E-Khata: ಇ ಖಾತಾದಿಂದ ಸಂಕಷ್ಟ: ಕರ್ನಾಟಕದ 2 ನಗರದ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ, 1,000 ಕೋಟಿ ರೂ. ಆಸ್ತಿ ನೋಂದಣಿ ವಿಳಂಬ | E-Khata Technical Glitch Hits Property Market: 1,000 Crore Registrations Stalled in Mysuru, Bengaluru Issues Continue

Karnataka

-Hitesh Y

E-Khata: ಕರ್ನಾಟಕದಲ್ಲಿ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಲೋಪಗಳನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಇ – ಖಾತಾ ಪರಿಚಯಿಸಿದೆ. ಇದು ಆಸ್ತಿಗಳ ವಿವರ ಹೊಂದಿರುವ ಡಿಜಿಟಲ್ ಸ್ವರೂಪವಾಗಿದೆ. ಆದರೆ ಇ ಖಾತಾ ವಿತರಣೆಯಲ್ಲಿ ಕೆಲವೊಂದು ಸಮಸ್ಯೆಗಳು ಸಹ ಸೃಷ್ಟಿ ಆಗಿವೆ. ಬೆಂಗಳೂರಿನ ನಂತರ ಕರ್ನಾಟಕದ ಮತ್ತೊಂದು ಪ್ರಮುಖ ನಗರದಲ್ಲಿ ಇ ಖಾತಾ ಸಮಸ್ಯೆ ಆಗಿದ್ದು, ಇದರಿಂದ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ. ಇ ಖಾತಾ ವಿತರಣೆ ಸಮಸ್ಯೆಯಿಂದಾಗಿ ಬರೋಬ್ಬರಿ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ನೋಂದಣಿ ವಿಳಂಬವಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ – ಖಾತಾ ಸಮಸ್ಯೆ ಎದುರಾದ ನಂತರ ಇದೀಗ ಮೈಸೂರಿನಲ್ಲೂ ಇ – ಖಾತಾ ವಿಚಾರದಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಕರ್ನಾಟಕ ಸರ್ಕಾರವು ಪ್ರಾಪರ್ಟಿಗಳ ರಿಜಿಸ್ಟ್ರೇಷನ್ ಹಾಗೂ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳಿಗೆ ಕಡ್ಡಾಯ ಇ-ಖಾತಾ ವ್ಯವಸ್ಥೆ ಜಾರಿ ಮಾಡಿದೆ. ಪ್ರಾಪರ್ಟಿಗಳಿಗೆ ಇ ಖಾತಾ ವಿತರಣೆಯನ್ನು ಮೊದಲು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಪರಿಚಯಿಸಲಾಗಿತ್ತು.

E-Khata Technical Glitch Hits Property Market 1 000 Crore Registrations Stalled in Mysuru Bengaluru Issues Continue

ಇದಾದ ನಂತರ ಇ ಖಾತಾ ವಿತರಣೆ ಹಾಗೂ ಕಡ್ಡಾಯವನ್ನು ಕರ್ನಾಟಕದಾದ್ಯಂತ ವಿಸ್ತರಿಸಲಾಗಿತ್ತು. ಆದರೆ ಇ ಖಾತಾ ವಿತರಣೆಯಲ್ಲಿನ ತಾಂತ್ರಿಕ ದೋಷಗಳಿಂದಾಗಿ ಮೈಸೂರು ಜಿಲ್ಲೆಯಲ್ಲಿ ಅಂದಾಜು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ನೋಂದಣಿ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿದೆ ಎಂದು ಹೇಳಲಾಗಿದೆ. ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಕರ್ನಾಟಕ ಸರ್ಕಾರದ ಕಡ್ಡಾಯ ಇ-ಖಾತಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ಮೈಸೂರಿನಲ್ಲಿ ಅಂದಾಜು 1,000 ಕೋಟಿ ಮೌಲ್ಯದ ಆಸ್ತಿ ನೋಂದಣಿ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದೆ. ದೀರ್ಘಕಾಲದ ಇ ಖಾತಾ ಸಮಸ್ಯೆಯಿಂದಾಗಿ ಕಾನೂನುಬದ್ಧ ಆಸ್ತಿ ಮಾರಾಟ ಮತ್ತು ಅಡಮಾನ ವಹಿವಾಟುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಇ ಖಾತಾದಲ್ಲಿ ಎದುರಾಗಿರುವ ಸಮಸ್ಯೆಗಳಿಂದಾಗಿ ಡೆವಲಪರ್‌ಗಳು ಮತ್ತು ಮನೆ ಖರೀದಿದಾರರು ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ.

ಪ್ರಾಪರ್ಟಿಗಳಿಗೆ ಇ – ಖಾತಾ ವಿತರಣೆಯಲ್ಲಿ ಎರಡೂವರೆ ತಿಂಗಳುಗಳಿಂದ ವಿಳಂಬವಾಗಿದೆ. ಇನ್ನೂ ಯಾವುದೇ ಆಶಾದಾಯಕ ಬೆಳವಣಿಗೆಯು ಇ ಖಾತಾ ವಿತರಣೆಯಲ್ಲಿ ಆಗಿಲ್ಲ. ಸರ್ಕಾರವು ಇ ಖಾತಾ ವಿತರಣೆ ಪ್ರಕ್ರಿಯೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲಾ ತಾಂತ್ರಿಕ ದೋಷಗಳನ್ನು ಪರಿಹರಿಸಬೇಕು ಮತ್ತು ಸುಗಮ ಇ ಖಾತಾ ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರಾಪರ್ಟಿದಾರರು ಆಗ್ರಹಿಸಿದ್ದಾರೆ.

ಡಿಜಿಟಲ್ ಇ-ಖಾತಾ ವ್ಯವಸ್ಥೆಯಲ್ಲಿನ ಕೆಲವೊಂದು ತಾಂತ್ರಿಕ ದೋಷಗಳು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ. ಬೆಂಗಳೂರಿನಲ್ಲೂ ಇ ಖಾತಾ ವಿತರಣೆ ಸಮಸ್ಯೆ ಆಗುತ್ತಿದ್ದು, ಇದು ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ. ಇದು ಆಸ್ತಿ ಖರೀದಿ ಹಾಗೂ ಮಾರಾಟದ ಮೇಲೂ ಪರಿಣಾಮ ಬೀರಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/e-khata-technical-glitch-hits-property-market-1-000-crore-registrations-stalled-in-mysuru-benga-011-444993.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo