
Karnataka
-Shankrappa Parangi
ಬೆಂಗಳೂರು: ಕರ್ನಾಟಕ ರಾಜ್ಯದ ಜನರ ಗಮನ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಬಜೆಟ್ 2026 (Karnataka Budget 2026) ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಈ ಬಾರಿ ಬಜೆಟ್‌ನಲ್ಲಿ ಸುಮಾರು ಮೂರು ದಶಕಗಳ ನಂತರ ದೇಶದ ಮೊದಲ ಐಟಿ ನೀತಿಯನ್ನು ಕರ್ನಾಟಕದಲ್ಲಿ ಪರಿಚಯಿಸುವ ಬಗ್ಗೆ ಘೋಷಿಸಲಿದ್ದಾರೆ. ದೇಶವು ಸಮಗ್ರ ಕೃತಕ ಬುದ್ಧಿಮತ್ತೆ (AI) ಜೊತೆಗೆ ಮುಂಚೂಣಿ ಸಾಧಿಸುತ್ತಿದೆ. ಎಲ್ಲ ರಂಗದಲ್ಲಿ ಎಐ ಪ್ರಭಾವ ಉಂಟಾಗಿದೆ. ಇದೀಗ ರಾಜ್ಯದಲ್ಲೂ ಎಐ ನೀತಿ ಘೋಷಣೆ ನಿರೀಕ್ಷೆ ಇದೆ.
ಮಾರ್ಚ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಆಯವ್ಯಯ ಮಂಡಿಸಲಿದ್ದಾರೆ. ಅಂದು ಈ ಎಐ ನೀತಿ ಅಧಿಕೃತ ಘೋಷಣೆ ಆಗುವ ಸಾಧ್ಯತೆಗಳು ಇವೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆಟೊಮೇಷನ್ ಮತ್ತು AI ಅಳವಡಿಕೆಯಿಂದ ಎದುರಾಗುವ ಸಂಭಾವ್ಯ ಉದ್ಯೋಗ ನಷ್ಟಗಳ ಬಗ್ಗೆ ಸಾಕಷ್ಟು ಆತಂಕ ಇದೆ. ಈ ಆತಂಕವನ್ನು ತೊಡೆದು ಹಾಕಲು ಈ ಎಐ ನೀತಿಯು ಸಹಾಕಾರಿಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಭಾರತ ಮಾತ್ರವಲ್ಲದೇ ಜಾಗತಿಕವಾಗಿ ವಿವಿಧ ರಂಗಗಳಲ್ಲಿ ಎಐ ತಂತ್ರಜ್ಞಾನನಿಂದ ಉಂಟಾಗುವ ರೂಪಾಂತರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಿದೆ. ಇದರೊಂದಿಗೆ ಉದ್ಯೋಗ ಮಾರುಕಟ್ಟೆ ನಷ್ಟ ತಡೆದು ನೌಕರರನ್ನು ರಕ್ಷಿಸುವ ಕುರಿತು ಯೋಚನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಘೋಷಣೆ ಆಗಲಿದೆ ಎನ್ನಲಾಗುತ್ತಿರುವ ಈ ಎಐ ನೀತಿಯು ಮಾರ್ಗಸೂಚಿಗಳನ್ನು ಒದಗಿಸುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಈ ನೀತಿಯು ಎಐ ಉದ್ದೇಶಗಳನ್ನು ಉತ್ತೇಜಿಸುತ್ತದೆ. ತಂತ್ರಜ್ಞಾನ ಉತ್ತೇಜಿಸುವ ಕ್ರಮಗಳಿಗೆ ಪೂರಕವಾಗಿದೆ. ಆದರೆ ಪ್ರಸ್ತಾವಿತ ಚೌಕಟ್ಟಿನಲ್ಲಿ ಮಾನವ ಉದ್ಯೋಗದ ಮೇಲೆ ಪರಿಣಾಮ ಬೀರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ನಿರ್ಣಾಯಕ ವಲಯಗಳಲ್ಲಿ ಎಐ ಬಳಕೆಯನ್ನು ಇದು ಪ್ರೋತ್ಸಾಹಿಸುತ್ತದೆ. ಹೊಸ ಉದ್ಯೋಗ ಸೃಷ್ಟಿಗಾಗಿ ಎಐ ಕಂಪನಿಗಳಿಗೆ ಸರ್ಕಾರವು ಪ್ರಯೋಜನಗಳನ್ನು ಸಹ ಒದಗಿಸುತ್ತದೆ.
ನೀತಿ ಜಾರಿ ಮುನ್ನ ಹಲವು ಸುತ್ತಿನ ಚರ್ಚೆಗಳು?
ಕರ್ನಾಟಕದಲ್ಲಿ ಈ ನೀತಿ ಜಾರಿಗೆ ಸರ್ಕಾರ ಹೇಳಿದ ನಂತರ ಸಮಗ್ರ ನೀತಿಯನ್ನು ಹೊರತರುವ ಮೊದಲು ಬಹು ಸುತ್ತಿನ ಚರ್ಚೆಗಳು ನಡೆಯಲಿವೆ. ಏಕೆಂದರೆ ಉದ್ಯೋಗ ರಂಗದಲ್ಲಿ ಭಾರೀ ಪ್ರಮಾಣದ ಅಡಚಣೆಗಳನ್ನು ಮಾಡದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಎಐ ಉತ್ತೇಜಿಸುವ ಅಂಶಗಳು, ನಿಯಮಗಳು ಮತ್ತು ಉದ್ಯೋಗ ನಷ್ಟ ತಡೆ ಕುರಿತು ಚರ್ಚೆಗಳು ಆಗಲಿವೆ ಎಂದು ಮೂಲಗಳು ತಿಳಿಸಿವೆ.
ಐತಿ ನೀತಿ ಜಾರಿಯಲ್ಲಿ ಮುಂದಿರುವ ರಾಜ್ಯ
ಕರ್ನಾಟಕವು ಈ ಹಿಂದೆ ಅಂದರೆ 1997 ರಲ್ಲಿ ಮಾಹಿತಿ ತಂತ್ರಜ್ಞಾನ ನೀತಿಯನ್ನು ಮೊದಲು ಜಾರಿಗೆ ತಂದ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಇದೀಗ ಮತ್ತೊಂದು ಹೊಸ ನೀತಿ ಜಾರಿ ಮೂಲಕ ರಾಜ್ಯವು ಎಐ ವಲಯದಲ್ಲಿ ಮುಂಚೂಣಿಗೆ ಬರಲು ಕಾತರ ಹೊಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-2026-cm-siddaramaiah-to-announce-india-s-first-comprehensive-ai-policy-know-more-011-444877.html. xn--babytilbehr-pgb.com does not claim ownership of this content. All rights remain with the original publisher.
