
Entertainment
oi-Manohara M
ತಮಿಳು ಚಿತ್ರರಂಗದ ಹಿರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Thalapathy Vijay) ಅವರ 25 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಸಂಗೀತಾ ಯಾರು? ಅವರ ಹಿನ್ನೆಲೆ ಮತ್ತು ಈ ವಿಚ್ಛೇದನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳು ಕೂಡ ಮುನ್ನೆಲೆಗೆ ಬಂದಿವೆ.
ಯಾರು ಈ ಸಂಗೀತಾ ಸ್ವರ್ಣಲಿಂಗಂ?
ಸಂಗೀತಾ ಅವರು ಲಂಡನ್ ಮೂಲದ ಶ್ರೀಲಂಕನ್ ತಮಿಳು ಕುಟುಂಬಕ್ಕೆ ಸೇರಿದವರು. ಇವರ ತಂದೆ ಸ್ವರ್ಣಲಿಂಗಂ ಅವರು ಲಂಡನ್ನಲ್ಲಿ ನೆಲೆಸಿರುವ ದೊಡ್ಡ ಉದ್ಯಮಿ. ಸಂಗೀತಾ ಅವರು ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು, ಸದ್ಯ ಲಂಡನ್ನಲ್ಲೇ ತಮ್ಮ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ವಿಜಯ್ ಫ್ಯಾನ್ ಆಗಿದ್ದ ಸಂಗೀತಾ
ನಟ ದಳಪತಿ ವಿಜಯ್ ಅವರಿಗೆ ಕೋಟ್ಯಂತರ ಅಭಿಮಾನಿಗಳಾಗಿದ್ದಾರೆ. ಅವರಲ್ಲಿ ಪತ್ನಿ ಸಂಗೀತಾ ಸ್ವರ್ಣಲಿಂಗಂ ಕೂಡ ಒಬ್ಬರು. ವಿಜಯ್ ಮತ್ತು ಸಂಗೀತಾ ಅವರ ಪ್ರೇಮಕಥೆ ಸಿನಿಮಾ ಕಥೆಯಷ್ಟೇ ರೋಚಕವಾಗಿದ್ದು, ಅಭಿಮಾನಿಯಾದವಳು ಅರ್ಧಾಂಗಿಯಾದ ಕಥೆ ತೆರೆದುಕೊಳ್ಳುತ್ತದೆ. 1996ರಲ್ಲಿ ಬಿಡುಗಡೆಯಾದ ವಿಜಯ್ ಅವರ ‘ಪೂವೆ ಉನಕ್ಕಾಗ’ ಸಿನಿಮಾ ನೋಡಿ ಸಂಗೀತಾ ಮಾರು ಹೋಗಿದ್ದರು.
ನಂತರ ವಿಜಯ್ ಅವರನ್ನು ಭೇಟಿ ಮಾಡಲೆಂದೇ ಇವರು ಲಂಡನ್ನಿಂದ ಚೆನ್ನೈಗೆ ಬಂದಿದ್ದರು. ಮೊದಲು ಸ್ನೇಹದಿಂದ ಆರಂಭವಾದ ಇವರ ಸಂಬಂಧ ಬಳಿಕ ಪ್ರೀತಿಗೆ ತಿರುಗಿತು. ಬಳಿಕ 1999ರ ಆಗಸ್ಟ್ 25ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು.

