
Entertainment
oi-Manohara M
Rashmika Mandanna wedding: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆ ವದಂತಿ ನಡುವೆ ದಿನಕ್ಕೊಂದು ಹೊಸ ಸುದ್ದಿ ಸದ್ದು ಮಾಡುತ್ತಿದೆ. ಚಿತ್ರರಂಗದ ಹಾಟ್ ಟಾಪಿಕ್ ಆಗಿದ್ದ ಇವರ ಮದುವೆ ಗಾಸಿಪ್ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇಲ್ಲಿವರೆಗೆ ಇಬ್ಬರೂ ತಮ್ಮ ಮದುವೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ತಮ್ಮ ಮದುವೆಯನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
ಉದಯಪುರದಲ್ಲಿ ಫೆಬ್ರವರಿ 26ರಂದು ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿತ್ತು. ಇತ್ತೀಚೆಗೆ ವೈರಲ್ ಆದ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿತು. ಆದರೆ ಇಷ್ಟು ದಿನಗಳವರೆಗೆ ಇಬ್ಬರೂ ಮದುವೆ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ.

ಹಿರಿಯ ಪತ್ರಕರ್ತ ಸುಭಾಷ್ ಕೆ ಜಾ ಕಳುಹಿಸಿದ ಶುಭಾಶಯ ಸಂದೇಶಕ್ಕೆ ರಶ್ಮಿಕಾ “Thank you” ಎಂದು ನಗುಮುಖದ ಇಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ವರದಿ ಹೊರಬಿದ್ದಿದೆ. ಈ ಒಂದೇ ಪದ ಈಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಇದು ಮದುವೆ ಬಗ್ಗೆ ಪರೋಕ್ಷ ದೃಢೀಕರಣವೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹೈದರಾಬಾದ್-ಮುಂಬೈನಲ್ಲಿ ಆರತಕ್ಷತೆ?
ಮತ್ತೊಂದು ವರದಿಯ ಪ್ರಕಾರ ಮದುವೆ ಕಾರ್ಯಕ್ರಮ ಅತ್ಯಂತ ಖಾಸಗಿಯಾಗಿ ನಡೆಯಲಿದೆ. ಕುಟುಂಬದವರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಚಿತ್ರರಂಗದ ಸಹ ಕಲಾವಿದರನ್ನು ಸಹ ಆಹ್ವಾನಿಸಿಲ್ಲ ಎನ್ನಲಾಗುತ್ತಿದೆ. ಆದರೆ ನಂತರ ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಅದ್ಧೂರಿ ಆರತಕ್ಷತೆ ನಡೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ವಿಜಯ್ ದೇವರಕೊಂಡ ಅವರ ನಿವಾಸವನ್ನು ದೀಪಾಲಂಕಾರ ಹಾಗೂ ಹೂವಿನ ಅಲಂಕಾರದಿಂದ ಸಿಂಗರಿಸಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ. ಭಾರತೀಯ ಸಂಪ್ರದಾಯದಂತೆ ಮದುವೆಗೂ ಮುನ್ನ ಮನೆ ಅಲಂಕರಿಸುವ ಪದ್ಧತಿ ಇರುವುದರಿಂದ ಈ ದೃಶ್ಯಗಳು ಗಾಸಿಪ್ಗಳಿಗೆ ಮತ್ತಷ್ಟು ಬಲ ನೀಡಿವೆ. ಇಬ್ಬರೂ ತಮ್ಮ ಸಿನಿಮಾ ಪ್ರಾಜೆಕ್ಟ್ಗಳಿಂದ ಸ್ವಲ್ಪ ವಿರಾಮ ಪಡೆದಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
ಮದುವೆ ಸಮಾರಂಭದ ನಂತರ ರಶ್ಮಿಕಾ ಮತ್ತೆ ತಮ್ಮ ಹಿಂದಿ ಹಾಗೂ ತೆಲುಗು ಚಿತ್ರಗಳ ಚಿತ್ರೀಕರಣಕ್ಕೆ ಮರಳುವ ನಿರೀಕ್ಷೆಯಿದೆ. ಆದರೆ ಇನ್ನೂ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿಯೇ ಇದೆ. ಅಭಿಮಾನಿಗಳು ಮಾತ್ರ “ರೋಡಿ ಜೋಡಿ” ಮದುವೆ ಸುದ್ದಿಗೆ ಕಾದು ಕುಳಿತಿದ್ದಾರೆ. ಈಗ ಎಲ್ಲರ ಕಣ್ಣು ಅಧಿಕೃತ ಪ್ರಕಟಣೆಯ ಮೇಲೆ ನೆಟ್ಟಿದೆ.
ಒಂದೇ ಜಾಹೀರಾತಿನಲ್ಲಿ ರಶ್ಮಿಕಾ-ವಿಜಯ್
ಮದುವೆ ಗಾಸಿಪ್ಗಳ ಮಧ್ಯೆ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ರಶ್ಮಿಕಾ ಹಾಗೂ ವಿಜಯ್ ಶೀಘ್ರದಲ್ಲೇ ಹೊಸ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ಮತ್ತೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ಹಿಂದೆ ಅವರು ಒಟ್ಟಿಗೆ ಸೋಪ್ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಆ ಜಾಹೀರಾತು ಅಭಿಮಾನಿಗಳಲ್ಲಿ ಭಾರೀ ಮೆಚ್ಚುಗೆ ಪಡೆದಿತ್ತು. ಇದೀಗ ಹೊಸ ಜಾಹೀರಾತಿನ ಚಿತ್ರೀಕರಣದ ವಿವರಗಳನ್ನು ಗುಪ್ತವಾಗಿಟ್ಟುಕೊಂಡಿದ್ದು, ಮದುವೆ ಸಂಭ್ರಮಗಳಿಗೆ ಅಡ್ಡಿಯಾಗದಂತೆ ಶೂಟ್ ಶೀಘ್ರ ಪೂರ್ಣಗೊಳಿಸುವ ಸಾಧ್ಯತೆ ಇದೆ. ಮುಂದಿನ “ರಣಬಾಲಿ” ಸಿನಿಮಾದಲ್ಲೂ ವಿಜಯ್ ಮತ್ತು ರಶ್ಮಿಕಾ ಜೊತೆಯಾಗಿದ್ದಾರೆ. ಸದ್ಯ ಮದುವೆಯದ್ದೇ ಎಲ್ಲೆಡೆ ಚರ್ಚೆಗಳು ಜೋರಾಗಿವೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-reacts-to-wedding-wishes-amid-telugu-actor-vijay-deverakonda-marriage-rumours-444619.html. xn--babytilbehr-pgb.com does not claim ownership of this content. All rights remain with the original publisher.
