
Entertainment
oi-Manohara M
Vijayalakshmi Darshan: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ ಅವರು ಸದ್ಯ ಜೈಲಿನಲ್ಲಿದ್ದು, ಪ್ರತಿ ಹಂತದಲ್ಲೂ ನಟ ಧನ್ವೀರ್ ಗೌಡ ದರ್ಶನ್ ಅವರ ಜೊತೆ ನಿಂತಿದ್ದು ಗೊತ್ತೇ ಇದೆ. ಇನ್ನು ಮಂಡ್ಯದಲ್ಲಿ ನಡೆದ ಧನ್ವೀರ್ ಗೌಡ ಅಭಿನಯದ “ಹಯಗ್ರೀವ” ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಗಮಿಸಿದ್ದು ಅಭಿಮಾನಿಗಳ ಗಮನ ಸೆಳೆಯಿತು. ಈ ವೇಳೆ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ತುಂಬಾ ಸ್ಟ್ರಾಂಗ್ ಆಗಿದ್ದಾರೆ
ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು “ಡಿಬಾಸ್… ಡಿಬಾಸ್…” ಎಂದು ಘೋಷಣೆ ಕೂಗುತ್ತ ದರ್ಶನ್ ಅವರ ಬಗ್ಗೆ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮಿ, “ನಿಮ್ಮೆಲ್ಲರ ಡಿಬಾಸ್ ಚೆನ್ನಾಗಿದ್ದಾರೆ. ಇಷ್ಟೊಂದು ಕಷ್ಟ, ನೋವುಗಳ ನಡುವೆಯೂ ಅವರು ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ನೀವೇ ಅಭಿಮಾನಿಗಳು. ನೀವು ಎಲ್ಲರೂ ಅವರೊಂದಿಗೆ ಇದ್ದೀರ ಅನ್ನೋ ಭರವಸೆಯಿಂದಲೇ ಅವರು ಧೈರ್ಯದಿಂದ ಎಲ್ಲವನ್ನೂ ಎದುರಿಸುತ್ತಿದ್ದಾರೆ. ನಮ್ಮ ಮೇಲೆ ಇದೇ ರೀತಿ ಸದಾ ಪ್ರೀತಿ ಇರಲಿ” ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್ ಅವರ ಹುಟ್ಟುಹಬ್ಬವೂ ನಡೆದಿತ್ತು. ಆದರೆ ದರ್ಶನ್ ಜೈಲಿನಲ್ಲಿರುವುದರಿಂದ ಅವರು ಸ್ವತಃ ಅಭಿಮಾನಿಗಳೊಂದಿಗೆ ಆಚರಿಸಲು ಸಾಧ್ಯವಾಗಲಿಲ್ಲ. ಆದರೂ ಅಭಿಮಾನಿಗಳು ಅವರ ಅನುಪಸ್ಥಿತಿಯಲ್ಲೇ ರಕ್ತದಾನ, ಅನ್ನದಾನ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಹುಟ್ಟುಹಬ್ಬದ ಸಂದರ್ಭದಲ್ಲೇ ವಿಜಯಲಕ್ಷ್ಮಿ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿ ಬಂದಿದ್ದರು. ಆದರೆ ದರ್ಶನ್ ಅವರನ್ನು ನೋಡಲು ಆಗಲಿಲ್ಲವಲ್ಲಾ ಎನ್ನುವ ಬೇಸರವಂತೂ ಅಭಿಮಾನಿಗಳಲ್ಲಿದೆ. ಆದರೆ ಅಭಿಮಾನಿಗಳು ಹುಟ್ಟುಹಬ್ಬದ ದಿನ ಮಾಡಿದ್ದ ಸೇವಾ ಕಾರ್ಯಗಳ ಬಗ್ಗೆ ದರ್ಶನ್ ಮೆಚ್ಚುಗೆಯ ಸಂದೇಶ ಕಳಿಸಿದ್ದರು. ಇದನ್ನು ಖುದ್ದು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದರು. ಮಂಡ್ಯ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಹೇಳಿದ ಮಾತುಗಳು ಅಭಿಮಾನಿಗಳಿಗೆ ಮತ್ತಷ್ಟು ಧೈರ್ಯ ತುಂಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಕೂಡ ವೈರಲ್ ಆಗಿವೆ.
🙏❤️#DBoss #DBossForever pic.twitter.com/mg39oWxtWx
— Thoogudeepa Team – R (@DTEAM7999) February 21, 2026
ಧನ್ವೀರ್ ನಮ್ಮ ಕುಟುಂಬದಲ್ಲಿ ಒಬ್ಬರು
ಇದೀಗ ಧನ್ವೀರ್ ಗೌಡ ಅವರ “ಹಯಗ್ರೀವ” ಸಿನಿಮಾಗೆ ದರ್ಶನ್ ಕುಟುಂಬ ಸಾಥ್ ನೀಡುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಅವರು ಧನ್ವೀರ್ ಬಗ್ಗೆ ಆತ್ಮೀಯ ಮಾತುಗಳನ್ನಾಡಿದರು. “ಧನ್ವೀರ್ ನಮಗೆ ಹೊರಗಿನವರು ಅನ್ನಿಸುವುದೇ ಇಲ್ಲ. ನನಗೂ ಹಾಗೂ ದರ್ಶನ್ ಅವರಿಗೆ ಕುಟುಂಬಕ್ಕಿಂತಲೂ ಹೆಚ್ಚು. ನಮ್ಮ ಕುಟುಂಬದ ಸದಸ್ಯರೇ ಆಗಿದ್ದಾರೆ. ನಮಗೆ ತೋರಿಸುವ ಪ್ರೀತಿ, ಬೆಂಬಲ ಅವರಿಗೆ ಕೂಡ ಇದೇ ರೀತಿ ಸಿಗಲಿ. ಅವರ ಹಯಗ್ರೀವ ಸಿನಿಮಾದ ಟ್ರೇಲರ್ ನೋಡಿದೆ. ತುಂಬಾ ಚೆನ್ನಾಗಿದೆ. ಎಲ್ಲರೂ ಸಿನಿಮಾ ನೋಡಿ ಬೆಂಬಲಿಸಿ, ಥಿಯೇಟರ್ನಲ್ಲೇ ಸಿನಿಮಾ ನೋಡಿ, ಪೈರಸಿಗೆ ಸಪೋರ್ಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-is-strong-and-doing-well-says-vijayalakshmi-to-fans-at-mandya-hayagreeva-movie-event-444623.html. xn--babytilbehr-pgb.com does not claim ownership of this content. All rights remain with the original publisher.