ಮಕ್ಕಳು ಮತ್ತು ಕುಟುಂಬ
ವಿಜಯ್-ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ (ಮಗ) ತಂದೆಯೊಂದಿಗೆ ‘ವೆಟ್ಟೈಕಾರನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘Sigma’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಇನ್ಸ್ಟಾಗ್ರಾಂನಲ್ಲಿ ವಿಜಯ್ ಅವರನ್ನು ಅನ್ಫಾಲೋ ಮಾಡಿರುವುದು ಡಿವೋರ್ಸ್ಗೆ ವದಂತಿಗೆ ಪುಷ್ಟಿ ನೀಡಿತ್ತು. ಇನ್ನು ಮಗಳು ದಿವ್ಯ ಸಾಶಾ, ‘ಥೇರಿ’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಇವರು, ಸದ್ಯ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ವಿಜಯ್ ಅವರಿಗಿಂತ ಹೆಚ್ಚಾಗಿ ಸಂಗೀತಾ ಅವರಿಗೆ ಚಿತ್ರರಂಗದಲ್ಲಿ ಆಪ್ತ ಗೆಳೆಯರಿದ್ದಾರೆ. ನಟ ಅಜಿತ್ ಕುಮಾರ್ ಪತ್ನಿ ಶಾಲಿನಿ ಅಜಿತ್ ಮತ್ತು ಜಯಂ ರವಿ ಅವರ ಮಾಜಿ ಪತ್ನಿ ಆರತಿ ರವಿ ಸಂಗೀತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ಅವರು ರಾಜಕೀಯದಲ್ಲಿ ಸಕ್ರಿಯರಾಗಲು ತಯಾರಿ ನಡೆಸುತ್ತಿರುವಾಗಲೇ ಈ ಕೌಟುಂಬಿಕ ಕಲಹ ಬೀದಿಗೆ ಬಂದಿರುವುದು ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಚ್ಛೇದನಕ್ಕೆ ಕಾರಣವೇನು?
ಇತ್ತೀಚೆಗೆ ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅರ್ಜಿಯಲ್ಲಿ ಅವರು ನೀಡಿರುವ ಪ್ರಮುಖ ಕಾರಣಗಳು ಹೀಗಿವೆ. ಪತಿ ವಿಜಯ್ಗೆ ಪರಸ್ತ್ರೀ ಸಂಬಂಧದ ಆರೋಪ ಮಾಡಿರುವ ಸಂಗೀತಾ, ವಿಜಯ್ ಅವರು ಒಬ್ಬ ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಗಂಭೀರ ಆರೋಪ ಮಾಡಿದ್ದಾರೆ. 2021ರಲ್ಲೇ ಈ ವಿಷಯ ಸಂಗೀತಾ ಅವರಿಗೆ ತಿಳಿದಿತ್ತು. ವಿಜಯ್ ಅವರು ಈ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಭರವಸೆ ನೀಡಿದ್ದರೂ, ಅದು ಮುಂದುವರಿದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
-

Thalapathy Vijay divorce: ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: ತಂದೆಯನ್ನ ಅನ್ಫಾಲೋ ಮಾಡಿದ ಮಗ ಜೇಸನ್ ಸಂಜಯ್
-

Toxic: ಮತ್ತೆ ಬೋಲ್ಡ್ ಅವತಾರದಲ್ಲಿ ಯಶ್: ಮಾರ್ಚ್ 2ಕ್ಕೆ “ಟಾಕ್ಸಿಕ್” ಚಿತ್ರತಂಡದಿಂದ ಬಿಗ್ ಸರ್ಪ್ರೈಸ್
-

Weekly Horoscope March 2 to 8: ಮಾರ್ಚ್ ವಾರಭವಿಷ್ಯ: ಮೇಷದಿಂದ ಮೀನವರೆಗೆ ಯಾರಿಗೆ ಯಶಸ್ಸು, ಯಾರಿಗೆ ಸವಾಲು
-

Lunar Eclipse: ಮಾರ್ಚ್ 3 ಹುಣ್ಣಿಮೆ: ವರ್ಷದ ಮೊದಲ ಮಹಾ ಚಂದ್ರ ಗ್ರಹಣ – ನಾಲ್ಕು ರಾಶಿಗಳಿಗೆ ಅಶುಭ ಸೂಚನೆ
-

Gruhalakshmi scheme: ರಾಜ್ಯದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್: 26, 27ನೇ ಕಂತಿನ ಹಣ ಜಮಾದ ಬಗ್ಗೆ ಮಹತ್ವದ ಅಪ್ಡೇಟ್
-

Horoscope 28 February: ಫೆಬ್ರವರಿ 28ರ ದ್ವಾದಶ ರಾಶಿ ಫಲ: ಯಾವ ರಾಶಿಗೆ ಯಶಸ್ಸು, ಯಾರಿಗೆ ಸವಾಲು ಇಲ್ಲಿದೆ ಸಂಪೂರ್ಣ ಮಾಹಿತಿ
-

LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ
-

ರಣಜಿ ಟೂರ್ನಿಯಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಸೋತರೂ ಗೆದ್ದ ಕನ್ನಡಿಗ: ಮೋಡಿಯಂತೂ ಅಲ್ಲ, ಇಲ್ಲಿದೆ ಮಾಹಿತಿ
-

Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
-

ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ
-

Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ
-

Bengaluru Rental Row: ಬೆಂಗಳೂರು ಬಾಡಿಗೆದಾರರಿಗೆ ಶಾಕ್: ಪೇಂಟಿಂಗ್, ಕ್ಲೀನಿಂಗ್ ಹೆಸರಲ್ಲಿ 51,000 ರೂ. ಕಡಿತ
-

National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್
-

ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ
-

ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/thalapathy-vijay-sangeetha-divorce-buzz-400-crore-wealth-london-life-their-25-year-love-story-445647.html. xn--babytilbehr-pgb.com does not claim ownership of this content. All rights remain with the original publisher.
