
Entertainment
oi-Manohara M
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅವರ ಮದುವೆಯ ಸಂಭ್ರಮದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಉದಯಪುರದಲ್ಲಿ ನಡೆದ ಅದ್ದೂರಿ ಮದುವೆಯ ಫೋಟೋಗಳ ಜೊತೆಗೆ ರಶ್ಮಿಕಾ ಹಂಚಿಕೊಂಡಿರುವ ‘ಇಂಗ್ಲಿಷ್ ಸಾಲುಗಳು’ ಈಗ ಎಲ್ಲರ ಗಮನ ಸೆಳೆಯುತ್ತಿವೆ.
ತಮ್ಮ ದಾಂಪತ್ಯ ಜೀವನದ ಆರಂಭದ ಕುರಿತು ರಶ್ಮಿಕಾ ಇಂಗ್ಲಿಷ್ನಲ್ಲಿ ಬಹಳ ಅರ್ಥಗರ್ಭಿತವಾಗಿ ಬರೆದುಕೊಂಡಿದ್ದರು. ಈ ಸಾಲುಗಳನ್ನು ಓದಿದ ನೆಟ್ಟಿಗರು, ರಶ್ಮಿಕಾ ಅವರ ಭಾಷಾ ಜ್ಞಾನ ಮತ್ತು ಪದಗಳ ಬಳಕೆಯನ್ನು ಕಂಡು ಬೆರಗಾಗಿದ್ದಾರೆ. “ಇದು ರಶ್ಮಿಕಾ ಅವರೇ ಬರೆದದ್ದಾ ಅಥವಾ ಅವರ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಬರೆದದ್ದಾ?” ಎಂಬ ಕುತೂಹಲದ ನಡುವೆಯೇ, ಅವರ ವಿದ್ಯಾರ್ಹತೆಯ ಬಗ್ಗೆ ಹುಡುಕಾಟವೂ ಶುರುವಾಗಿದೆ.

ಯಾವ ವಿಷಯದಲ್ಲಿ ಪದವಿ?
ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕೊಡಗಿನ ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ (COPS) ಪೂರೈಸಿದರು. ನಂತರ ಮೈಸೂರಿನ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಆರ್ಟ್ಸ್ನಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು (PUC) ಮುಗಿಸಿದರು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಅವರು, ಅಲ್ಲಿನ ಪ್ರಸಿದ್ಧ ಎಂ.ಎಸ್.ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮನಃಶಾಸ್ತ್ರ (Psychology), ಪತ್ರಿಕೋದ್ಯಮ (Journalism) ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ (English Literature) ಪದವಿ ಪಡೆದಿದ್ದಾರೆ.
ರಶ್ಮಿಕಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಅವರು ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತೆ ಎಂಬುದು ಅವರ ಶೈಕ್ಷಣಿಕ ದಾಖಲೆಗಳಿಂದ ಸಾಬೀತಾಗಿದೆ. ಅವರು ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿರುವುದರಿಂದಲೇ ಅವರ ಬರಹದಲ್ಲಿ ಅಷ್ಟು ಸ್ಪಷ್ಟತೆ ಮತ್ತು ಪಾಂಡಿತ್ಯವಿದೆ ಎಂಬುದು ಈಗ ಅಭಿಮಾನಿಗಳ ಮಾತಾಗಿದೆ.
ರಶ್ಮಿಕಾ ಅವರೇ ಬರೆದದ್ದಾ?
ಹಿರಿಯ ಪತ್ರಕರ್ತ ಸಿಬಂತಿ ಪದ್ಮನಾಭ ಕೆ.ವಿ. ಅವರು ಈ ಬಗ್ಗೆ ಫೇಸ್ಬುಕ್ನಲ್ಲಿ ವಿಶೇಷವಾಗಿ ಬರೆದುಕೊಂಡಿದ್ದಾರೆ. “ನಾನೇನು ರಶ್ಮಿಕಾ ಫ್ಯಾನಲ್ಲ. ಅವರು ಕೂಡ ನಾವು ಡಿಗ್ರಿಯಲ್ಲಿ ಓದಿದ ಜರ್ನಲಿಸಂ-ಇಂಗ್ಲಿಷ್-ಸೈಕಾಲಜಿ ಕಾಂಬಿನೇಶನ್ ಓದಿದ್ದಾರೆ ಎಂದು ತಿಳಿದ ಮೇಲೆ ಅವರ ಬಗ್ಗೆ ಸ್ವಲ್ಪ ಕುತೂಹಲ ಬೆಳೀತು ಅಷ್ಟೆ. ಪರ್ವಾಗಿಲ್ಲ ಈ ಜನ ಅಂತ 🙂 ತಮ್ಮ ಮದುವೆ ಬಗ್ಗೆ ಅವರು ಬರೆದುಕೊಂಡಿರುವುದು ಸೊಗಸಾಗಿದೆ. ಅವರೇ ಬರೆದದ್ದಾ, ಅವರ ಸೋಶಿಯಲ್ ಮೀಡಿಯಾ ಮ್ಯಾನೇಜರುಗಳಾ ಗೊತ್ತಿಲ್ಲ. ಆದರೂ ಇದು ವಿಜಯ್ ಬರೆದುಕೊಂಡದ್ದಕ್ಕಿಂತ ಚೆನ್ನಾಗಿದೆ. ನೀವೂ ಓದಿಬಿಡಿ ಅತ್ತ 😃” ಎಂದು ರಶ್ಮಿಕಾ ಅವರ ಇಂಗ್ಲಿಷ್ ಜ್ಞಾನಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲೂ ತಾವು ಮುಂದು ಎಂಬುದನ್ನು ಸಾಬೀತುಪಡಿಸಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಜೋಡಿಯ ಈ ಹೊಸ ಪಯಣಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ರಶ್ಮಿಕಾ ಪೋಸ್ಟ್ನಲ್ಲೇನಿದೆ?
ರಶ್ಮಿಕಾ ಮಂದಣ್ಣ ಅವರು ತಮ್ಮ ವಿವಾಹದ ಸಂದರ್ಭದಲ್ಲಿ ಹಂಚಿಕೊಂಡ ಈ ಭಾವನಾತ್ಮಕ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ರಶ್ಮಿಕಾ ಅವರ ಈ ಬರಹ ಹೀಗಿದೆ. “ನನ್ನ ಪತಿ ಮಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ!” ಎಂದು ಸಂಭ್ರಮದಿಂದಲೇ ಬರಹ ಆರಂಭಿಸಿದ್ದಾರೆ. “ನಿಜವಾದ ಪ್ರೀತಿ ಅಂದರೆ ಏನು ಮತ್ತು ಮನಸ್ಸಿನ ಶಾಂತಿ ಅಂದರೆ ಹೇಗಿರುತ್ತದೆ ಎಂದು ನನಗೆ ಕಲಿಸಿಕೊಟ್ಟ ವ್ಯಕ್ತಿ ಇವರು” ಎಂದು ವಿಜಯ್ ಅವರನ್ನು ರಶ್ಮಿಕಾ ಬಣ್ಣಿಸಿದ್ದಾರೆ.
Hi my loves,
Introducing to you now “My Husband”! 💘
Mr. Vijay Deverakonda!! ❤️
The man who taught me what true love feels like,
The man who showed me what being in peace feels like! 🤍
The man who told me everyday that dreaming big was absolutely ok and constantly telling… pic.twitter.com/MPrsGfNTwb— Rashmika Mandanna (@iamRashmika) February 26, 2026
“ದೊಡ್ಡ ಕನಸು ಕಾಣುವುದು ತಪ್ಪಲ್ಲ ಎಂದು ಪ್ರತಿ ದಿನ ಹೇಳುತ್ತಾ, ನನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲು ವಿಜಯ್ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದು ನಾನು ಯಾವ ರೀತಿಯ ಮಹಿಳೆಯಾಗಬೇಕೆಂದು ಕನಸು ಕಂಡಿದ್ದೆನೋ, ಆ ಮಟ್ಟಕ್ಕೆ ಬೆಳೆಯಲು ವಿಜಯ್ ಕಾರಣ. ಅವರ ಪ್ರೀತಿಯೇ ನನ್ನನ್ನು ಇಂದು ಹೀಗೆ ರೂಪಿಸಿದೆ” ಎಂದು ಭಾವುಕರಾಗಿದ್ದಾರೆ. “ನಿನ್ನ ಹೆಂಡತಿ ಎಂದು ಕರೆಸಿಕೊಳ್ಳಲು ನನಗೆ ಬಹಳ ಉತ್ಸಾಹವಿದೆ. ವಿಜ್ಜು, ನನ್ನ ಸೋಲು-ಗೆಲುವು, ಸುಖ-ದುಃಖ ಎಲ್ಲದಕ್ಕೂ ನೀನು ಸಾಕ್ಷಿಯಾಗಿರುವುದು ನನ್ನ ಬದುಕಿಗೆ ಒಂದು ಅರ್ಥ ತಂದಿದೆ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-wedding-post-goes-viral-with-vijay-deverakonda-how-educated-is-the-kodagu-beauty-445535.html. xn--babytilbehr-pgb.com does not claim ownership of this content. All rights remain with the original publisher.
