
India
-Shankrappa Parangi
Holi Festival 2026: ಕರ್ನಾಟಕ ಸೇರಿದಂತೆ ಭಾರತವು ಬಣ್ಣಗಳ ಹಬ್ಬ ‘ಹೋಳಿ’ (Holi 2026) ಆಚರಣೆಗೆ ಸಿದ್ಧವಾಗುತ್ತಿದೆ. ಹೋಳಿ ಹಬ್ಬಕ್ಕೆ ಎರಡು ದಿನ ಬಾಕಿ ಇದೆ. ದೀಪಾವಳಿ ಬಳಿಕ ಮಾರ್ಚ್ ವೇಳೆಗೆ ಬರುವ ಹಿಂದೂಗಳ ಪಾಲಿನ ಮತ್ತೊಂದು ವಿಶೇಷ ಹಬ್ಬವಾಗಿದೆ. ಯುವ ಸಮೂಹ ಹಾಗೂ ಮಕ್ಕಳು ಇದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಪರಸ್ಪರ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಿಸುವುದು ವಾಡಿಕೆ. ಹಾಗಾದರೆ ಈ ವರ್ಷ 2026ರಲ್ಲಿ ಹೊಳಿ ಹಬ್ಬ (Holi Festival 2026 Date) ಯವಾತ್ತಿದೆ?, ಆಚರಣೆ ಸಮಯ, ಅದರ ಹಿನ್ನೆಲೆ, ಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಸೇರಿದಂತೆ ಭಾರತದ ಅನೇಕ ಪ್ರದೇಶಗಳಲ್ಲಿ ‘ಹೋಳಿಕಾ ದಹನ್’ ಮತ್ತು ‘ರಂಗ್ವಾಲಿ ಹೋಳಿ’ ಎಂದು. ಹೋಳಿಯನ್ನು ಎರಡು ದಿನ ಆಚರಿಸಲಾಗುತ್ತದೆ. ಈ ಬಾರಿಯು ಮಾರ್ಚ್ 3 ಮತ್ತು 4ರಂದು ಆಚರಿಸಲಾಗುತ್ತದೆ. ಮೊದಲ ದಿನವನ್ನು ಹೋಳಿಕಾ (ಕಾಮನದಹನ) ದಹನ ಆಚರಣೆ ನಡೆಯುತ್ತದೆ. ಇದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸುವ ಪದ್ಧತಿಯೂ ಜಾರಿಯಲ್ಲಿದೆ. ಈ ಸಮಯದಲ್ಲಿ ಹಬ್ಬವನ್ನು ಆಚರಿಸುವ ಜನರು ಕಾಮನ ಪ್ರತಿಕೃತಿ ಮಾಡಿ ಬಳಿಕ ಅದನ್ನು ಸುಟ್ಟು ಓಕಳಿ ಆಡುತ್ತಾರೆ.

ಹೋಳಿಯ ಎರಡನೇ ದಿನ, ರಂಗ್ವಾಲಿ ಹೋಳಿ ಅಥವಾ ಧುಲಂಡಿ ಎಂಬ ಆಚರಿಸಲಾಗುತ್ತದೆ. ಒಣ ಗುಲಾಲ್, ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಇದು ಹೋಳಿಯ ಮುಖ್ಯ ದಿನವಾಗಿದೆ. ಕರ್ನಾಟಕ ಸೇರಿ ಅದೆಷ್ಟೋ ಕಡೆಗೆ ಮಾರ್ಚ್ 4ರಂದು ಬಣ್ಣ ಹಚ್ಚಿ ಹೋಳಿ ಆಚರಣೆ ನಡೆಯಲಿದೆ.
ಹೋಳಿ ಹಬ್ಬದ ಪೌರಾಣಿಕ ಮಹತ್ವವೇನು?
ಹೋಳಿಯನ್ನು ಹಿಂದೂ ಪೌರಾಣಿಕವಾಗಿ ದಂತಕಥೆ ಅಂತಲೂ ಗುರುತಿಸಲಾಗುತ್ತದೆ. ಅಲ್ಲಿ ಹಿರಣ್ಯಕಶ್ಯಪು ತನ್ನ ಮಗ ಪ್ರಹ್ಲಾದನನ್ನು ತನ್ನ ಸಹೋದರಿ ಹೋಳಿಕಾಳೊಂದಿಗೆ ಜೀವಂತವಾಗಿ ಸುಡಲು ಪ್ರಯತ್ನಿಸಿದನು. ಆ ವೇಳೆ ಪ್ರಹ್ಲಾದನು ಬೆಂಕಿಯಿಂದ ಬದುಕುಳಿಯುತ್ತಾನೆ. ಅವನ ಸಹೋದರಿ ಹೋಳಿಕಾ ಸುಟ್ಟುಹೋಗುತ್ತಾಳೆ. ಅಲ್ಲಿಂದ ಅದನ್ನು ಆಧ್ಯಾತ್ಮಿಕವಾಗಿ ಹಬ್ಬದಾಚರಣೆಯಾಗಿ ಆಚರಿಸಿಕೊಂಡು ಬರಲಾಗಿದೆ. ‘ಹೋಳಿಕಾ ದಹನ್’ ವೇಳೆ ದೀಪೋತ್ಸವ ಬೆಳಗಿಸಲಾಗುತ್ತದೆ. ಇದು ಭಕ್ತಿ ಮತ್ತು ನ್ಯಾಯದ ವಿಜಯದ ಸಂಕೇತವಾಗಿದೆ.
ಹೋಳಿ ಹುಣ್ಣಿಮೆ: ಹಬ್ಬದ ಸಮಯ ವಿವರ
ಪಂಚಾಂಗದ ಪ್ರಕಾರ ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಮಧ್ಯದ ನಡುವೆ ಫಾಲ್ಗುಣದ ಪೂರ್ಣಿಮೆಯ (ಹುಣ್ಣಿಮೆಯ ದಿನ) ಸಂಜೆಯಿಂದ ಹೋಳಿಯನ್ನು ಆಚರಿಸಲಾಗುತ್ತದೆ. ಸದರಿ ವರ್ಷ 2026ರ ಮಾರ್ಚ್ 3ರಂದು ಮಂಗಳವಾರ ಹೋಳಿಕಾ ದಹನ ಆಚರಿಸಲಾಗುತ್ತದೆ. ಮರು ದಿನ ಮಾರ್ಚ್ 4ರಂದು ಬುಧವಾರ ರಂಗ್ವಾಲಿ ಹೋಳಿ ಆಚರಿಸಲಾಗುತ್ತದೆ. ಈ ಎರಡು ದಿನವು ಬಹುತೇಕ ಕಡೆಗಳಲ್ಲಿ ಗುಲಾಲ್ (ಪುಡಿ ಬಣ್ಣ) ಪರಸ್ಪರ ಹಚ್ಚಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಲಾಗುತ್ತದೆ.
ಹೋಳಿ ಹಬ್ಬ: ಸಂಕ್ಷಿಪ್ತ ಮಾಹಿತಿ
ಮಾರ್ಚ್ 2 ಸೋಮವಾರ: ಪೂರ್ಣಿಮ ತಿಥಿ ಆರಂಭ- ಸಂಜೆ 5.55 ಗಂಟೆ
ಮಾರ್ಚ್ 3 ಮಂಗಳವಾರ: ಪೂರ್ಣಿಮ ತಿಥಿ ಅಂತ್ಯ- ಸಂಜೆ 5.07 ಗಂಟೆ
ಮಾರ್ಚ್ 3 ಮಂಗಳವಾರ: ಹೋಳಿಕಾ ದಹನ (ಇದಕ್ಕೆ ನಿರ್ದಿಷ್ಟ ಸಮಯದ ಸೂಚನೆ ಇಲ್ಲ)
ಮಾರ್ಚ್ 4 ಬಧವಾರ: ಹೋಳಿ ಆಚರಣೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/holi-2026-date-holika-dahan-timings-and-significance-of-the-festival-of-colors-know-more-details-011-445579.html. xn--babytilbehr-pgb.com does not claim ownership of this content. All rights remain with the original publisher.
