kerala Story 2 is False Propaganda Poisonous Work Kerala CM Pinarayi Vijayan Allegations

‘ಸುಳ್ಳು ಹರಡುವ ಕೆಲಸ ಮಾಡಿದ್ದಾರೆ’

ಮೊದಲ ಚಿತ್ರವು ಸುಳ್ಳು, ದ್ವೇಷ ಹಾಗೂ ಕೇರಳ ವಿರೋಧಿ ಪ್ರಚಾರದಿಂದ ತುಂಬಿದ್ದು, ಕೋಮು ಉದ್ದೇಶಗಳೊಂದಿಗೆ ನಿರ್ಮಿಸಲಾಗಿದೆ. ಕಲೆ ಹೆಸರಿನಲ್ಲಿ ಬಿಡುಗಡೆ ಮಾಡಲು ಮುಂದಾಗಿರುವ ವಿಕೃತ ಕೃತಿಯ ‘ದಿ ರಿಯಲ್ ಕೇರಳ ಸ್ಟೋರಿ’ ಎಂಬ ಹೆಸರನ್ನು ಬಳಸಿ ಬಿಡುಗಡೆ ಮಾಡುವುದನ್ನು ತಿರಸ್ಕರಿಸಲಾಗುವುದು. ಕೇರಳದ ಸಹೋದರತ್ವ ಮತ್ತು ಜಾತ್ಯತೀತ ಮಾದರಿಯಿಂದ ಹೆದರಿರುವವರು ನಿರಂತರವಾಗಿ ದ್ವೇಷ ಪ್ರಚಾರ ನಡೆಸುತ್ತಿದ್ದಾರೆ. ಅವರು ಕೇರಳ ಸ್ಟೋರಿ ಮೂಲಕ ಸುಳ್ಳು ಹರಡುವ ಕೆಲಸ ಮಾಡಿದ್ದಾರೆ ಎಂದು ಚಿತ್ರದ ಸಿಕ್ವೇಲ್​ ನಿರ್ಮಾಣ ಮಾಡಿರುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚಿತ್ರದ ಪ್ರಸಾರವನ್ನು ಪ್ರಶ್ನಿಸಿದ ಪಿಣರಾಯಿ ವಿಜಯನ್

ಚಿತ್ರದ ಸ್ಕ್ರೀನಿಂಗ್​ ಕುರಿತು ಪ್ರಶ್ನಿಸಿರುವ ಅವರು, ವಿಭಜನೆ ಹರಡುವ ಮತ್ತು ಸಮಾಜದಲ್ಲಿ ದ್ವೇಷ ಹರಡುವ ಗುರಿಯನ್ನು ಹೊಂದಿರುವ ವಿಷಪೂರಿತ ಕೆಲಸದ ನಿರ್ಮಾಣ ಮಾಡುವ ಚಿತ್ರಕ್ಕೆ ಹೇಗೆ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ ಎಂದು ಕೂಡ ಪ್ರಶ್ನಿಸಿದ್ದಾರೆ. ಬೀಫ್​ ಎಂಬ ಹೆಸರು ಹೊಂದಿರುವ ಕಾರಣಕ್ಕೆ ಚಿತ್ರಕ್ಕೆ ಪ್ರದರ್ಶನಕ್ಕೆ ಸಿನಿಮೋತ್ಸವದಲ್ಲಿ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ಈ ಚಿತ್ರ ಹೇಗೆ ಪ್ರಸಾರಗೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪರಸ್ಪರ ಸಹಕಾರದ ಒಪ್ಪಿಗೆಯಿಂದ ನಡೆಯುವ ಮದುವೆಗಳಿಗೂ ಕೋಮುವಾದದ ಬಣ್ಣ ನೀಡಿ, ಬಲವಂತದ ಧಾರ್ಮಿಕ ಮತಾಂತರ ಮಾಡುವ ಮೂಲಕ ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ. ಯಾವುದೇ ಕೋಮು ಗಲಭೆಗಳಿಲ್ಲದ ಮತ್ತು ಎಲ್ಲಾ ಧರ್ಮೀಯರು ಪರಸ್ಪರ ಗೌರವದಿಂದ ಸಹಬಾಳ್ವೆ ನಡೆಸುವ ಕೇರಳವನ್ನು ಅವರು ದ್ವೇಷದಿಂದ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಕೆಲಸ ಮಾಡುವವರು ದೇಶದ ಶತ್ರುಗಳಾಗಿದ್ದಾರೆ. ದೇಶದ ಶಾಂತಿ ಮತ್ತು ನೆಮ್ಮದಿಯನ್ನು ವಿಷಪೂರಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಜಯ್​ ಟೀಕಿಸಿದ್ದಾರೆ. ಸಾಮರಸ್ಯದ ಭೂಮಿ, ಸುಸ್ಥಿರ ಅಭಿವೃದ್ದಿಯಲ್ಲಿ ಮುಂಚೂಣಿ, ಕಾನೂನು ಮತ್ತು ಸುವ್ಯವಸ್ಥೆಯ ಮಾದರಿಯಾಗಿರುವ ಕೇರಳವನ್ನು ವ್ಯತಿರಿಕ್ತವಾಗಿ ತೋರಿಸಲು ಹೊರಟಿರುವ ಚಿತ್ರವನ್ನು ಕೇರಳಿಗರು ಸಾಮೂಹಿಕವಾಗಿ ನಿರಾಕರಿಸಬೇಕು ಎಂದು ಕರೆ ನೀಡಿದ್ದಾರೆ.

ತಪ್ಪು ಪ್ರಚಾರಗಳಿಂದಾಗಿ ಕೇರಳದ ಜಾತ್ಯತೀತ ಅಡಿಪಾಯವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ. ನಾವು ಭ್ರಾತೃತ್ವ ಮತ್ತು ಜಾತ್ಯತೀತ ಮೌಲ್ಯ ಮತ್ತು ನೈಜತೆಯನ್ನು ಎತ್ತಿ ಹಿಡಿಯಬೇಕಿದೆ. ಕೇರಳ ನಮ್ಮ ಹೆಮ್ಮೆ ಆಗಿದೆ. ನಾವು ಒಟ್ಟಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ. ಈ ಚಿತ್ರವು ಫೆಬ್ರವರಿ 27ರಂದು ತೆರೆಕಾಣಲು ಸಜ್ಜಾಗಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಉಲ್ಕಾ ಗುಪ್ತಾ, ಐಶ್ವರ್ಯ ಓಜಾ ಮತ್ತು ಆದಿತಿ ಭಾಟಿಯಾ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಿರ್ಮಾಪಕರಿಗೆ ನೋಟಿಸ್

ಇನ್ನೂ ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕೆ ಸಿಬಿಎಫ್‌ಸಿ ಸರ್ಟಿಫಿಕೇಟ್ ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ ಚಿತ್ರದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಗುರುವಾರ ನೋಟಿಸ್ ನೀಡಿ, ಪ್ರತಿವಾದಿಗಳಿಂದ ಸ್ಪಷ್ಟನೆ ಕೋರಿದರು. ಫೆಬ್ರವರಿ 24ಕ್ಕೆ ವಿಚಾರಣೆಯನ್ನು ಮುಂದೂಡಿದರು. ಕಣ್ಣೂರಿನ ಚಿತ್ತಾರಿಪರಂಬ ಮೂಲದ ಶ್ರೀದೇವ್ ನಂಬೂದಿರಿ ಅವರು ಈ ಕುರಿತು ಅರ್ಜಿಯನ್ನು ಸಲ್ಲಿಸಿದ್ದರು.

ಕೇರಳ ಹೈಕೋರ್ಟ್‌ನಲ್ಲಿ ‘ದಿ ಕೇರಳ ಸ್ಟೋರಿ 2 – ಗೋಸ್ ಬಿಯಂಡ್’ ಚಿತ್ರದ ಪ್ರಮಾಣಪತ್ರ ರದ್ದುಪಡಿಸಲು ಮತ್ತು ಚಿತ್ರದ ಬಿಡುಗಡೆ ಆಗಂತೆ ತಾತ್ನಾಲಿಕಾವಾಗಿ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ಕಣ್ಣೂರು ನಿವಾಸಿ ಶ್ರೀದೇವ್ ನಂಬೂದಿರಿ ಸಲ್ಲಿಸಿದ ಅರ್ಜಿಯಲ್ಲಿ, ಈ ಚಿತ್ರವು ಸಮುದಾಯ ಮತ್ತು ಪ್ರಾದೇಶಿಕ ಅಸಮಾನತೆಯನ್ನು ಪ್ರಚೋದಿಸುವ ಮೂಲಕ ಕೇರಳವನ್ನು ಅಸಮರ್ಥವಾಗಿ ತೋರಿಸುತ್ತದೆ. ಇದರಿಂದ ತುಂಬಾ ಸಮಸ್ಯೆಗಳು ಉಂಟಾಗಬಹುದು ಎಂದು ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಶಾಂತಿ ಕದಡುವಂತಹ ವಿಷಯವನ್ನು ಇಡಲಾಗಿದೆ. ಸಮಾಜವನ್ನು ಒಡೆಯುವ ಇಂತಹ ಸಿನಿಮಾವನ್ನು ಹೇಗೆ ಬಿಡುಗಡೆ ಮಾಡುತ್ತಾರೆ? ಅನುಮತಿಯಾದ್ರೂ ಹೇಗೆ ಕೊಡ್ತಾರೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೇರಳದ ಜನರಿಗೆ ಈ ಸಿನಿಮಾವನ್ನು ನೋಡಬಾರದು ಅಂತಲೂ ಕರೆ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಮತ್ತೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/the-kerala-story-2-is-false-propaganda-poisonous-work-kerala-cm-pinarayi-vijayan-allegations-444333.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo