ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರು ಗಮನಿಸಲೇಬೇಕಾದ ಮಾಹಿತಿ: ಏಪ್ರಿಲ್‌ 1ರಿಂದ ಈ ನಿಯಮದಲ್ಲಿ ಮಹತ್ವದ ಬದಲಾವಣೆ | NHAI: India to Go Fully Digital on National Highway Tolls from April 1, 2026: Know Complete details

India

oi-Madhusudhan KR

NHAI: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಏಪ್ರಿಲ್ 1, 2026ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ವ್ಯಾಪ್ತಿಯಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧಾರ ಮಾಡಿದೆ.

ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಸಂಪೂರ್ಣ ಡಿಜಿಟಲ್ ಟೋಲಿಂಗ್ ವ್ಯವಸ್ಥೆ ರೂಪಿಸುವುದೇ ಉದ್ದೇಶ ಎಂದು ಸ್ಪಷ್ಟಪಡಿಸಿದೆ. ಯೋಜನೆ ಜಾರಿಗೆ ಬಂದ ಬಳಿಕ ವಾಹನ ಸವಾರರು ಟೋಲ್ ಶುಲ್ಕವನ್ನು ಕೇವಲ ಡಿಜಿಟಲ್ ವಿಧಾನಗಳಾದ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಬೇಕಾಗುತ್ತದೆ.

NHAI India to Go Fully Digital on National Highway Tolls from April 1 2026 Know Complete details

ನಗದು ಪಾವತಿ ನಿಲ್ಲಿಸುವ ಉದ್ದೇಶ ಏನು?

ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ಕಡಿಮೆ ಮಾಡುವುದು, ವಾಹನ ಸಂಚಾರವನ್ನು ವೇಗವಾಗಿ ಸಾಗಿಸಲು ನೆರವು ನೀಡುವುದು ಹಾಗೂ ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಈ ಕ್ರಮದ ಪ್ರಮುಖ ಉದ್ದೇಶ ಆಗಿದೆ. ಈಗಾಗಲೇ ದೇಶದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದ್ದು, ಇದರಿಂದ ನಗದು ಪಾವತಿ ಕಡಿಮೆ ಆಗಿದೆ. ಇದೀಗ ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ ವರ್ಗಾವಣೆ ಆದರೆ, ವಹಿವಾಟುಗಳಲ್ಲಿ ಸ್ಥಿರತೆ ಹೆಚ್ಚುವ ಜೊತೆಗೆ ಸಮಯ ಉಳಿತಾಯ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವಾಹನ ಸವಾರರು ಗಮನಿಸಬೇಕಾದ ಮಾಹಿತಿ

ಯೋಜನೆ ಜಾರಿಗೆ ಬಂದ ನಂತರ ನಗದು ನಗದು ಪಾವತಿ ಪಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಪ್ರಯಾಣಿಕರು ತಮ್ಮ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳುವುದು ಅಥವಾ ಯುಪಿಐ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಅಗತ್ಯವಾಗುತ್ತದೆ. ಸರ್ಕಾರದ ಈ ಕ್ರಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಮತ್ತಷ್ಟು ಸುಗಮ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಸಹಕಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೋಲ್‌ ಶುಲ್ಕ ಸಂಗ್ರಹದ ಉದ್ದೇಶವೇನು?

ದೇಶದ ಪ್ರಮುಖ ರಸ್ತೆಗಳ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆಗೆ ಅಗತ್ಯವಾದ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಟೋಲ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ನಿರ್ಮಿಸುತ್ತವೆ ಮತ್ತು ನಿರ್ವಹಿಸುತ್ತವೆ.

ಟೋಲ್‌ ಶುಲ್ಕವು ಮಾಹಿತಿ ಪ್ರಕಾರ, ಅಕ್ಸಲ್‌ಗಳ ಸಂಖ್ಯೆ ಹಾಗೂ ಪ್ರಯಾಣಿಸುವ ದೂರದ ಆಧಾರದ ಮೇಲೆ ನಿಗದಿಯಾಗುತ್ತದೆ. ಕಾರು, ಜೀಪ್‌, ವ್ಯಾನ್‌, ಬಸ್‌, ಟ್ರಕ್‌ ಮುಂತಾದ ವಾಹನಗಳಿಗೆ ಬೇರೆ ಬೇರೆ ದರಗಳು ಅನ್ವಯಿಸುತ್ತವೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ಮಾಸಿಕ ಪಾಸ್‌ ವ್ಯವಸ್ಥೆಯೂ ಇದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಪಾವತಿ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಫಾಸ್ಟ್ಯಾಗ್‌ ಮೂಲಕ ವಾಹನಗಳು ಟೋಲ್‌ ಪ್ಲಾಜಾಗಳಲ್ಲಿ ನಿಲ್ಲದೆ ಸ್ವಯಂಚಾಲಿತವಾಗಿ ಶುಲ್ಕ ಪಾವತಿಸಬಹುದು. ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ ಮತ್ತು ಸಮಯ ಉಳಿತಾಯವಾಗುತ್ತದೆ.

ಕೆಲವು ವಿಶೇಷ ಸಂದರ್ಭಗಳಲ್ಲಿ, ಉದಾಹರಣೆಗೆ ಆಂಬ್ಯುಲೆನ್ಸ್‌, ಅಗ್ನಿಶಾಮಕ ವಾಹನಗಳು ಅಥವಾ ಕೆಲವು ಸರ್ಕಾರಿ ವಾಹನಗಳಿಗೆ ಟೋಲ್‌ ವಿನಾಯಿತಿ ನೀಡಲಾಗುತ್ತದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್‌ ವ್ಯವಸ್ಥೆ ಉತ್ತಮ ರಸ್ತೆ ಮೂಲಸೌಕರ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು ಮಹತ್ವದ ಪಾತ್ರವಹಿಸುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/nhai-india-to-go-fully-digital-on-national-highway-tolls-from-april-1-2026-know-complete-details-444523.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo