
Karnataka
oi-Manohara M
ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಜೊತೆಗೆ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ಬೆಂಗಳೂರು ಸಹಕಾರ ಹಾಲು ಒಕ್ಕೂಟವು (ಬಮೂಲ್) ಮಹತ್ವದ ಕ್ರಮ ಕೈಗೊಂಡಿದೆ. ಬಮೂಲ್ ಕೇಂದ್ರ ಕಚೇರಿಯಲ್ಲಿ ಇ-ಹಾಲು ಡೆಲಿವರಿ ವಾಹನಗಳ (EV) ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
ಅಧಿಕೃತ ಮಾರಾಟಗಾರರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಸರಬರಾಜು ಮಾಡುವ ಉದ್ದೇಶದಿಂದ ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ, ತಾಪಮಾನ ಏರಿಳಿತ, ವಿತರಣಾ ವಿಳಂಬ ಇತ್ಯಾದಿ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನಾಧಾರಿತ ಪರಿಹಾರವಾಗಿ ಇ-ವಾಹನಗಳನ್ನು ರೂಪಿಸಲಾಗಿದೆ.

ತಾಜಾತನ ಕಾಪಾಡುವ ತಂತ್ರಜ್ಞಾನ
ಈ ಇ-ಹಾಲು ಡೆಲಿವರಿ ವಾಹನಗಳಲ್ಲಿ ಪಿಯುಎಫ್ (Polyurethane Foam) ಇನ್ಸುಲೇಟೆಡ್ ಕಂಟೈನರ್ ಅಳವಡಿಸಲಾಗಿದ್ದು, ಒಳಗಿನ ತಾಪಮಾನವನ್ನು ನಿಯಂತ್ರಿತ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ. ಜೊತೆಗೆ ರೆಫ್ರಿಜರೇಟೆಡ್ ವ್ಯವಸ್ಥೆ ಇರುವುದರಿಂದ ಹಾಲು, ಮೊಸರು, ತುಪ್ಪ, ಪನೀರ್ ಸೇರಿದಂತೆ ವಿವಿಧ ಉತ್ಪನ್ನಗಳ ಗುಣಮಟ್ಟ ದೀರ್ಘಕಾಲ ಕಾಪಾಡಲು ಸಾಧ್ಯವಾಗುತ್ತದೆ. ಇದರಿಂದ ಬೇಸಿಗೆ ಕಾಲದಲ್ಲಿಯೂ ಹಾಲಿನ ತಾಜಾತನದಲ್ಲಿ ವ್ಯತ್ಯಾಸ ಉಂಟಾಗದಂತೆ ನೋಡಿಕೊಳ್ಳಬಹುದು.
ಜಿಪಿಎಸ್ ಮತ್ತು ಡಿಜಿಟಲ್ ಮಾನಿಟರಿಂಗ್
ಈ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ವಿತರಣಾ ಮಾರ್ಗವನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಬಹುದು. ಯಾವ ಪ್ರದೇಶಕ್ಕೆ ಯಾವ ಸಮಯಕ್ಕೆ ಸರಬರಾಜು ಆಗುತ್ತಿದೆ ಎಂಬುದನ್ನು ಕೇಂದ್ರದಿಂದಲೇ ಗಮನಿಸಲು ಸಾಧ್ಯ. ಇದರಿಂದ ಸಮಯಪಾಲನೆ ಸುಧಾರಿಸಿ, ವಿಳಂಬ ಅಥವಾ ಮಾರ್ಗ ಬದಲಾವಣೆಗಳ ಸಮಸ್ಯೆ ತಕ್ಷಣ ಪತ್ತೆಯಾಗುತ್ತದೆ.
ಇ-ಹಾಲು ಡೆಲಿವರಿ ವಾಹನಗಳಿಂದ ತಾಜಾತನ ಸಂರಕ್ಷಣೆ
ಬಮೂಲ್ ಕೇಂದ್ರ ಕಚೇರಿಯಲ್ಲಿಂದು ಒಕ್ಕೂಟದ ಅಧಿಕೃತ ಮಾರಾಟಗಾರರಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಅನುಕೂಲವಾಗುವ ಹಿತದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಇ-ಹಾಲು ವಾಹನದ ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಿದೆ.… pic.twitter.com/efv6OKWqjr
— DK Suresh (@DKSureshINC) February 20, 2026
ಪರಿಸರ ಸ್ನೇಹಿ ಮತ್ತು ಆರ್ಥಿಕ ಲಾಭ
ಇ-ವಾಹನಗಳ ಬಳಕೆ ಡೀಸೆಲ್ ಅಥವಾ ಪೆಟ್ರೋಲ್ ವಾಹನಗಳಿಗಿಂತ ಕಾರ್ಬನ್ ಉತ್ಸರ್ಗವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹಸಿರು ಶಕ್ತಿಯ ಬಳಕೆ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ಇಂಧನ ವೆಚ್ಚ ಕಡಿಮೆಯಾಗುವುದರಿಂದ ದೀರ್ಘಾವಧಿಯಲ್ಲಿ ಒಕ್ಕೂಟಕ್ಕೂ ಹಾಗೂ ಮಾರಾಟಗಾರರಿಗೂ ಆರ್ಥಿಕ ಉಳಿತಾಯವಾಗಲಿದೆ. ಇದರಿಂದ ಪ್ರಮುಖವಾಗಿ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಯೋಜನವಾಗಲಿದೆ. ಹಾಲಿನ ಗುಣಮಟ್ಟ ಮತ್ತು ಸುರಕ್ಷತೆ ಹೆಚ್ಚಳವಾಗಲಿದೆ. ನಿಗದಿತ ಸಮಯಕ್ಕೆ ವಿತರಣೆಯಿಂದ ವ್ಯಾಪಾರ ಸುಗಮವಾಗಲಿದ್ದು, ಉತ್ಪನ್ನ ಹಾನಿ ಮತ್ತು ಹಾಳಾಗುವಿಕೆ ಕಡಿಮೆ ಮಾಡಬಹುದಾಗಿದೆ. ದೂರದ ಪ್ರದೇಶಗಳಿಗೂ ಶೀತ ಸರಪಳಿ ವ್ಯವಸ್ಥೆಯೊಂದಿಗೆ ಸರಬರಾಜು ಮಾಡಲು, ಡಿಜಿಟಲ್ ಟ್ರ್ಯಾಕಿಂಗ್ನಿಂದ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ.
ಈ ಬಗ್ಗೆ ಮಾಹಿತಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, “ಬಮೂಲ್ ಕೇಂದ್ರ ಕಚೇರಿಯಲ್ಲಿ ಒಕ್ಕೂಟದ ಅಧಿಕೃತ ಮಾರಾಟಗಾರರಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಅನುಕೂಲವಾಗುವ ಹಿತದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಇ-ಹಾಲು ವಾಹನದ ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದೆ. ಇ-ಹಾಲು ಡೆಲಿವರಿ ವಾಹನಗಳು PUF ಇನ್ಸುಲೇಟೆಡ್ ಕಂಟೈನರ್ ಮತ್ತು ರೆಫ್ರಿಜರೇಟೆಡ್ ಸೌಲಭ್ಯಗಳನ್ನು ಹೊಂದಿದ್ದು, ಹಾಲಿನ ತಾಜಾತನವನ್ನು ಕಾಪಾಡುತ್ತವೆ. ಪರಿಸರ ಸ್ನೇಹಿ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜಿಪಿಎಸ್ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿವೆ. ಇದರಿಂದ ನಿಖರವಾದ ಸಮಯಕ್ಕೆ ಹಾಲಿನ ಉತ್ಪನ್ನಗಳನ್ನು ಡೆಲಿವರಿ ಮಾಡಬಹುದು. ಜೊತೆಗೆ ಹಾಲು ಉತ್ಪನ್ನಗಳ ಮಾರಾಟಗಾರರಿಗೆ ಹಾಗೂ ಸರಬರಾಜುದಾರರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.
ಇ-ಹಾಲು ಡೆಲಿವರಿ ವಾಹನಗಳ ಪರಿಚಯದಿಂದ ಹಾಲು ವಿತರಣಾ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಇದು ತಾಜಾತನ ಕಾಪಾಡುವ ಜೊತೆಗೆ ಪರಿಸರ ಸ್ನೇಹಿ ಕ್ರಮವಾಗಿದೆ. ಮಾರಾಟಗಾರರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶ ನಮ್ಮದು ಎಂದು ತಿಳಿಸಿದ್ದಾರೆ. ಇ-ಹಾಲು ಡೆಲಿವರಿ ವಾಹನಗಳ ಪರೀಕ್ಷಾರ್ಥ ಹಂತ ಯಶಸ್ವಿಯಾದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ. ಹಾಲು ವಿತರಣಾ ಕ್ಷೇತ್ರದಲ್ಲಿ ತಂತ್ರಜ್ಞಾನಾಧಾರಿತ ಪರಿವರ್ತನೆಗೆ ಇದು ದಿಕ್ಕು ತೋರಿಸುವ ಕ್ರಮ ಎಂದು ಹೇಳಲಾಗುತ್ತಿದೆ.
-

Punch EV: ಭಾರತದಲ್ಲಿ ಟಾಟಾ ಪಂಚ್-ಇವಿ ಬಿಡುಗಡೆ: 10 ಲಕ್ಷಕ್ಕಿಂತ ಕಡಿಮೆ ಬೆಲೆ, 468 ಕಿ.ಮೀ ರೇಂಜ್
-

Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು?
-

CBSE 10ನೇ ತರಗತಿ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ: ‘ಕೇಸ್ ಸ್ಟಡಿ’ ವಿಭಾಗಕ್ಕೆ ಹೆಚ್ಚಿನ ಗಮನ ಅಗತ್ಯ
-

Gold, Silver Rate Feb 18: ಚಿನ್ನ ಪ್ರಿಯರಿಗೆ 4ನೇ ದಿನವೂ ಸಂತೋಷ: ಬೆಳ್ಳಿ ಬೆಲೆ ಬರೋಬ್ಬರಿ 5,000 ರೂ. ಇಳಿಕೆ
-

ನಮ್ಮ ಮೆಟ್ರೋ: ಹಸಿರು ಮಾರ್ಗದ ಜಯನಗರ–ಆರ್.ವಿ.ರಸ್ತೆ ನಡುವೆ ನಿಧಾನಗತಿಯಲ್ಲಿ ರೈಲು ಸಂಚಾರ
-

ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ, ಈ ಮಾರ್ಗದಲ್ಲಿ ವಿಶೇಷ ರೈಲು… South Western Railway
-

Gold: ಚಿನ್ನ – ಬೆಳ್ಳಿಗೆ ಪಿಂಕ್ ಕಾಗದ ದಶಕಗಳಿಂದ ಆಸರೆ: ಏನಿದರ ವಿಶೇಷತೆ, ಹಿನ್ನೆಲೆ ವಿವರ ಇಲ್ಲಿದೆ
-

IT – BT: ಕರಾವಳಿ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ಸಮರ
-

KSRTC: ನಾಳೆ ಬಸ್ ಸಂಚಾರ ವ್ಯತ್ಯಾಸ: 38 ತಿಂಗಳ ವೇತನ ಬಾಕಿ: ಫೆ.19–20ಕ್ಕೆ ಕೆಎಸ್ಆರ್ಟಿಸಿ ಸೇರಿ ಸಾರಿಗೆ ನೌಕರರ ಮುಷ್ಕರ
-

Horoscope February 18: ಆರೋಗ್ಯದ ಮೇಲೆ ಎಚ್ಚರವಹಿಸಿ, ಯಾವ ರಾಶಿಯವರಿಗೆ ಶುಭ-ಅಶುಭ?, ದಿನ ಭವಿಷ್ಯ
-

Ambur Biryani: ಬೆಂಗಳೂರಿನ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ಗೆ ಶಾಕ್ ಕೊಟ್ಟ ಜಿಬಿಎ
-

Rashmi Leela biography: ಸೀರಿಯಲ್ ಲೋಕದಿಂದ ಇಹಲೋಕದವರೆಗೆ: ನಟಿ ರಶ್ಮಿ ಲೀಲಾ ಹೋರಾಟ ಮತ್ತು ಅಕಾಲಿಕ ವಿದಾಯ
-

ಔಷಧ ಖರೀದಿಗೆ 30 ಕೋಟಿ ರೂ.ಅನುದಾನ: ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ನೆಮ್ಮದಿ
-

Explainer: ಉತ್ತರ ಭಾರತದ ಮಹಿಳೆ ಅಡುಗೆಮನೆಗೆ ಸೀಮಿತ, ದಕ್ಷಿಣ ಭಾರತದ ಮಹಿಳೆ ಮಾಡರ್ನ್: ಈ ವಿಭಜನೆ ಸರಿಯೇ?
-

Karnataka Weather Updates: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂದಿನ 5 ದಿನ ಒಣಹವೆ ಮುಂದುವರಿಕೆ, ಚಳಿ ಯಥಾಸ್ಥಿತಿ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bamul-introduces-e-milk-delivery-vehicles-in-bengaluru-to-preserve-freshness-says-dk-suresh-444503.html. xn--babytilbehr-pgb.com does not claim ownership of this content. All rights remain with the original publisher.
