ಟಿ20 ವಿಶ್ವಕಪ್‌ 2026: ಟೀಂ ಇಂಡಿಯಾ ದಾಖಲೆಯ ಸ್ಟ್ರೈಕ್ ರೇಟ್‌: ಇಲ್ಲಿವೆ ಅಂಕಿಅಂಶಗಳು | Team India Creates Historic Strike Rate Record in T20 World Cup 2026 Super 8 Win Over Zimbabwe

Sports

oi-Madhusudhan KR

Team India Creates Strike Rate History: ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 72 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟ್ರೈಕ್‌ ರೇಟ್‌ನಲ್ಲಿ ಹೊಸ ದಾಖಲೆ ಮಾಡಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಿ20 ಸ್ಪೆಷಲಿಸ್ಟ್‌ ಅಂತಲೇ ಹೆಸರುವಾಸಿಯಾಗಿದ್ದ ಅಭಿಷೇಕ್ ಶರ್ಮಾ ಅವರು ಪಾಕಿಸ್ತಾನದ ವಿರುದ್ಧ ಪಂದ್ಯ ಸೇರಿದಂತೆ ಮೂರು ಪಂದ್ಯಗಳಲ್ಲಿ ಖಾತೆ ತೆರೆಯದೇ ಶೂನ್ಯಕ್ಕೆ ವಿಕಟ್ ಒಪ್ಪಿಸಿದ್ದರು. ಬಳಿಕ ಅವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕೆನ್ನುವ ಮಾತುಗಳು ಕೇಳಿಬಂದಿದ್ದವು. ಮತ್ತೊಂದೆಡೆ, ಬಹುತೇಕ ಕ್ರಿಕೆಟ್‌ ದಿಗ್ಗಜರು ವಿರಾಟ್ ಕೊಹ್ಲಿ ಉದಾಹರಣೆ ನೀಡಿ ಅವರನ್ನು ಯಾವುದೇ ಕಾರಣಕ್ಕೂ ಹೊರಗಡೆ ಕೂರಿಸಬೇಡಿ. ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಲಿದ್ದಾರೆ ಎಂದು ಹೇಳಿದ್ದರು.

Team India Creates Historic Strike Rate Record in T20 World Cup 2026 Super 8 Win Over Zimbabwe

ಫಾರ್ಮ್‌ಗೆ ಮರಳಿದ ಅಭಿಷೇಕ್ ಶರ್ಮಾ

ಅದರಂತೆಯೇ ಅಭಿಷೇಕ್ ಶರ್ಮಾ ಅವರು ಗುರುವಾರ ನಡೆದ ಜಿಂಬಾಬ್ವಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್‌ ಆಡಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಅವರು ಕೇವಲ 30 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 55 ರನ್‌ ಅರ್ಧಶತಕ ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೆ, ಸಂಜು ಸ್ಯಾಮ್ಸನ್‌, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್‌, ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಕೂಡ ಉತ್ತಮ ಇನ್ನಿಂಗ್ಸ್‌ ಆಡಿದರು. ಈ ಮೂಲಕದ ಇವರೆಲ್ಲರೂ ಸ್ಟ್ರೈಕ್‌ ರೇಟ್‌ನಲ್ಲಿ ಹೊಸ ದಾಖಲೆ ಬರೆದರು.

