
Karnataka
oi-Shiddalingesh S
ದೇಶದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಕಡಿಮೆ ಮಾಡಲು ಸಾಯಿ ಶ್ಯೂರ್ ಯೋಜನೆ ಮಹತ್ವದ ಪಾತ್ರವಹಿಸುತ್ತಿದೆ. 2018ರಲ್ಲಿ ಕೇವಲ 1,000 ಮಕ್ಕಳೊಂದಿಗೆ ಆರಂಭವಾದ ಈ ಯೋಜನೆ ಈಗ ಸುಮಾರು ಒಂದು ಕೋಟಿ ಮಕ್ಕಳಿಗೆ ಈ ಪೌಷ್ಟಿಕ ಮಾಲ್ಟ್ ತಲುಪುವಂತೆ ಮಾಡಿದೆ.
ಈ ಯೋಜನೆಯನ್ನು ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಜೂತೆಗೆ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಹಾಲಿನೊಂದಿಗೆ ನೀಡಲಾದ ಸಾಯಿ ಶ್ಯೂರ್ ಮಾಲ್ಟ್ ಮಕ್ಕಳಿಗೆ ಇಷ್ಟವಾಗಿದ್ದು ಬಳಿಕ ಯೋಜನೆಯನ್ನು ವಿಸ್ತರಿಸಲಾಯಿತು.

ಈ ಯೋಜನೆಯ ಯಶಸ್ಸು
ಸರ್ಕಾರದ ‘ಕ್ಷೀರಭಾಗ್ಯ’ ಯೋಜನೆಗೆ ಪೂರಕವಾಗಿ 2018ರಲ್ಲಿ ಹತ್ತು ಶಾಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿತ್ತು. ಕ್ಷೀರಭಾಗ್ಯ ಹಾಲಿನ ಜೊತೆಗೆ ಸಾಯಿ ಶ್ಯೂರ್ ಮಾಲ್ಟ್ ಅನ್ನು ನೀಡಲು ಆರಂಭಿಸಿದಾಗ ಮಕ್ಕಳು ಅದನ್ನು ಅತ್ಯಂತ ಇಷ್ಟಪಟ್ಟು ಕುಡಿಯಲು ಆರಂಭಿಸಿದರು. ಇಂದು ಈ ಪೌಷ್ಟಿಕ ಪಾನೀಯ ಒಂದು ಕೋಟಿ ಮಕ್ಕಳ ಆರೋಗ್ಯದ ಕವಚವಾಗಿದೆ.
ಈ ಯೋಜನೆಯ ವಿಶೇಷತೆಯೆಂದರೆ ಇದು ರೈತನನ್ನು ನೇರವಾಗಿ ಮಗುವಿನ ಪೌಷ್ಟಿಕತೆ ಆರೋಗ್ಯಕ್ಕೆ ಕೈ ಜೋಡಿಸಿದಂತಾಗಿದೆ. ಸಾಯಿ ಶ್ಯೂರ್ ಮಾಲ್ಟ್ ಯೋಜನೆಯ ವಿಶೇಷತೆ ಎಂದರೆ ರೈತರು ಸಹ ಈ ಯೋಜನೆಯ ಭಾಗವಾಗಿದ್ದಾರೆ. ತಿಪಟೂರು ಭಾಗದ ಸಾವಿರಾರು ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲಾಗುತ್ತಿದೆ. ಸರ್ಕಾರದ ಬೆಂಬಲ ಬೆಲೆಗೆ ಹೆಚ್ಚುವರಿ ಹಣ ನೀಡಿ ರಾಗಿ ಖರೀದಿಸುವ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ.
ರಾಗಿ ಖರೀದಿ: ತಿಪಟೂರು ತಾಲ್ಲೂಕಿನ ಸುಮಾರು 3,000 ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ.
ಉತ್ತಮ ಬೆಲೆ: ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತಲೂ ಒಂದು ರೂಪಾಯಿ ಅಧಿಕ ನೀಡಿ ರೈತರಿಂದ ರಾಗಿ ಪಡೆಯಲಾಗುತ್ತಿದೆ.
ನೇರವಾಗಿ ರೈತರಿಗೆ: ಕಳೆದ ವರ್ಷ ಸುಮಾರು 20 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಈ ಪೌಷ್ಟಿಕ ಮಾಲ್ಟ್ನಲ್ಲಿ ಮಕ್ಕಳಿಗೆ ಅಗತ್ಯವಾದ ವಿಟಮಿನ್ ಸಿ, ಐರನ್, ವಿಟಮಿನ್ ಡಿ ಮತ್ತು ಬಿ12 ನಂತಹ ಖನಿಜಾಂಶಗಳನ್ನು ಸೇರಿಸಲಾಗಿದ್ದು ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ನೆರವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ತಲುಪಿರುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಎಂಟು ಕೋಟಿ ಮಕ್ಕಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಸಾಯಿ ಶ್ಯೂರ್ ಯೋಜನೆ ಮಕ್ಕಳ ಆರೋಗ್ಯ ಸುಧಾರಣೆಯ ಜೊತೆಗೆ ರೈತರಿಗೂ ನೆರವಾಗುತ್ತಿರುವುದು ವಿಶೇಷವಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/saisure-success-story-from-1-000-children-to-1-crore-kids-getting-nutritious-food-in-india-445331.html. xn--babytilbehr-pgb.com does not claim ownership of this content. All rights remain with the original publisher.
