
Entertainment
oi-Manohara M
ದಕ್ಷಿಣ ಭಾರತದ ಖ್ಯಾತ ತಾರೆಗಳಾದ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಮದುವೆಯ ಸಂಭ್ರಮಾಚರಣೆಗಳು ರಾಜಸ್ಥಾನದ ಉದಯಪುರದ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ಆರಂಭವಾಗಿವೆ. ಮಂಗಳವಾರದಿಂದಲೇ ವಿವಾಹಪೂರ್ವ ಕಾರ್ಯಕ್ರಮಗಳು ಜೋರಾಗಿದ್ದು, ಚಿತ್ರರಂಗದ ಬಹುಕಾಲದ ಗಾಸಿಪ್ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇನ್ನು ಖಾಸಗಿಯಾಗಿ ಕೆಲವೇ ಮಂದಿಯ ಆಹ್ವಾನದೊಂದಿಗೆ ನಡೆಯುತ್ತಿರುವ ಈ ಮದುವೆಗೆ ಕನ್ನಡದ ನಟಿ ಆಶಿಕಾ ರಂಗನಾಥ್ ಕೂಡ ತೆರಳಿದ್ದು, ಉದಯಪುರಲ್ಲಿ ಕಾಣಿಸಿಕೊಂಡಿದ್ದಾರೆ.
ಮದುವೆಯು ತುಂಬಾ ಖಾಸಗಿಯಾಗಿ ನಡೆಯುತ್ತಿದ್ದು, ಕೇವಲ ಕುಟುಂಬಸ್ಥರು ಹಾಗೂ ಚಿತ್ರರಂಗದ ಬೆರಳೆಣಿಕೆಯಷ್ಟು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಸೀಕ್ರೆಟ್ ಮದುವೆಗೆ ಯಾರಿಗೆಲ್ಲಾ ಎಂಟ್ರಿ ಸಿಕ್ಕಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದರ ನಡುವೆ, ಕನ್ನಡದ ಬ್ಯೂಟಿ ಆಶಿಕಾ ರಂಗನಾಥ್ ಅವರು ಉದಯಪುರ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿರುವುದು, ರಶ್ಮಿಕಾ ಮದುವೆಗೆ ಆಗಮಿಸಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಾರಿಗೆಲ್ಲ ಆಮಂತ್ರಣ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರಾಯಲ್ ಮದುವೆಗೆ ಸಾಕ್ಷಿಯಾಗಲು ಉದಯಪುರಕ್ಕೆ ಆಗಮಿಸುತ್ತಿರುವ ಗಣ್ಯರ ಪಟ್ಟಿ ಬೆಳೆಯುತ್ತಿದ್ದು, ಚಿತ್ರರಂಗದ ಪ್ರಮುಖ ಆಪ್ತರು ಈಗಾಗಲೇ ಅಲ್ಲಿ ಕಾಣಿಸಿಕೊಂಡಿದ್ದಾರೆ: ವಿಜಯ್ ದೇವರಕೊಂಡ ಅವರಿಗೆ ದೊಡ್ಡ ಬ್ರೇಕ್ ನೀಡಿದ ‘ಪೆಳ್ಳಿ ಚೂಪುಲು’ (2016) ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಅವರು ಉದಯಪುರಕ್ಕೆ ಆಗಮಿಸಿದ್ದಾರೆ. ತೆಲುಗು ಚಿತ್ರರಂಗದ ನಟಿ ಈಶಾ ರೆಬ್ಬಾ ಅವರು ನಿರ್ದೇಶಕ ತರುಣ್ ಭಾಸ್ಕರ್ ಅವರ ಜೊತೆಯಲ್ಲಿ ಉದಯಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರಿಗೂ ಅತ್ಯಂತ ಆಪ್ತರಾಗಿರುವ ಶ್ರವ್ಯಾ ವರ್ಮಾ ಅವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಸ್ಟೈಲಿಸ್ಟ್ ಆಗಿರುವ ಇವರು ವಿಜಯ್ ಮತ್ತು ರಶ್ಮಿಕಾ ಅವರ ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ ವೇಷಭೂಷಣ ವಿನ್ಯಾಸ ಮಾಡಿದ್ದಾರೆ. ಈಗಾಗಲೇ ನಟಿ ಆಶಿಕಾ ರಂಗನಾಥ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈಗ ಈ ತಾರೆಯರ ಎಂಟ್ರಿಯಿಂದ ಉದಯಪುರದಲ್ಲಿ ಮದುವೆ ಕಳೆ ಇನ್ನಷ್ಟು ಹೆಚ್ಚಾಗಿದೆ.
Ashika Ranganath was spotted arriving at Udaipur airport, and industry chatter suggests she could be among the celebrity guests attending Rashmika Mandanna and Vijay Deverakonda’s much-anticipated wedding festivities. pic.twitter.com/eYXKmRpfq6
— yogen shah (@yogenshahyogen) February 24, 2026
ಮೊಬೈಲ್ ಬಳಕೆಗೆ ನಿರ್ಬಂಧ
ಉದಯಪುರದ ಅರಮನೆಯ ಮಾದರಿಯ ಹೋಟೆಲ್ನಲ್ಲಿ ಮದುವೆ ನಡೆಯುತ್ತಿರುವುದರಿಂದ ಇದು ‘ರಾಯಲ್ ವೆಡ್ಡಿಂಗ್’ ಎನಿಸಿಕೊಂಡಿದೆ. ಮದುವೆಯ ಫೋಟೋಗಳು ಲೀಕ್ ಆಗದಂತೆ ಹೋಟೆಲ್ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಅತಿಥಿಗಳ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲಾಗಿದೆ. ರಾಜಸ್ಥಾನಿ ಶೈಲಿಯ ಸಂಸ್ಕೃತಿ ಹಾಗೂ ಆಧುನಿಕ ಸ್ಪರ್ಶದೊಂದಿಗೆ ಮದುವೆ ಮಂಟಪವನ್ನು ಅಲಂಕರಿಸಲಾಗಿದೆ.

ಹಲವು ವರ್ಷಗಳಿಂದ ತಾವಿಬ್ಬರು ಕೇವಲ ‘ಆಪ್ತ ಸ್ನೇಹಿತರು’ ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಈಗ ಅಧಿಕೃತವಾಗಿ ಹಸೆಮಣೆ ಏರುತ್ತಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇವರ ಮದುವೆಯ ಅಧಿಕೃತ ಫೋಟೋಗಳು ಮತ್ತು ವಿಡಿಯೋಗಳಿಗಾಗಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಕಾದು ಕುಳಿತಿದೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿಯ ಪಯಣ ಶುರುವಾಗಿದ್ದು ಬೆಳ್ಳಿತೆರೆಯಿಂದ. ಇವರ ಜೋಡಿಯ ಹಿನ್ನೆಲೆಯನ್ನು ಕೆದಕಿದರೆ ಕುತೂಹಲಕಾರಿ ವಿಷಯಗಳು ಹೊರಬರುತ್ತವೆ. 2018ರಲ್ಲಿ ತೆರೆಕಂಡ ‘ಗೀತಾ ಗೋವಿಂದಂ’ ಸಿನಿಮಾ ಈ ಜೋಡಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಚಿತ್ರದ ಇವರ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವಿನ ಗೆಳೆತನ ಗಾಢವಾಯಿತು.
ಅಂದಿನಿಂದ ಇಂದಿನವರೆಗೆ ಪ್ರವಾಸ, ಫೋಟೋಶೂಟ್ ಹಾಗೂ ಜಿಮ್ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿದ್ದರು. ರಶ್ಮಿಕಾ ಅವರು ಕನ್ನಡದಿಂದ ತೆಲುಗು, ಹಿಂದಿ ಚಿತ್ರರಂಗದವರೆಗೆ ಬೆಳೆಯುವಾಗ ವಿಜಯ್ ಸದಾ ಬೆನ್ನೆಲುಬಾಗಿ ನಿಂತಿದ್ದರು. ಅದೇ ರೀತಿ ವಿಜಯ್ ಅವರ ಕೆರಿಯರ್ನ ಏರಿಳಿತಗಳಲ್ಲಿ ರಶ್ಮಿಕಾ ಜೊತೆಯಾಗಿದ್ದರು.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-vijay-deverakonda-wedding-kannada-actress-ashika-ranganath-spotted-in-udaipur-445031.html. xn--babytilbehr-pgb.com does not claim ownership of this content. All rights remain with the original publisher.