ಸ್ಟ್ರೈಕ್‌ ರೇಟ್‌ನಲ್ಲಿ ಟೀಂ ಇಂಡಿಯಾ ದಾಖಲೆ

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಅವರ 24 ಎಸೆತಗಳಲ್ಲಿ 38 ರನ್ (ಸ್ಟೈಕ್ ರೇಟ್ 158.33), ಆ ದಿನದ ಭಾರತೀಯ ಬ್ಯಾಟರ್‌ಗಳ ಪೈಕಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಆಗಿತ್ತು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 20 ಓವರ್‌ಗಳಲ್ಲಿ 256/4 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯಾಗಿದೆ. ಶ್ರೀಲಂಕಾ 2007ರ ಟಿ20 ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ 6 ವಿಕೆಟ್‌ ನಷ್ಟಕ್ಕೆ 260 ರನ್ ಸಿಡಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ 2026 ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತಕ್ಕೆ ಇದು ಭರ್ಜರಿ ಪುನರಾಗಮನ ಆದಂತಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳು ಕೇವಲ ರನ್‌ಗಳ ಮಳೆಯನ್ನಷ್ಟೇ ಸುರಿಸಲಿಲ್ಲ, ಬದಲಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಸ್ಟ್ರೈಕ್ ರೇಟ್ ದಾಖಲೆಯನ್ನು ನಿರ್ಮಿಸಿದರು. ಟಿ20 ವಿಶ್ವಕಪ್ ಇನ್ನಿಂಗ್ಸ್‌ವೊಂದರಲ್ಲಿ ತಂಡದ 6 ಬ್ಯಾಟರ್‌ಗಳು ತಲಾ 20ಕ್ಕೂ ಹೆಚ್ಚು ರನ್‌ಗಳನ್ನು ಕನಿಷ್ಠ 150ರ ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದು ಮೊದಲ ಬಾರಿಯಾಗಿದೆ.

ಆಟಗಾರರು, ರನ್, ಸ್ಟ್ರೈಕ್ ರೇಟ್

ಅಭಿಷೇಕ್ ಶರ್ಮಾ: 55 (30), 183.33

ಹಾರ್ದಿಕ್ ಪಾಂಡ್ಯ: 50* (23), 217.39

ತಿಲಕ್ ವರ್ಮಾ: 44* (16), 275.00

ಇಶಾನ್ ಕಿಶನ್: 38 (24), 158.33

ಸೂರ್ಯಕುಮಾರ್ ಯಾದವ್: 33 (13), 253.84

ಸಂಜು ಸ್ಯಾಮ್ಸನ್: 24 (15), 160.00

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳು ಒಟ್ಟು 17 ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಮಾಡಿದರು. ಇದು ಟಿ20 ವಿಶ್ವಕಪ್ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ಪರ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ. ಇದರೊಂದಿಗೆ ಭಾರತ ತಂಡ ಈ ಹಿಂದೆ 2024ರಲ್ಲಿ ಗ್ರಾಸ್ ಐಲೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದ 15 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಿತು.

ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಬ್ಯಾಟರ್‌ಗಳು ಸಿಕ್ಸರ್‌ಗಳ ಸುರಿಮಳೆಗೈಯುತ್ತಿದ್ದಾರೆ. ಇಲ್ಲಿಯವರೆಗೆ ಭಾರತ ಒಟ್ಟು 63 ಸಿಕ್ಸರ್‌ಗಳನ್ನು ಸಿಡಿಸಿದ್ದು, ಇದು ಒಂದು ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡದ ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.
ಇದಕ್ಕೂ ಮೊದಲು 2024ರ ಆವೃತ್ತಿಯಲ್ಲಿ ಭಾರತ 61 ಸಿಕ್ಸರ್‌ಗಳನ್ನು ಬಾರಿಸಿದ್ದು, ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಪ್ರಸ್ತುತ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಮಾತ್ರ 66 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳು ಕೇವಲ 26 ಡಾಟ್ ಬಾಲ್‌ಗಳನ್ನು ಮಾತ್ರ ಆಡಿದ್ದಾರೆ. ಈ ಮೊದಲು 2016ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೂಡ ಕೇವಲ 26 ಡಾಟ್ ಬಾಲ್‌ಗಳನ್ನು ಆಡಿ ಈ ದಾಖಲೆ ಬರೆದಿತ್ತು. ಈಗ ಭಾರತ ಆ ದಾಖಲೆಯನ್ನು ಸರಿಗಟ್ಟಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/team-india-creates-historic-strike-rate-record-in-t20-world-cup-2026-super-8-win-over-zimbabwe-445319.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo