Viral Video: ವಿದೇಶಿ ಪ್ರಜೆಗೆ ಸೆಕ್ಸ್‌ ಆಫರ್ ಮಾಡಿದ ಆಟೋ ಚಾಲಕ: ಇಲ್ಲಿದೆ ವೈರಲ್ ವಿಡಿಯೋ | Viral Video: Auto Driver Accused of Offering Sex to Foreign Woman Clip Sparks Outrage Social Media Discussion

India

oi-Hitesh Y

Viral Video: ದೆಹಲಿಯ ಆಟೋ ಚಾಲಕನೊಬ್ಬ ವಿದೇಶಿ ಪ್ರಜೆಗೆ ಸೆಕ್ಸಿ ಆಫರ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ಚಾಲಕ ಈ ಭಾಗದಲ್ಲಿ ಒಳ್ಳೆಯ ಹುಡುಗಿಯರು ಸಿಗುತ್ತಾರೆ ಟ್ರೈ ಮಾಡುತ್ತೀರಾ ಅಂತ ಕೇಳಿರುವುದು ಇದೆ. ಈ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಣ್ಣ ವಯಸ್ಸಿನ ಹುಡುಗಿಯರು ಸಿಗುತ್ತಾರೆ ಒಮ್ಮೆ ಟ್ರೈ ಮಾಡಿ ಅಂತಲೂ ಆಟೋ ಚಾಲಕ ಹೇಳಿರುವುದು ಇದೆ. ಈ ರೀತಿ ವಿದೇಶಿಗರ ಮುಂದೆ ಮಾತನಾಡಿದರೆ, ವಿದೇಶಿಗರು ಭಾರತದ ಬಗ್ಗೆ ಏನು ಭಾವಿಸುತ್ತಾರೆ. ಅಲ್ಲದೆ ಸೆಕ್ಸ್‌ದೆಂಧೆ ಇಷ್ಟು ಮುಕ್ತವಾಗಿ ನಡೆಯುತ್ತಿದೆಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಇಂದಿಗೂ ಆತಂಕದ ಕಾರ್ಮೋಡ ಇದ್ದೇ ಇದೆ. ದೆಹಲಿಯಲ್ಲಿ ಸಂಜೆಯ ನಂತರ ಇಂದಿಗೂ ಹೆಣ್ಣು ಮಕ್ಕಳು ಪ್ರವಾಸ ಮಾಡುವುದು ಹಾಗೂ ಭಯವಿಲ್ಲದೆ ಓಡಾಡುವುದು ಕಷ್ಟವಾಗಿದೆ. ಈ ರೀತಿ ಇರುವಾಗ ವೈರಲ್ ಆಗಿರುವ ವಿಡಿಯೋ ಹಲವು ಚರ್ಚೆಗಳಿಗೆ ಕಾರಣವಾಗಿದೆ.

Viral Video Auto Driver Accused of Offering Sex to Foreign Woman Clip Sparks Outrage Social Media Discussion

ದೆಹಲಿಯಲ್ಲಿನ ಆಟೋ ಚಾಲಕನೊಬ್ಬ ವಿದೇಶಿ ಪ್ರಜೆಗೆ ಸೆಕ್ಸ್‌ ಆಫರ್‌ ನೀಡಿದ್ದಾನೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ನೀವು ಕೇವಲ 10ರಿಂದ 20 ನಿಮಿಷ ಫ್ರೀ ಆಗಿದ್ದರೂ ಸಾಕು ಬನ್ನಿ, ನಾನೊಂದು ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಚಂದದ ಹುಡುಗಿಯರು ಇದ್ದಾರೆ. 40 – 50 ವರ್ಷದವರಲ್ಲ ಕೇವಲ 18 ರಿಂದ 20 ವರ್ಷದ ಒಳ್ಳೆಯ ಹುಡುಗಿಯರು ಇದ್ದಾರೆ ಎಂದು ಆಟೋ ಚಾಲಕ ಹೇಳಿದ್ದಾನೆ.

ಇದಕ್ಕೆ ವಿದೇಶಿ ಪ್ರಜೆ ಯಾಕೆ ನೀವು ಈ ಆಫರ್‌ ನನಗೆ ಕೊಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಆ ಆಟೋ ಚಾಲಕ ಇಲ್ಲಿಂದ ತುಂಬಾ ಸಮೀಪದಲ್ಲೇ ಆ ಪ್ರದೇಶ ಇದೆ. ರೂಮ್‌ಗಳು ಸಹ ಅಲ್ಲಿ ಇದೆ. ನಿಮಗೆ ಕೇವಲ 20 ನಿಮಿಷವಿದ್ದರೆ ಸಾಕು, ನೀವು ಈಗ ಇಂಡಿಯಾಗೆ ಬಂದಿದ್ದೀರಿ ಇನ್ಮುಂದೆ ಯಾವಗ ಬರುತ್ತೀರೋ ಇಲ್ಲವೋ ಬನ್ನಿ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ದೆಹಲಿ ಪೊಲೀಸರಿಗೆ ಟ್ಯಾಗ್

ಇನ್ನು ವೈರಲ್ ವಿಡಿಯೋವನ್ನು ಹಲವರು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ನಮಸ್ಕಾರ ದೆಹಲಿ ಪೊಲೀಸರೇ ದಯವಿಟ್ಟು ಇದನ್ನು ತುರ್ತಾಗಿ ಪರಿಶೀಲಿಸಿ. ರಿಕ್ಷಾ ಚಾಲಕನೊಬ್ಬ 18-20 ವರ್ಷ ವಯಸ್ಸಿನ ಮಹಿಳೆಯರು ಇದ್ದಾರೆ ಎಂದು ವಿದೇಶಿ ಪ್ರವಾಸಿಗರಿಗೆ ಹೇಳುತ್ತಿದ್ದಾನೆ. ದಯವಿಟ್ಟು ಅವನ ಇರುವಿಕೆ ಪತ್ತೆಹಚ್ಚಿ ಈ ದಂಧೆಯಲ್ಲಿ ಸಿಲುಕಿರುವ ಮಹಿಳೆಯರನ್ನು ರಕ್ಷಿಸಿ. ಈ ವಿಷಯದ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರು ಹೇಳಿದ್ದೇನು

ದೆಹಲಿಯು ವಿಶ್ವದ ಅತ್ಯಂತ ಕೆಟ್ಟ ಆಟೋರಿಕ್ಷಾ ಚಾಲಕರನ್ನು ಹೊಂದಿರುವ ನಗರವಾಗಿದೆ. ಅನೇಕರು ಪ್ರಯಾಣಿಕರನ್ನು, ವಿಶೇಷವಾಗಿ ವಿದೇಶಿಯರನ್ನು ವಂಚಿಸುತ್ತಿದ್ದಾರೆ ಮತ್ತು ನಿಂದಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈ ಟ್ವೀಟ್ ಅನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಟ್ಯಾಗ್ ಮಾಡಬೇಕು. ಇದರಿಂದ ಅವರು ಪೊಲೀಸ್ ವ್ಯವಸ್ಥೆಯ ಬಗ್ಗೆ ತಿಳಿದಿರಬೇಕು. ಚಲನ್‌ಗಳ ಸಂಖ್ಯೆಯನ್ನು ನೋಡಿದರೆ, ಅಂತಹ ವಾಹನಗಳು ಹೇಗೆ ಮುಕ್ತವಾಗಿ ಓಡುತ್ತಿವೆ ಎಂದು ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/viral-video-auto-driver-accused-of-offering-sex-to-foreign-woman-clip-sparks-outrage-social-media-d-445101.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo