
Karnataka
oi-Shankrappa Parangi
ಬಾಗಲಕೋಟೆ: ಹೊಲದ ಕೆಲಸಕ್ಕೆಂದು ನೆರೆಯ ಮಹಾರಾಷ್ಟ್ರದಿಂದ ಬಂದಿದ್ದ ಕಬ್ಬು ಕಟಾವು ಗ್ಯಾಂಗ್ ಕೆಲಸ ಮುಗಿಸಿ ಮರಳಿ ತಮ್ಮೂರುಗಳಿಗೆ ಹೋಗುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನೋಡ ನೋಡುತ್ತಲೇ ಕೂಲಿ ಕಾರ್ಮಿಕರನ್ನು ಒಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಭಾರೀ ಅನಾಹುತ ಸಂಭವಿಸಿದ್ದು, ಇದರಲ್ಲಿ ಎರಡು ವರ್ಷ ಮಗು ಸೇರಿ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಮಖಂಡಿ ತಾಲೂಕಿನ ಮುಧೋಳ ರಸ್ತೆಯಲ್ಲಿ ನೆನ್ನೆ ಶುಕ್ರವಾರ (ಫೆ.20) ರಾತ್ರಿ ನಡೆದಿದೆ.
ಎರಡು ವರ್ಷ ಮಗು ಹಾಗೂ ಮನುಷ್ (23), ಲಕ್ಷ್ಮೀ 27, ರೇಖಾ (28) ಮೃತ ದುರ್ದೈವಿಗಳಾಗಿದ್ದಾರೆ. ಈ ಮೃತರು ಸೇರಿದಂತೆ ಒಟ್ಟು 17 ಮಂದಿ ಕರ್ನಾಟಕದ ಈ ಜಿಲ್ಲೆಯ ಯರಗಟ್ಟಿಯ ಜಮೀನೊಂದರಲ್ಲಿ ಕಬ್ಬು ಬೆಳೆ ಕಟಾವಿಗೆಂದು ಆಗಮಿಸಿದ್ದರು. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗುಪ್ತವಾಡ ಗ್ರಾಮದಿಂದ ಬಂದ ಆಳುಗಳು ಇವರಾಗಿದ್ದು, ಎಂದಿನಂತೆ ಈ ಕಬ್ಬು ಕಟಾವು ಗ್ಯಾಂಗ್ ತಮ್ಮ ಕೆಲಸ ಮುಗಿಸಿ ಕೂಲಿ ಹಣ ಪಡೆದು ತಮ್ಮೂರಿನತ್ತ ಟ್ರ್ಯಾಕ್ಟರ್ನಲ್ಲಿ ಶನಿವಾರ ರಾತ್ರಿ ಪ್ರಯಾಣ ಬೆಳೆಸಿದ್ದರು.

ಟ್ರ್ಯಾಕ್ಟರ್ ಮುಧೋಳ ಹೊರ ವಲಯದತ್ತ ಬರುತ್ತಿದ್ದಂತೆ ಕಟ್ಟಿಕರೆರೆ ಉದ್ಯಾನ ಬಳಿಕ ನಿಯಂತ್ರಣ ತಪ್ಪಿ ಕಂದಕ ಮಗುಚಿ ಬಿದ್ದಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿ ಉಸಿರು ಚೆಲ್ಲಿದರು. ಸುದ್ದಿ ತಿಳಿದು ಸ್ಥಳಕ್ಕೆ ಜಮಖಂಡಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಗಾಯಾಳಗಳಿಗೆ ಸ್ಥಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಟ್ರ್ಯಾಕ್ಟರ್ ಬಿದ್ದ ಜಾಗದಲ್ಲಿ ಇಂದು ಬೆಳಗ್ಗೆ ಜನರು ಜಮಾಯಿಸಿದ್ದು ಕಂಡು ಬಂತು. ಮುಧೋಳ ರಸ್ತೆಯ ಘಟನೆ ಸಂಭವಿಸಿದ ಜಾಗದಲ್ಲಿ ಕೆಲ ಕಾಲ ಸಂಚಾರ ನಿಧಾನವಾಗಿತ್ತು.
ಅದೃಷ್ಟವಶಾತ್ ಹೆಚ್ಚಿನ ಪ್ರಾಣ ಹಾನಿ ಆಗಿಲ್ಲ
ಕಾರ್ಮಿಕರನ್ನು ಹೊತ್ತು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಗುಪ್ತವಾಡದಲ್ಲಿ ಹೊರಟಿದ್ದ ಈ ಟ್ರ್ಯಾಕ್ಟರ್ ಹೆಚ್ಚಿನ ವೇಗದಲ್ಲಿತ್ತು ಎನ್ನಲಾಗಿದೆ. ವೇಗವಾಗಿ ಚಲಿಸುವಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣಕ್ಕೆ ಬಾರದು ಕಂದಕಕ್ಕೆ ಉರುಳಿದೆ. ಇದು ಭಾರೀ ಅವಘಡ ಆಗಿದ್ದು, ಅದರ ಪರಿಣಾಮ ಎಷ್ಟಿತ್ತೆಂದರೆ ಹೆಚ್ಚಿನ ಕಾರ್ಮಿಕರಿಗೆ ಜೀವ ಹಾನಿ ಆಗುವುದಿತ್ತು. ಅದೃಷ್ಟವಶಾತ್ ಹೆಚ್ಚಿನ ಪ್ರಾಣಾಪಾಯ ಆಗಿಲ್ಲ, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಆಗಿದೆ.
ನೆಲಮಂಗಲ, ಹೊಸಕೋಟೆ ರಸ್ತೆಯಲ್ಲಿ ಭೀಕರ ಅಪಘಾತ
ಇತ್ತೀಚೆಗೆ ಬೆಂಗಳೂರಿನ ನೆಲಮಂಗಲ ಬಳಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ಮಧ್ಯ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಐವರು ಜೀವ ಬಿಟ್ಟಿದ್ದರು. ವಾರದ ಹಿಂದಷ್ಟೇ ಹೊಸಕೋಟೆ ರಸ್ತೆಯಲ್ಲಿ ಕಾರು ಹಾಗೂ ಬೈಕ್ ಮತ್ತು ಟ್ರಕ್ ಮಧ್ಯ ಅಪಘಾತ ಸಂಭವಿಸಿತ್ತು. ಇದರಲ್ಲಿ ಆರು ವಿದ್ಯಾರ್ಥಿಗಳು ಸೇರಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿದ್ಯಾಭ್ಯಾಸ ಮುಗಿಸಿ ಸುಂದರ ಬದುಕು ಕಟ್ಟಿಕೊಳ್ಳಬೇಕಿದ್ದ ಎಳೆಯ ಜೀವಗಳು ಹೀಗೆ ರಸ್ತೆಯಲ್ಲಿ ಉಸಿರು ಚೆಲ್ಲಿದ್ದು ನೋಡಿ ಸಾಕಷ್ಟು ಜನರು ವಿಷಾದ ವ್ಯಕ್ತಪಡಿಸಿದ್ದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bagalkot-tragedy-4-sugarcane-workers-including-child-killed-as-tractor-overturns-in-jamkhandi-road-444543.html. xn--babytilbehr-pgb.com does not claim ownership of this content. All rights remain with the original publisher.
