ನಾವು ಇಲ್ಲಿರುವುದು ಕಲೆಗಾಗಿ, ದೇಹ ಪ್ರದರ್ಶನಕ್ಕಲ್ಲ: ಕಿಡಿಗೇಡಿಗಳ ವಿರುದ್ಧ ರೊಚ್ಚಿಗೆದ್ದ ಕನ್ನಡ ಚಿತ್ರರಂಗದ ತಾರೆಯರು | Sandalwood Stars Launch Campaign Against Vulgar Camera Angles and Zooming on actress

Entertainment

oi-Shankrappa Parangi

ಬೆಂಗಳೂರು: ಸೆಲೆಬ್ರಿಟಿಗಳೆಂದರೆನೇ ಹಾಗೆ ಅವರು ತಮ್ಮ ಮುಖ, ದೇಹವನ್ನು ಸುಂದರವಾಗಿಟ್ಟು ಕೊಂಡಿರುತ್ತಾರೆ. ಒಳ್ಳೆಯ ಉಡುಪುಗಳನ್ನು ಧರಿಸಿರುತ್ತಾರೆ. ಅದರಲ್ಲೂ ಮಹಿಳಾ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಮತ್ತಷ್ಟು ಕಾಳಜಿ ವಹಿಸುತ್ತಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ನಟಿ ಮಣಿಯರು ಹೆಚ್ಚು ಆಕರ್ಷವಾಗಿ ಕಾಣುತ್ತಾರೆ. ಅವರ ಸೌಂದರ್ಯ ಮಾತ್ರವಲ್ಲದೇ, ಅವರ ಅಭಿನಯ, ಚಿತ್ರರಂಗಕ್ಕೆ ನೀಡಿದ ಸಮರ್ಪಣಾ ಭಾವ, ಅವರ ಸಾಧನೆಯನ್ನು ಗೌರವಿಸಬೇಕು. ಆದರೆ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ ನಟಿಯರನ್ನು ಅಸಭ್ಯ ಕೋನದಿಂದ ಕ್ಯಾಮೆರಾದಲ್ಲಿ ಸೆರೆ ಹಿಡಿದು ಹರಿಬಿಡುವ ಚಾಳಿ ಆರಂಭವಾಗಿದೆ. ಇದು ದಿನೇ ದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಸ್ಯಾಂಡಲ್‌ವುಡ್ ಯುವ ನಟರು, ನಟಿಯರು ಅಭಿಯಾನ ಆರಂಭಿಸಿದ್ದಾರೆ.

ಚಿತ್ರರಂಗದಲ್ಲಿ ಕೆಲವು ಮಹಿಳೆಯರು ಇಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಅಭಿಮಾನಿಗಳು ಅತಿರೇಕದಲ್ಲಿ ವರ್ತಿಸುವುದು, ಮುಟ್ಟಲು ಪ್ರಯತ್ನಿಸುವುದು, ಇನ್ನಿತರ ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೆಷ್ಟೋ ನಟಿಯರು ಹೇಳಿಕೊಂಡಿರುವುದಿಲ್ಲ. ಮಹಿಳೆಯರನ್ನು ಡ್ರೆಸ್ ವಿಚಾರವಾಗಿಯೇ ಸಾಕಷ್ಟು ಟ್ರೋಲ್ ಮಾಡುವ ಪ್ರಯತ್ನವೂ ನಡೆಯುತ್ತಲೇ ಇದೆ.

Sandalwood Stars Launch Campaign

ಇದೀಗ ‘ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ಕಲೆಗಿಂತ ದೇಹಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಹರಿಬಿಡುವ ಕಿಡಿಗೇಡಿಗಳ ವಿರುದ್ಧ ಕನ್ನಡ ಚಿತ್ರರಂಗದ ತಾರೆಯರು ಪ್ರತಿಭಟಿಸಲು ಮುಂದಾಗಿದ್ದಾರೆ. ಈ ಅಭಿಯನಕ್ಕೆ ನಟಿ ಸಪ್ತಮಿಗೌಡ ಅವರು ಚಾಲನೆ ನೀಡಿದ್ದಾರೆ. ನಟಿ ರಮ್ಯಾ, ರಕ್ಷಿತಾ ಹಾಗೂ ನಟ ಯುವ ರಾಜ್ ಕುಮಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ (ಸ್ಟೇಟಸ್) ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟಿಯರು ಎದುರಿಸುವ ಸಮಸ್ಯೆಗಳನ್ನು ಬಹಿರಂಗವಾಗಿ ಚಿತ್ರರಂಗದ ನಟ-ನಟಿಯರು ಖಂಡಿಸಿದ್ದಾರೆ. ಇದರ ವಿರುದ್ಧ ಜಾಗೃತರಾಗಬೇಕು, ಹೋರಾಡಬೇಕೆಂದು ತಮ್ಮ ಅಭಿಯಾನ ಮೂಲಕ ಕರೆ ನೀಡಿದ್ದಾರೆ. #ActorsNotObjects ಹ್ಯಾಷ್‌ಟ್ಯಾಗ್‌ನಡಿ ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇಂತಹ ಅಹಿತಕರ ಸಮಸ್ಯೆಗಳನ್ನು ಮಹಿಳಾ ಆಟಗಾರ್ತಿಯರು ಎದುರಿಸುತ್ತಿದ್ದಾರೆ.

ಅಭಿಯಾನ: ಸೆಲೆಬ್ರಿಟಿಗಳ ಪೋಸ್ಟ್‌ನಲ್ಲೇನಿದೆ?

ಚಿತ್ರರಂಗದಲ್ಲಿರುವ ಮಹಿಳೆಯರಾಗಿ ನಿರಂತರವಾಗಿ ನಡೆಯುತ್ತಿರುವ ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃಪುನಃ ನಡೆಯುತ್ತಿವೆ.

ಇಂತಹ ವರ್ತನೆ ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ. ಅವಮಾನಕಾರಿ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಬೆಳವಣಿಗೆಯಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ ಇದನ್ನು ಸಾಮಾನ್ಯವೆಂದು ಸ್ವೀಕರಿಸಲು ಸಾಧ್ಯವಿಲ್ಲ, ನಾವು ಇದನ್ನು ಸಹಿಸುವುದಿಲ್ಲ.

ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲ ಭೂತಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು. ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ ಎಂಬ ಸಾಲುಗಳನ್ನು ಹಂಚಿಕೊಂಡಿದ್ದಾರೆ.

ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಸ್ಟೇಟಸ್ ಹಾಕಿಕೊಂಡಿದ್ದಾರೆ. ಬಳಿಕ ನಟಿಯರಾದ ರಕ್ಷಿತಾ, ರಮ್ಯಾ ನಟ ಯುವರಾಜ್ ಕುಮಾರ್ ಅವರು ಪೋಸ್ಟ್ ಮಾಡಿ ಮಹಿಳೆಯರ ಸಮಸ್ಯೆ ವಿರುದ್ಧ ಧ್ವನಿ ಎತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಇದೊಂದು ಮಹತ್ವದ ಅಭಿಯಾನ ಆಗಲಿದೆ. ಇನ್ನಷ್ಟು ನಟ, ನಟಿಯರು ಈ ಅಭಿಯಾನಕ್ಕೆ ಕೈ ಜೋಡಿಸುವ ನಿರೀಕ್ಷೆ ಇದೆ.

ಮಹಿಳಾ ಆಟಗಾರರಿಗೂ ಇದೇ ಸಮಸ್ಯೆ

ಮಹಿಳೆಯರ ದೇಹವನ್ನು ಬೇರೊಂದು ದೃಷ್ಟಿಕೋನದಿಂದ ಫೋಟೋ, ವಿಡಿಯೋ ಸೆರೆ ಹಿಡಿಯುವುದು ಬಾಲಿವುಡ್‌ಗೆ ಮಾತ್ರವಲ್ಲ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ಇದೀಗ ಅದರ ವಿರುದ್ಧ ಅಭಿಯಾನ ಆರಂಭವಾಗಿದೆ. ಈ ಸಮಸ್ಯೆ ಕೇವಲ ನಟಿಯರಿಗೆ ಮಾತ್ರವಲ್ಲದೇ ಮಹಿಳಾ ಆಟಗಾರರು ಸಹ ಎದುರಿಸುತ್ತಿದ್ದಾರೆ.

ಮೈದಾನದಲ್ಲಿ ಆಟ ಆಡುವಾಗ, ನಡೆದು ಬರುವಾಗ ಇಲ್ಲವೇ ವೇದಿಕೆ ಕಾರ್ಯಕ್ರಮಗಳಲ್ಲಿ ಅವರ ದೇಹವನ್ನು ಇದೇ ರೀತಿ ಝೂಮ್ ಹಾಕಿ ಸೆರೆ ಹಿಡಿದು ಹರಿ ಬಿಡಲಾಗುತ್ತದೆ. ಸಾಕಷ್ಟು ಕಡೆ ಕ್ಯಾಮೆರಾ ಕಂಡಾಗ ಅವರು ಮುಜುಗರ, ಅವಮಾನದಂತ ಸಂಗತಿಗಳನ್ನು ಎದುರಿಸಿದ್ದಾರೆ. ಈ ಚಾಳಿ ನಿಲ್ಲಬೇಕು. ಕಲಾವಿದರಾಗಲಿ, ಆಟಗಾರರಾಗಲಿ, ಮಹಿಳೆಯರನ್ನು ಅವರ ದೇಹ, ಉಡುಪಿಗಿಂತ, ಅವರ ಸಾಧನೆ, ಪ್ರತಿಭೆ, ಅವರು ಎದುರಿಸಿದ ಸವಾಲು, ಸಾಧನೆ ಮೇಲೆ ಗುರುತಿಸುವಂತಾಗಬೇಕು ಎಂದು ಸೆಲೆಬ್ರಿಟಿಗಳು ಆಗ್ರಹಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/sandalwood-stars-launch-campaign-against-vulgar-camera-angles-and-zooming-on-actress-445799.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo