
India
oi-Madhusudhan KR
LPG Price: ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಇಂದು (ಮಾರ್ಚ್ 1) ದರವನ್ನು ಏರಿಕೆ ಮಾಡಲಾಗಿದೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಮಾಡಲಾಗುತ್ತದೆ. ಇದೀಗ ಮಾರ್ಚ್ 1ರ ಭಾನುವಾರ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಹಳೇ ದರ ಮುಂದುವರೆದಿದೆ.

ಎಲ್‌ಪಿಜಿ ದರ ಭಾರೀ ಏರಿಕೆ
ತೈಲ ಮಾರುಕಟ್ಟೆ ಕಂಪನಿಗಳು ಭಾರತದಲ್ಲಿ ಎಲ್‌ಪಿಜಿ ದರಗಳಲ್ಲಿ ಭಾರೀ ಏರಿಕೆ ಮಾಡಿದ್ದು, ಈ ನಿರ್ಧಾರ ಗ್ರಾಹಕರಿಗೆ ಶಾಕ್ ನೀಡಿದೆ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್‌ಗಳ ಬೆಲೆ 28 ರಿಂದ 31 ರೂಪಾಯಿವರೆಗೆ ಹೆಚ್ಚಳವಾಗಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ (14.2 ಕೆಜಿ) ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಯಾವ ನಗರದಲ್ಲಿ ದರ ಎಷ್ಟಿದೆ?
ನವದೆಹಲಿಯಲ್ಲಿ ಎಲ್‌ಪಿಜಿ ದರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 28 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಮಾರ್ಚ್ 1, 2026ರಿಂದ 1768.50 ರೂಪಾಯಿ ಆಗಿದೆ. ಹಿಂದಿನ ತಿಂಗಳಲ್ಲಿ 1740.50 ರೂಪಾಯಿ ಆಗಿತ್ತು.
ಕೋಲ್ಕತ್ತಾದಲ್ಲಿ ಎಲ್‌ಪಿಜಿ ದರ: ಕೋಲ್ಕತ್ತಾದಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 31 ರೂಪಾಯಿ ಹೆಚ್ಚಳವಾಗಿದ್ದು, ಹೊಸ ದರ 1,875.50 ರೂಪಾಯಿ ಆಗಿದೆ. ಕಳೆದ ತಿಂಗಳಲ್ಲಿ 1,844.50 ರೂಪಾಯಿ ಇತ್ತು.
ಮುಂಬೈನಲ್ಲಿ ಎಲ್‌ಪಿಜಿ ದರ: ಮುಂಬೈಯಲ್ಲಿಯೂ ಎಲ್‌ಪಿಜಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಮಾರ್ಚ್ 1ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 1,720.50 ರೂಪಾಯಿ ಆಗಿದೆ. ಕಳೆದ ತಿಂಗಳಲ್ಲಿ 1,692 ರೂಪಾಯಿ ಇದ್ದು, 28.50 ರೂಪಾಯಿ ಹೆಚ್ಚಾಗಿದೆ.
ಚೆನ್ನೈನಲ್ಲಿ ಎಲ್‌ಪಿಜಿ ದರ: ಚೆನ್ನೈಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 29.50 ರೂಪಾಯಿ ಹೆಚ್ಚಳ ಆಗಿದ್ದು, ಪ್ರತಿ ಸಿಲಿಂಡರ್ ಬೆಲೆ 1,929 ರೂಪಾಯಿ ಆಗಿದೆ. ಫೆಬ್ರವರಿ ತಿಂಗಳಲ್ಲಿ 1,899.50 ರೂಪಾಯಿ ಇತ್ತು.
ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ
* ಬೆಂಗಳೂರು – 1,814 ರೂಪಾಯಿ
* ನವದೆಹಲಿ – 1768.50 ರೂಪಾಯಿ (ಹಿಂದಿನ ದರ 1740.50 ರೂಪಾಯಿ)
* ಕೋಲ್ಕತ್ತಾ – 1,875.50 ರೂಪಾಯಿ (ಹಿಂದಿನ ದರ 1,844.50 ರೂಪಾಯಿ)
* ಮುಂಬೈ – 1,720.50 ರೂಪಾಯಿ (ಹಿಂದಿನ ದರ 1,692 ರೂಪಾಯಿ)
* ಚೆನ್ನೈ – 1,929 ರೂಪಾಯಿ (ಹಿಂದಿನ ದರ 1,899.50 ರೂಪಾಯಿ)
ಸಾಮಾನ್ಯ ಜನರು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗುತ್ತದೆ ಎನ್ನುವ ಭರವಸೆ ಸುಳ್ಳದಂತಾಗಿದೆ. ಈ 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತೈಲ ಕಂಪನಿಗಳು ತಿಳಿಸಿವೆ. ಇದೇ ದರಗಳು ಮುಂದುವರೆದಿದ್ದು, ಯಾವುದೇ ಹೆಚ್ಚಳ ಅಥವಾ ಇಳಿಕೆಯಾಗಿಲ್ಲ.
ಪ್ರಮುಖ ನಗರಗಳಲ್ಲಿ ಗೃಹಬಳಕೆ ಎಲ್‌ಪಿಜಿ ದರ
* ಬೆಂಗಳೂರು – 855.50 ರೂಪಾಯಿ 855.50
* ದೆಹಲಿ – 853 ರೂಪಾಯಿ
* ಮುಂಬೈ – 852.50 ರೂಪಾಯಿ
* ಲಕ್ನೋ – 890.50 ರೂಪಾಯಿ
* ಹೈದರಾಬಾದ್ – 905 ರೂಪಾಯಿ
* ಪಾಟ್ನಾ – 951 ರೂಪಾಯಿ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/lpg-price-commercial-cylinder-rates-hike-for-march-1-2026-no-change-in-domestic-lpg-prices-445539.html. xn--babytilbehr-pgb.com does not claim ownership of this content. All rights remain with the original publisher.
