ಗ್ಯಾಸ್ ಸಿಲಿಂಡರ್ ಹೊರುತ್ತಿದ್ದ ಕೈಗಳಿಗೆ 28 ಕೋಟಿಯ ಆಸರೆ: ಬಡವರ ಪಾಲಿನ ಹೀರೋ ರಿಂಕು ಸಿಂಗ್ ಬೆಳೆದು ಬಂದ ಹಾದಿ | Rinku Singh Father Role in His Journey to Team India: From Cylinder Deliveries to ₹28 Cr Net Worth

Sports

oi-Madhusudhan KR

Rinku Singh father sacrifice: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಂಕು ಸಿಂಗ್‌ ಅವರ ತಂದೆ ಖಂಚಂದ್ರ ಸಿಂಗ್ ಅವರು ಗುರುವಾರ (ಫೆಬ್ರವರಿ 27) ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ರಿಂಕು ಅವರ ತಂದೆ ಕುಟುಂಬವನ್ನು ಹೇಗೆ ನೋಡಿಕೊಂಡರು ಎಂಬ ಸಾರ್ಥಕದ ಕಥೆಯೊಂದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಿರುವ ರಿಂಕು ಸಿಂಗ್, ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಇದೀಗ ಟಿ20 ವಿಶ್ವಕಪ್‌ ಟೂರ್ನಿಯ ಮಧ್ಯದಲ್ಲೇ ಈ ದುಃಖದ ಘಟನೆ ಸಂಭವಿಸಿರುವುದು ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಿಗೂ ಆಘಾತ ತಂದಿದೆ.

Rinku Singh Father Role in His Journey to Team India From Cylinder Deliveries to 28 Cr Net Worth

ರಿಂಕು ಯಶಸ್ಸಿನ ಹಿಂದಿದೆ ತಂದೆಯ ಶ್ರಮ

ರಿಂಕು ಸಿಂಗ್ ಅವರ ಆರ್ಥಿಕ ಸ್ಥಿತಿ ಕುರಿತು ಮಾತನಾಡುವುದಾದರೆ, ಐಪಿಎಲ್ ಒಪ್ಪಂದಗಳು ಮತ್ತು ಬ್ರ್ಯಾಂಡ್ ಒಪ್ಪಂದಗಳ ಮೂಲಕ ಅವರು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್‌ನಲ್ಲಿ ಇಷ್ಟು ದೊಡ್ಡ ಇಷ್ಟು ದೊಟ್ಟ ಮಟ್ಟದಲ್ಲಿ ರಿಂಕು ಸಿಂಗ್ ಸಾಧನೆ ಮಾಡಲು ಅವರ ತಂದೆಯ ಶ್ರಮದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ.

ಮಗ ರಿಂಕು ಕನಸು ನನಸು ಮಾಡಿದ ತಂದೆ

ರಿಂಕು ಯಶಸ್ಸಿನ ಹಿಂದೆ ಅವರ ತಂದೆ ಖಂಚಂದ್ರ ಸಿಂಗ್ ಮಹತ್ವದ ಪಾತ್ರವಿದೆ. ಅಲಿಗಢದಲ್ಲಿ ಸಣ್ಣ ಮಟ್ಟದ ಎಲ್‌ಪಿಜಿ ಸಿಲಿಂಡರ್ ವಿತರಣೆ ವ್ಯವಹಾರ ನಡೆಸುತ್ತಿದ್ದ ಖಂಚಂದ್ರ ಸಿಂಗ್, ತಮ್ಮ ಕುಟುಂಬದ ಜವಾಬ್ದಾರಿ ನೋಡಿಕೊಳ್ಳುವುದರ ಜೊತೆಗೆ ಮಗನ ಕ್ರಿಕೆಟ್ ಕನಸನ್ನು ನನಸು ಮಾಡಲು ಅಪಾರ ತ್ಯಾಗ ಮಾಡಿದ್ದಾರೆ. ಆರ್ಥಿಕವಾಗಿ ಸವಾಲುಗಳಿದ್ದರೂ ರಿಂಕು ಅವರಿಗೆ ಅಭ್ಯಾಸ, ತರಬೇತಿ ಮತ್ತು ಕ್ರೀಡಾ ಸಾಧನೆಗಾಗಿ ಅಗತ್ಯ ಬೆಂಬಲವನ್ನು ನೀಡಿದ್ದಾರೆ.

ರಿಂಕು ಸಿಂಗ್ ಒಟ್ಟು ಆಸ್ತಿ ಮೌಲ್ಯ

ರಿಂಕು ಸಿಂಗ್ ಐಪಿಎಲ್‌ನಲ್ಲಿ ಕೆಕೆಆರ್‌ ತಂಡದ ಪ್ರಮುಖ ಆಟಗಾರರಾಗಿದ್ದು, ಬಾಲಿವುಡ್ ನಟ ಶಾರುಖ್‌ ಖಾನ್ ಸಹ ಮಾಲೀಕತ್ವದ ಈ ಫ್ರಾಂಚೈಸಿಯಲ್ಲಿ ಸೂಪರ್‌ ಸ್ಟಾರ್ ಸ್ಥಾನಕ್ಕೇರಿದ್ದಾರೆ. ಅಲ್ಲದೆ, ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿರುವುದು ಅವರ ಕುಟುಂಬಕ್ಕೆ ಹೆಮ್ಮೆಯ ಸಂಗತಿ. ಮೂಲಗಳ ಪ್ರಕಾರ, 2026ರ ವೇಳೆಗೆ ರಿಂಕು ಸಿಂಗ್ ಅವರ ಒಟ್ಟು ಆಸ್ತಿ ಮೌಲ್ಯವು ಸುಮಾರು 28,00,00,000 ರೂಪಾಯಿಗಳಷ್ಟಿದೆ. ಐಪಿಎಲ್ ಒಪ್ಪಂದಗಳು, ಪಂದ್ಯದ ಸಂಬಳ ಹಾಗೂ ಜಾಹೀರಾತು ಒಪ್ಪಂದಗಳು ಅವರ ಆದಾಯದ ಪ್ರಮುಖ ಮೂಲಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಂಜಾಬ್‌ ತಂಡದಲ್ಲಿ ರಿಂಕು ಸಂಬಳ ಎಷ್ಟು?

ಸಾಧಾರಣ ಹಿನ್ನೆಲೆಯಿಂದ ಬಂದ ರಿಂಕು ಸಿಂಗ್ ಅದ್ಭುತ ಸಾಧನೆ, ಅವರ ತಂದೆಯ ಪರಿಶ್ರಮ ಮತ್ತು ತ್ಯಾಗದ ಫಲವೆಂದು ಕ್ರೀಡಾ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ಅವರ ಐಪಿಎಲ್ ಸಂಬಳ 2025ರಲ್ಲಿ ಭಾರೀ ಏರಿಕೆ ಕಂಡಿದೆ. ಅಲಿಗಢದ ರಿಂಕು ತಮ್ಮ ಐಪಿಎಲ್ ಪಯಣವನ್ನು 2017ರಲ್ಲಿ ಕೇವಲ 19ನೇ ವಯಸ್ಸಿನಲ್ಲಿ ಆರಂಭಿಸಿದ್ದರು. ಆ ಸಮಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್‌ ಕಿಂಗ್ಸ್‌) ತಂಡವು ಅವರನ್ನು ಕೇವಲ 10 ಲಕ್ಷ ರೂಪಾಯಿಗೆ ಸೇರ್ಪಡೆ ಮಾಡಿಕೊಂಡಿತ್ತು.

2025ರ ವೇಳೆಗೆ ಸಂಬಳ ಏರಿಕೆ

ನಂತರ 2018ರ ಐಪಿಎಲ್ ಸೀಸನ್‌ಗೆ ಮುನ್ನ ಕೆಕೆಆರ್ ತಂಡವು 80 ಲಕ್ಷ ರೂಪಾಯಿಗೆ ರಿಂಕು ಅವರನ್ನು ಖರೀದಿಸಿತು. 2018ರಿಂದ 2021ರವರೆಗೆ ಅವರ ಸಂಬಳ ಇದೇ ಮುಂದುವರಿಯಿತು. ಆದರೆ, 2022ರಿಂದ 2024ರವರೆಗೆ ಅವರ ಸಂಬಳ 55 ಲಕ್ಷ ರೂಪಾಯಿಗೆ ಇಳಿಕೆಯಾಗಿತ್ತು. ಕಾರಣ, 2018ರಿಂದ 2021ರವರೆಗೆ ಅವರು ಕೇವಲ 10 ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದಿದ್ದರು. ನಂತರದ ಅವಧಿಯಲ್ಲಿ ತಮ್ಮ ಅದ್ಭುತ ಫಿನಿಶಿಂಗ್ ಸಾಮರ್ಥ್ಯ ಮತ್ತು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದು, ಐಪಿಎಲ್‌ನಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದರು. ಇದರಿಂದಾಗಿ 2025ರ ವೇಳೆಗೆ ಅವರ ಸಂಬಳದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಆದರೆ, ಐಪಿಎಲ್ 2023ರ ಸೀಸನ್‌ ರಿಂಕು ಸಿಂಗ್‌ ಪಾಲಿಗೆ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲು ಕಾರಣವಾಯಿತು. ಆಗ ಐಪಿಎಲ್‌ನಲ್ಲಿ ರಿಂಕು 14 ಪಂದ್ಯಗಳಲ್ಲಿ 474 ರನ್‌ಗಳನ್ನು ಸಿಡಿಸಿ ಎಲ್ಲರ ಗಮನಸೆಳೆದರು. ಅವರು ಆ ಸೀಸನ್‌ನಲ್ಲಿ 59.25ರ ಅದ್ಭುತ ಸರಾಸರಿ ಹಾಗೂ 149.52ರ ಸ್ಟ್ರೈಕ್‌ ರೇಟ್ ಹೊಂದಿದ್ದರು. ಜೊತೆಗೆ 4 ಅರ್ಧಶತಕಗಳನ್ನು ಕೂಡ ದಾಖಲಿಸಿದರು.
ಒತ್ತಡದ ಸಂದರ್ಭಗಳಲ್ಲಿ ಆಡಿದ ಮ್ಯಾಚ್‌ ವಿನ್ನಿಂಗ್ ಇನ್ನಿಂಗ್ಸ್‌ಗಳು ಕೆಕೆಆರ್‌ ತಂಡಕ್ಕೆ ಅಪಾರ ವಿಶ್ವಾಸ ತುಂಬಿದವು. ಆದ್ದರಿಂದ 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಕೆಕೆಆರ್ ತಂಡವು ರಿಂಕು ಸಿಂಗ್ ಅವರನ್ನು ಬರೋಬ್ಬರಿ 13,00,00,000 ರೂಪಾಯಿಗೆ ಮತ್ತೆ ರಿಟೇನ್ ಮಾಡಿಕೊಂಡಿತು.

3.5 ಕೋಟಿಗೆ ಬಂಗ್ಲೆ ಖರೀದಿ

ರಿಂಕು ಸಿಂಗ್ ಅವರ ಜೀವನಶೈಲಿ ಈಗ ಸಂಪೂರ್ಣ ಬದಲಾಗಿದೆ. 2025ರ ಮೆಗಾ ಹರಾಜಿಗೆ ಮುನ್ನ ಕೆಕೆಆರ್ ತಂಡವು ಅವರನ್ನು 13 ಕೋಟಿ ರೂಪಾಯಿಗೆ ರಿಟೇನ್ ಮಾಡಿತ್ತು. ಅದೇ ಮೊತ್ತಕ್ಕೆ 2026ರ ಐಪಿಎಲ್‌ ಸೀಸನ್‌ಗೂ ಅವರು ಉಳಿಸಿಕೊಂಡಿದೆ. ಐಪಿಎಲ್ ಸಂಬಳದಲ್ಲಿ ಕಂಡ ಭಾರೀ ಏರಿಕೆಯು ರಿಂಕು ಸಿಂಗ್ ಅವರಿಗೆ ತಮ್ಮ ಕುಟುಂಬಕ್ಕಾಗಿ ಐಷಾರಾಮಿ ಮನೆ ಖರೀದಿಸಲು ನೆರವಾಯಿತು. ಉತ್ತರ ಪ್ರದೇಶದ ಅಲಿಗಢದಲ್ಲಿ ಅವರು ಸುಮಾರು 3.5 ಕೋಟಿ ರೂಪಾಯಿಗೆ ಭವ್ಯ ಬಂಗ್ಲೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ರಿಂಕು ಸಿಂಗ್ ಮನೆಯ ವಿಶೇಷತೆಗಳು

* ಈ ಮನೆ ಅಲಿಗಢದ ಓಜೋನ್ ಸಿಟಿಯ ‘ದಿ ಗೋಲ್ಡನ್ ಎಸ್ಟೇಟ್’ ಪ್ರದೇಶದಲ್ಲಿದೆ.

* ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಮನೆ ರಿಂಕು ಸಿಂಗ್ ಅವರ ಯಶಸ್ಸಿನ ಸಂಕೇತವಾಗಿದೆ.

* ಈ ಐಷಾರಾಮಿ ಮನೆ ಮೂರು ಮಹಡಿಗಳನ್ನು ಹೊಂದಿದ್ದು, 6 ದೊಡ್ಡ ಬೆಡ್‌ರೂಮ್‌ಗಳು, ಉದ್ಯಾನವನ, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳಿವೆ.

* ರೂಫ್ಟಾಪ್ ಬಾರ್ ವ್ಯವಸ್ಥೆಯೂ ಇದ್ದು, ಆಧುನಿಕ ವಿನ್ಯಾಸ ಮತ್ತು ಭವ್ಯ ಇಂಟೀರಿಯರ್‌ಗಳಿಂದ ಈ ಮನೆ ವಿಶೇಷವಾಗಿ ಗಮನ ಸೆಳೆಯುತ್ತದೆ.

ಬಿಸಿಸಿಐಯಿಂದ ಬರುವ ಹಣ ಎಷ್ಟು?

ಐಪಿಎಲ್‌ನಿಂದ ಬರುವ ಭಾರೀ ಆದಾಯದ ಜೊತೆಗೆ, ರಿಂಕು ಸಿಂಗ್ ಅವರಿಗೆ ಬಿಸಿಸಿಐಯಿಂದ ವರ್ಷಕ್ಕೆ 1 ಕೋಟಿ ರೂಪಾಯಿ ಮೌಲ್ಯದ ವಾರ್ಷಿಕ ಒಪ್ಪಂದವೂ ಇದೆ. ಇದರಿಂದ ಅವರ ಒಟ್ಟು ಆದಾಯ ಮತ್ತಷ್ಟು ಹೆಚ್ಚಾಗಿದೆ. ರಿಂಕು ಸಿಂಗ್ ಅವರು ಭಾರತ ಕ್ರಿಕೆಟ್‌ ತಂಡದ ಪರ 45 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ 665 ರನ್ ಗಳಿಸಿದ್ದಾರೆ. ಅವರು 39.11ರ ಸರಾಸರಿ ಮತ್ತು 155.73ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ 3 ಅರ್ಧಶತಕಗಳನ್ನು ಕೂಡ ದಾಖಲಿಸಿದ್ದಾರೆ. ಅಲ್ಲದೆ, 2 ಏಕದಿನ ಪಂದ್ಯಗಳಲ್ಲೂ ಆಡಿದ್ದು, ಒಟ್ಟು 55 ರನ್ ಗಳಿಸಿದ್ದಾರೆ.

ರಿಂಕು ಮದುವೆ ಮುಂದೂಡಿಕೆ ಆಗಿದ್ದು ಯಾಕೆ?

ರಿಂಕು ಸಿಂಗ್ ಅವರು ಕಳೆದ ವರ್ಷ ಜೂನ್ 8, 2025 ರಂದು ಲೋಕಸಭಾ ಸಂಸದೆಯಾದ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷ ಅವರೊಂದಿಗೆ ವಿವಾಹವಾಗುವ ಯೋಜನೆ ಇದ್ದುದಾಗಿ ತಿಳಿದುಬಂದಿದೆ. ಕ್ರಿಕೆಟ್ ವೇಳಾಪಟ್ಟಿ ಮತ್ತು ತಂದೆಯ ಅನಾರೋಗ್ಯದ ಕಾರಣದಿಂದ ಮದುವೆ ದಿನಾಂಕಗಳು ಹಲವು ಬಾರಿ ಮುಂದೂಡಲ್ಪಟ್ಟಿದ್ದವು ಎಂದು ವರದಿಯಾಗಿತ್ತು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rinku-singh-father-role-in-his-journey-to-team-india-from-cylinder-deliveries-to-28-cr-net-worth-445333.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo