ಸೆಲೆಬ್ರಿಟಿಗಳೇ, ನಮ್ಮ ಧನ್ವೀರ್ ನಟನೆಯ “ಹಯಗ್ರೀವ” ಸಿನಿಮಾ ಗೆಲ್ಲಿಸಿ: ನಟ ದರ್ಶನ್‌ ಪೋಸ್ಟ್‌ | Darshan Thoogudeepa Supports Sandalwood Actor Dhanveer Hayagreeva Movie Social Media Post Goes Viral

Entertainment

-Manohara M

ನಟ ದರ್ಶನ್ ತೂಗುದೀಪ ಅವರ ಆಪ್ತ ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ ಸಿನಿಮಾ ಇಂದು ತೆರೆಗೆ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದರೂ, ಅವರ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ಧನ್ವೀರ್ ಅವರ ಸಿನಿಮಾಗೆ ಬೆಂಬಲ ಸೂಚಿಸಿರುವ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ನಟ ದರ್ಶನ್ ಅವರ ಪರಮ ಆಪ್ತರಾಗಿರುವ ಧನ್ವೀರ್ ಅವರಿಗೆ, ದರ್ಶನ್ ಅವರು ಪೋಸ್ಟ್‌ ಮೂಲಕ ಚಿತ್ರಕ್ಕೆ ಶುಭ ಹಾರೈಸಿ ಸರ್ಪ್ರೈಸ್ ನೀಡಿದ್ದಾರೆ.

ದರ್ಶನ್ ಅವರ ಎಕ್ಸ್‌ ಖಾತೆಯಲ್ಲಿ “ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ತೆರೆಗೆ ಬರ್ತಾ ಇದೆ. ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ. ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ! ಎಂದು ಬರೆಯಲಾಗಿದೆ.

Darshan Thoogudeepa

ಧನ್ವೀರ್-ದರ್ಶನ್ ಬಾಂಧವ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದಾಗಿನಿಂದ, ಧನ್ವೀರ್ ಪ್ರತಿ ಹಂತದಲ್ಲೂ ದರ್ಶನ್ ಪರವಾಗಿ ನಿಂತಿದ್ದಾರೆ. ದರ್ಶನ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿರುವ ಅವರು, “ದರ್ಶನ್ ಅಣ್ಣನನ್ನು ಕೊನೆಯುಸಿರಿರುವವರೆಗೂ ಬಿಟ್ಟುಕೊಡಲ್ಲ” ಎಂದು ಬಹಿರಂಗವಾಗಿ ಘೋಷಿಸಿದ್ದರು. ದರ್ಶನ್ ಮತ್ತು ಧನ್ವೀರ್ ನಡುವೆ ಕೇವಲ ಸಿನೆಮಾ ನಂಟಲ್ಲದೆ, ಅಣ್ಣ-ತಮ್ಮನಂತಹ ಬಾಂಧವ್ಯವಿದೆ. ಈ ಹಿಂದೆ ದರ್ಶನ್ ಅವರ ಯಾವುದೇ ಚಿತ್ರ ಬಿಡುಗಡೆಯಾದರೂ ಧನ್ವೀರ್ ಪರ ಪ್ರಚಾರ ಮಾಡುತ್ತಿದ್ದರು. ಈಗ ದರ್ಶನ್ ಜೈಲಿನಲ್ಲಿದ್ದರೂ, ಅವರ ತಂಡ ಮತ್ತು ಕುಟುಂಬ ಧನ್ವೀರ್ ಬೆನ್ನಿಗೆ ನಿಂತಿದೆ.

ಧನ್ವೀರ್‌ ನಮ್ಮ ಕುಟುಂಬದಲ್ಲಿ ಒಬ್ಬರು

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಹಯಗ್ರೀವ ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ ಆಗಮಿಸಿದ್ದರು. ಡಿಬಾಸ್‌ ಸೆಲೆಬ್ರಿಟಿಗಳೆಲ್ಲರೂ ಈ ಸಿನಿಮಾ ಬೆಂಬಲಕ್ಕೆ ನಿಲ್ಲೋಣ ಎಂದು ಕರೆ ನೀಡಿದ್ದರು ವಿಜಯಲಕ್ಷ್ಮಿ. ಅಲ್ಲದೆ ಧನ್ವೀರ್‌ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡುತ್ತಾ, ಧನ್ವೀರ್‌ ನಮಗೆ ಹೊರಗಿನವರಲ್ಲ, ನಮ್ಮ ಕುಟುಂಬದಲ್ಲಿ ಒಬ್ಬರು ಎಂದಿದ್ದರು. ಈ ವಿಡಿಯೋಗಳು ವೈರಲ್‌ ಆಗಿತ್ತು.

ದರ್ಶನ್ ಜೈಲಿನಲ್ಲಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಮತ್ತು ತನ್ನ ಆಪ್ತ ಗೆಳೆಯನ ಸಿನಿಮಾಗೆ ಬೆಂಬಲ ಸೂಚಿಸಿರುವುದು ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ಒಂದು ವೇಳೆ ದರ್ಶನ್ ಹೊರಗಿದ್ದರೆ ‘ಹಯಗ್ರೀವ’ ಚಿತ್ರದ ಪ್ರಚಾರದ ಅಬ್ಬರವೇ ಬೇರೆ ಇರುತ್ತಿತ್ತು ಎಂದು ಚರ್ಚೆಗಳಾಗುತ್ತಿವೆ. ಧನ್ವೀರ್ ಅವರ ಸಿನಿಮಾ ಶ್ರಮಕ್ಕೆ ದರ್ಶನ್ ಅವರಿಂದ ಸಾಥ್ ಸಿಕ್ಕಂತಾಗಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-thoogudeepa-supports-sandalwood-actor-dhanveer-hayagreeva-movie-social-media-post-goes-viral-011-445295.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo