
Entertainment
oi-Madhusudhan KR
Kanakapura Srinivas: ಕೆಲವು ಬಾರಿ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ಮತ್ಯಾವುದೋ ತಿರುವು ಪಡೆಯುತ್ತದೆ. ಹಾಗೆಯೇ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗಷ್ಟೇ ಜೋಗಿ ಪ್ರೇಮ್, ನಟ ದರ್ಶನ್, ಧ್ರುವ ಸರ್ಜಾ, ಎ.ಪಿ.ಅರ್ಜುನ್, ಡಾ.ಪುನೀತ್ ರಾಜ್ಕುಮಾರ್ ಅವರನ್ನು ಕೋಪದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸ್ವತಃ ಶ್ರೀನಿವಾಸ್ ಅವರೇ ಇದೀಗ ಮಾಧ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗಷ್ಟೇ ಕನಕಪುರ ಶ್ರೀನಿವಾಸ್ ಮಾಡಿದ್ದ ಆರೋಪಕ್ಕೆ ಜೋಗಿ ಪ್ರೇಮ್ ಅವರು, ನಾನು ಅವರಿಗೆ ಏನು ಮಾಡಿದ್ದೀನಿ. ಅಷ್ಟು ಕೆಟ್ಟದಾಗಿ ನಿಂದಿಸಿದ್ದಾರೆ. ದರ್ಶನ್, ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆಯೂ ಮಾತನಾಡಿದ್ದಾರೆ. ಅವರ ಮಾತುಗಳು, ಆರೋಪಗಳನ್ನು ಸಹಿಸಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಇದೀಗ ಸ್ವತಃ ಕನಕಪುರ ಶ್ರೀನಿವಾಸ್ ಅವರೇ ತಾವು ಕೆಟ್ಟದಾಗಿ ಮಾತನಾಡಿದ ಬಗ್ಗೆ ಕ್ಷಮೆಯಾಚನೆ ಮಾಡಿದ್ದಾರೆ.

‘ಪುನೀತ್ ಸರ್ ನಿಜವಾಗಿಯೂ ದೇವರು’
“ನಾನು ಕಾಟನ್ಪೇಟೆ ಗೇಟ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾವುಕವಾಗಿ ಕೆಲವು ವಿಚಾರಗಳನ್ನು ಮಾತನಾಡಿದ್ದೆ. ಕಾರಣ ಇಷ್ಟೇ ಕಾಟನ್ಪೇಟೆ ಗೇಟ್ ಸಿನಿಮಾ ರಿಲೀಸ್ ಆಗಬೇಕಿತ್ತು. ಸ್ವಲ್ಪ ಹಣದ ಅವಶ್ಯಕತೆಯಿತ್ತು. ತುಂಬಾ ದುಃಖದಿಂದ ಮಾತನಾಡಿದೆ. ರಾಜ್ಕುಮಾರ್ ಅಂದರೆ ನನಗೆ ತುಂಬಾ ಅಭಿಮಾನ. ಪುನೀತ್ ಸರ್ ನಿಜವಾಗಿಯೂ ದೇವರು. ನನ್ನ ಜೊತೆ ಸಿನಿಮಾ ಮಾಡುವುದಕಿಂತ ಮೊದಲಿನಿಂದಲೂ ಅವರ ಜೊತೆ ಒಡನಾಟ ಇದೆ. ಅವರು ಕನಕಪುರಕ್ಕೆ ಬರುತ್ತಿದ್ದರು,” ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
ಶಿವಣ್ಣ, ಗೀತಕ್ಕನ ಬಗ್ಗೆ ಶ್ರೀನಿವಾಸ್ ಹೇಳಿದ್ದೇನು?
“ಮುಯೂರ ಎಂಬ ಸಿನಿಮಾ ಓಪನ್ ಮಾಡಿದ್ದೆ. ಆ ಸಿನಿಮಾ ಆಗಿಲ್ಲ. ನನ್ನ ಹಣಕ್ಕೋಸ್ಕರ ದೇವರು ಅವರನ್ನು ತೆಗೆದುಕೊಂಡ ಅಂತಾ ನಾನು ಹೇಳಿದ್ದೆ. ಆ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು 7 ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಬೇಕು. ಪುನೀತ್ ರಾಜ್ಕುಮಾರ್ ಅವರು ದೇವರಾಗಿಯೇ ಮೇಲೆ ಇರುತ್ತಾರೆ. ಶಿವರಾಜ್ಕುಮಾರ್, ಗೀತಮ್ಮ ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ಅವರ ಸಹಕಾರ ನಾನು ಎಂದಿಗೂ ಮರೆಯುವಂತಿಲ್ಲ. ಏನೋ ಆ ಸಂರ್ಭದಲ್ಲಿ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
“ನಾನು ವಿದ್ಯಾವಂತ ಅಲ್ಲ. ಮನಸ್ಸಿನಲ್ಲಿ ಏನು ಇದೆಯೋ ಅದನ್ನೆಲ್ಲ ಹೇಳಿಬಿಟ್ಟಿದ್ದೇನೆ. ಶಿವಣ್ಣ ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸಿನಿಮಾ ನಾವಿನ್ನೂ ಮಾಡಬೇಕು. ನಾನು ಏನಾದರೂ ತಪ್ಪಾಗಿ ಮಾತನಾಡಿದ್ದರೆ ದಯವಿಟ್ಟು ಕ್ಷಮಿಸಬೇಕು. ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ. ಹಣದ ಅವಶ್ಯಕತೆ ಇತ್ತು ನನಗೆ, ನಮ್ಮ ಸಿನಿಮಾ ರಿಲೀಸ್ ಆಗಲಿದೆ ಅಂತಾ ದುಃಖದಲ್ಲಿ ಹೇಳಿದ್ದೇನೆ. ಅದು ಬಿಟ್ಟರೆ ಇನ್ನೇನು ಇಲ್ಲ, ಕ್ಷಮಿಸಿಬಿಟಿ ಎಂದು ಕ್ಷಮೆಯಾಚಿಸಿದ್ದಾರೆ.
‘ದರ್ಶನ್ ದುಡ್ಡು ಕೊಡಬೇಕೆಂದಿದ್ದು ತಪ್ಪು’
“ನಟ ದರ್ಶನ್ ನಮ್ಮ ಮಾಸ್ ಹೀರೋ. ಅವರ ಜೊತೆಲೇ ಕುಳಿತುಕೊಂಡು ತುಂಬಾ ಮಾತನಾಡಿದ್ದೇನೆ. ಆದರೆ, ಅವರು ನನಗೆ ದುಡ್ಡು ಕೊಡಬೇಕು ಅಂತಾ ಹೇಳಿದ್ದೇನೆ, ಅದು ತಪ್ಪು. ಅವರ ಹೊರಗೆ ಬಂದಮೇಲೆ ಜೊತೆಗೆ ಸಿನಿಮಾ ಮಾಡಬೇಕೆಂಬ ಆಸೆ ಇದೆ, ಅದನ್ನು ಈಡೇರಿಸಿಕೊಡಿ,” ಎಂದು ಕನಕಪುರ ಶ್ರೀನಿವಾಸ್ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ.
ಧ್ರುವ ಸರ್ಜಾ, ಪ್ರೇಮ್ಗೆ ಕ್ಷಮೆಯಾಚನೆ
“ಧ್ರುವ ಸರ್ಜಾ ಅವರ ಜೊತೆ ನಾನು 3 ಸಿನಿಮಾ ಮಾಡಿದ್ದೇನೆ. ನಾನೊಬ್ಬ ಹಳ್ಳಿ ಹುಡುಗ. ನಿಮ್ಮಂತಹ ಕಲಾವಿದರು ಬೇಕು. ನಮಗೆ ದಯವಿಟ್ಟು ಕಾಲ್ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಸಿನಿಮಾ ಮಾಡಿಕೊಡಿ. ಪ್ರೇಮ್, ಎ.ಪಿ. ಅರ್ಜುನ್ ಅವರು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ. ದಯವಿಟ್ಟು ನೀವೆಲ್ಲ ಸಹಕರಿಸಬೇಕು,” ಎಂದು ಕನಕಪುರ ಶ್ರೀನಿವಾಸ್ ಅವರು ಕೇಳಿಕೊಂಡಿದ್ದಾರೆ.
ಕೋಪದ ಕೈಗೆ ಬುದ್ಧಿ ಕೊಡಬೇಡಿ
ದೊಡ್ಡವರು ಸುಮ್ಮ ನೇ ಹೇಳಿದ್ದಾರಾ, ಕೋಪದ ಕೈಗೆ ಬುದ್ಧಿ ಕೊಡಬಾರದು ಅಂತಾ. ಯಾವುದೇ ಮನುಷ್ಯ ಆಗಲಿ ಕೋಪ ಬಂದಾಗ ತಾಳ್ಮೆಯನ್ನು ಮಾತ್ರ ಮರೆಯಬಾರದು. ಯಾಕಂದ್ರೆ, ಇದರಿಂದ ಮುಂದಾಗುವ ಎಷ್ಟೋ ಅನಾಹುತಗಳು ತಪ್ಪುತ್ತವೆ. ಒಂದು ವೇಳೆ ನಾನು ಇರೋದೆ ಹೀಗೆ ಎಂದು ಮಾತಾನಾಡುವ ಬರದಲ್ಲಿ ಮತ್ತೊಬ್ಬ ವ್ಯಕ್ತಿಗೆ ಕಟ್ಟದಾಗಿ ಬೈದರೆ, ಎದುರಾಳಿ ಕೂಡ ತಕ್ಕ ಪಾಠ ಕಲಿಸಲು ಸಿದ್ಧನಾಗುತ್ತಾನೆ ಎನ್ನುವುದನ್ನು ಮರೆಯಬಾರದು.
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
-

ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ… Solar Eclipse
-

ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kanakapura-srinivas-issues-public-apology-to-darshan-puneeth-rajkumar-jogi-prem-and-others-444345.html. xn--babytilbehr-pgb.com does not claim ownership of this content. All rights remain with the original publisher.
