
Sports
oi-Madhusudhan KR
Hardik Pandya: ಟಿ20 ವಿಶ್ವಕಪ್ 2026 ಟೂರ್ನಿಯ ನಡುವೆ ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಸಮಯ ಕಳೆದಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರಗಳು ಅಭಿಮಾನಿಗಳ ಗಮನ ಸೆಳೆದಿವೆ. ಹಾಗಾದ್ರೆ, ಮಹಿಕಾ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರ.
ಮಹಿಕಾ ಶರ್ಮಾ ಇಂದು ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಹಿನ್ನೆಲೆ ಹಾರ್ದಿಕ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡು ಅವರಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. “ಹ್ಯಾಪಿ ಬರ್ತ್‌ಡೇ ಮೈ ಪ್ರಿನ್ಸೆಸ್” ಎಂದು ಬರೆಯುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದೆ.

ಟಿ20 ವಿಶ್ವಕಪ್ ನಡೆಯುತ್ತಿರುವ ಸಂದರ್ಭದಲ್ಲೂ ಮಹಿಕಾ ಹಲವಾರು ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತು ತಂಡದ ಜೊತೆ ಪ್ರಯಾಣಿಸುತ್ತಿರುವ ದೃಶ್ಯಗಳೂ ಗಮನ ಸೆಳೆದಿವೆ. ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಅವರು ಶ್ರೀಲಂಕಾಕ್ಕೆ ಸಹ ತೆರಳಿದ್ದರು.
ಹಾರ್ದಿಕ್ ತಬ್ಬಿಕೊಂಡ ಮಹಿಕಾ ಶರ್ಮಾ ಯಾರು?
ಮಹಿಕಾ ಶರ್ಮಾ ಮಾಡೆಲ್, ನಟಿ ಹಾಗೂ ಫಿಟ್ನೆಸ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ದೆಹಲಿಯಲ್ಲಿ ಜನಿಸಿದ ಅವರು ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇಂದು ಅವರು ತಮ್ಮ 25ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ.
ಈ ಹಿನ್ನೆಲೆ ಹಾರ್ದಿಕ್ ಪಾಂಡ್ಯ ಅವರು ಟಿ20 ವಿಶ್ವಕಪ್ ಟೂರ್ನಿಯ ನಡುವೆಯೇ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಸಮಯ ಕಳೆದಿದ್ದಾರೆ. ಸ್ಮಿಮ್ಮಿಂಗ್ ಫೂಲ್(ಈಜುಕೊಳ)ನಲ್ಲಿ ಇಬ್ಬರು ಪರಸ್ಪರ ತಬ್ಬಿಕೊಂಡು ಎಂಜಾಯ್ ಮಾಡುತ್ತಿದ್ದು, ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೆ, ಪಾಂಡ್ಯ ತಮ್ಮ ಗೆಳತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬರಹ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಹೀಗೆ ಪಾಂಡ್ಯ ಬುಧವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ರೊಮ್ಯಾಂಟಿಕ್ ಶೈಲಿಯಲ್ಲಿ ಮಹಿಕಾಗೆ ಶುಭಾಶಯ ಕೋರಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಹಾರ್ದಿಕ್
ಹಾರ್ದಿಕ್ ಮತ್ತು ಮಹಿಕಾ ಅವರ ನಡುವಿನ ಸಂಬಂಧ ಕಳೆದ ವರ್ಷದಿಂದಲೇ ಚರ್ಚೆಯಲ್ಲಿದೆ. 2024ರಲ್ಲಿ ಹಾರ್ದಿಕ್ ತಮ್ಮ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ ಮಹಿಕಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ವಿಷಯಕ್ಕೆ ಬಂದರೆ, ಹಾರ್ದಿಕ್ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿ 87 ರನ್ ಗಳಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ ಹಲವು ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಮಿಬಿಯಾ ವಿರುದ್ಧದ ಪಂದ್ಯದಲ್ಲಿ ಅವರು ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.
ಗಮನ ಸೆಳೆದ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಿಶೇಷ ವಾಚ್
ಈ ನಡುವೆಯೇ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಆರಂಭಿಕ ಬ್ಯಾಟರ್ನ ವಿಕೆಟ್ ಕಬಳಿಸಿ ಹಾರ್ದಿಕ್ ಪಾಂಡ್ಯ ಗಮನ ಸೆಳೆದರು. ಈ ವೇಳೆ ಪಾಂಡ್ಯ ಅವರು ಧರಿಸಿದ್ದ ನೀಲಿ ಬಣ್ಣದ ವಿಶೇಷ ವಾಚ್ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಮಹಾಶಿವರಾತ್ರಿಯ ದಿನದಂದು ನಡೆದ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ವಿಶೇಷ ಆಕರ್ಷಣೆಯಾಗಿತ್ತು. ಇದರ ವಿಶೇಷತೆ ಏನೆಂದರೆ, ಧ್ಯಾನದಲ್ಲಿರುವ ಶಿವನ ಮುಖವನ್ನು ಅದರೊಳಗೆ ಇರಿಸಿರುವುದು. ಇನ್ನೂ ಈ ದುಬಾರಿ ವಾಚ್‌ನ ವಿಶೇಷತೆ ಬಗ್ಗೆ ಮುಂದಿನ ಸುದ್ದಿಯಲ್ಲಿ ತಿಳಿಸಲಾಗುವುದು.
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Abhishek Sharma: ವಿಶ್ವದ ನಂ.1 ಟಿ20 ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಎರಡು ಬಾರಿ ಡಕೌಟ್, ರವಿಶಾಸ್ತ್ರಿ ಬೆಂಬಲ
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
-

ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ… Solar Eclipse
-

ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/hardik-pandya-shares-romantic-poolside-moments-with-mahika-sharma-during-t20-world-cup-2026-444297.html. xn--babytilbehr-pgb.com does not claim ownership of this content. All rights remain with the original publisher.
