
International
-Malathesha M
ಅಮೆರಿಕ ಮತ್ತು ಇರಾನ್ ನಡುವೆ ಘೋರವಾದ ಯುದ್ಧ ಆರಂಭವಾದ ನಂತರ ತಲ್ಲಣ ಸೃಷ್ಟಿಯಾಗಿ ಭಾರಿ ದೊಡ್ಡ ಕಲಹದ ವಾತಾವರಣ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಕೊಡಲಿದೆ ಈ ಯುದ್ಧ ಎಂಬ ಭಯ ಕೂಡ ಆವರಿಸಿದೆ. ಕುವೈತ್, ಯುಎಇ, ಕತಾರ್ ಸೇರಿದಂತೆ ಅಮೆರಿಕದ ಸೇನಾ ನೆಲೆಗಳು ಇರುವ ಮಧ್ಯಪ್ರಾಚ್ಯದ ದೇಶಗಳ ಮೇಲೆ ಇರಾನ್ ಮಿಲಿಟರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ಹಾಗೂ ಅಮೆರಿಕ ಮಾಡುತ್ತಿರುವ ದಾಳಿಗೆ ಇರಾನ್ ರಾಜಧಾನಿ ತೆಹ್ರಾನ್ ಕೂಡ ಬೆಚ್ಚಿಬಿದ್ದಿದೆ. ಇಂತಹ ಸಮಯದಲ್ಲೇ ಇರಾನ್ ನೆಲದಲ್ಲಿ ದಿಢೀರ್ ಭೂಕಂಪನ ಸಂಭವಿಸಿದ್ದು, 4.3 ತೀವ್ರತೆಯ ಭೂಕಂಪನ ಬಿರುಗಾಳಿ ಎಬ್ಬಿಸಿದೆ.
ಭೂಕಂಪನ ಎಂಬುದು ಭೂಮಿಯ ಒಳಭಾಗದಲ್ಲಿ ನಡೆಯುವ ಪ್ರಕ್ರಿಯೆಯ ಸಾಮಾನ್ಯ ಪರಿಣಾಮ. ಅದರಲ್ಲೂ 4.3 ತೀವ್ರತೆಯ ಭೂಕಂಪನ ಜಗತ್ತಿನ ಹಲವು ಕಡೆ ಸಾಮಾನ್ಯ ಎನ್ನಬಹುದು. ಆದರೆ ಈ ಸಮಯದಲ್ಲಿ 4.3 ತೀವ್ರತೆಯ ಭೂಕಂಪನ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿ ಮಾಡಿದೆ, ಇದಕ್ಕೆ ಪ್ರಮುಖ ಕಾರಣ ಪರಮಾಣು ಬಾಂಬ್ ಪರೀಕ್ಷೆ. ಪರಮಾಣು ಬಾಂಬ್ ಪರೀಕ್ಷೆಗಳನ್ನು ನಡೆಸಿದಾಗ ಸಾಮಾನ್ಯ ಪರಿಸ್ಥಿತಿಯಲ್ಲಿ 4 ರಿಂದ 6 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಕಂಪನ ಸಂಭವಿಸುತ್ತದೆ. ಅದೇ ರೀತಿ ಈಗ ಇರಾನ್ ನೆಲದಲ್ಲಿ ಕೂಡ 4.3 ತೀವ್ರತೆಯ ಭೂಕಂಪನ ಸಂಭವಿಸಿರುವುದು ದೊಡ್ಡ ತಲ್ಲಣವನ್ನೇ ಎಬ್ಬಿಸಿದೆ. ಇರಾನ್ ದಿಢೀರ್ ಪರಮಾಣು ಬಾಂಬ್ ಪರೀಕ್ಷೆ ನಡೆಸಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಪರಮಾಣು ಯುದ್ಧಕ್ಕೆ ನಡೆದಿದೆಯಾ ಸಿದ್ಧತೆ?
ಇರಾನ್ ವಿರುದ್ಧ ಅಮೆರಿಕ & ಇಸ್ರೇಲ್ ಯುದ್ಧ ಶುರು ಮಾಡಿರುವುದೇ ಪರಮಾಣು ಬಾಂಬ್ ಕಾರಣಕ್ಕೆ. ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದೆ ಕಿರಿಕ್ ಮಾಡಿದ್ದ ಇರಾನ್ ವಿರುದ್ಧ, ದಿಢೀರ್ ದಾಳಿ ಶುರು ಮಾಡಿ ಯುದ್ಧ ಆರಂಭಿಸಿದೆ ಇಸ್ರೇಲ್ ಸೇನೆ. ಮೊದಲ ದಿನದ ಕಾರ್ಯಾಚರಣೆ ಸಮಯದಲ್ಲೇ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿದೆ ಇಸ್ರೇಲ್. ಇದು ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಕ್ಕೂ ಸಿಕ್ಕಾಪಟ್ಟೆ ಖುಷಿ ತರಿಸಿದೆ. ಆದರೆ ಈಗ ಇರಾನ್ ಸೇಡಿನ ಕ್ರಮ ಕೈಗೊಳ್ಳುತ್ತಿದ್ದು, ತಮ್ಮ ಶತ್ರುಗಳ ಮೇಲೆ ಭಾರಿ ಘೋರವಾಗಿ ದಾಳಿ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಮಾಣು ಬಾಂಬ್ ಪರೀಕ್ಷೆ ಕೂಡ ಇರಾನ್ ನೆಲದಲ್ಲಿ ನಡೆದಿದೆಯಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅದರಲ್ಲೂ 4.3 ತೀವ್ರತೆಯ ಭೂಕಂಪನ ಇರಾನ್‌ನಲ್ಲಿ ಸಂಭವಿಸಿದ್ದು ಭಯ ಹೆಚ್ಚಿಸಿದೆ.
ಪರಿಸ್ಥಿತಿ ಕೈಮೀರುವ ಭಯ ಶುರು
ಖಮೇನಿ ಹತ್ಯೆಯ ನಂತರ ಇರಾನ್ ಕೊತ ಕೊತ ಕುದಿಯುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡ ರೀತಿಯೇ ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಅಮೆರಿಕದ ದೊಡ್ಡ ಶತ್ರು ಇರಾನ್ ಮೊದಲ ಬಾರಿಗೆ ಭೀಕರ ಆಘಾತ ಎದುರಿಸಿದೆ. ಇಸ್ರೇಲ್ ಈ ವಿಚಾರದಲ್ಲಿ ಮುಂದೆ ನುಗ್ಗಿ ದಾಳಿ ಆರಂಭ ಮಾಡಿ ಅಮೆರಿಕ ಕೂಡ ಎಂಟ್ರಿ ಆಗುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಈಗಾಗಲೇ ಇರಾನ್ ಬಳಿ ಪರಮಾಣು ಬಾಂಬ್ ಇದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಮತ್ತೊಂದು ಕಡೆ ಇಂದು ಇರಾನ್ ನೆಲದಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆದಿರುವ ಅನುಮಾನವೂ ಮೂಡಿದೆ. ಇಷ್ಟೆಲ್ಲದರ ನಡುವೆ ಅಮೆರಿಕ ಕೂಡ ಪರಮಾಣು ಬಾಂಬ್ ಪರೀಕ್ಷೆ ಮಾಡಿದೆಯಾ? ಎಂಬ ಡೌಟ್ ಕಾಡ್ತಿದ್ದು, ಅಮೆರಿಕದಲ್ಲಿ ಕೂಡ ಭೂಕಂಪನ ಸಂಭವಿಸಿದ ಸುದ್ದಿಯು ಕೇಳಿಬಂದಿದೆ. ಒಟ್ನಲ್ಲಿ ಜಗತ್ತಿನಾದ್ಯಂತ ಇದೀಗ ದೊಡ್ಡ ಆತಂಕ ಎದುರಾಗಿದ್ದು, ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈಮೀರುವ ಭಯ ಕಾಡುತ್ತಿದೆ.
-

Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
-

ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ
-

Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ
-

Iran Vs Israel War: ಇರಾನ್ – ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ
-

ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ
-

ದುಬೈ ಏರ್ಪೋರ್ಟ್ನಲ್ಲಿ ಕನ್ನಡಿಗರು: ಡ್ರೋನ್ ಪ್ರತಾಪ್, ಪಿ.ವಿ ಸಿಂಧು, ವಿಷ್ಣು ಮಂಚು, ಸೋನಾಲ್ ಚೌಹಾಣ್ಗೆ ಸಂಕಷ್ಟ
-

ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಖಮೇನಿ ಕೊಲೆಯಾಗಿದೆ; ಅಮೆರಿಕಾ – ಇಸ್ರೇಲ್ ಗುರಿ ಸಾಧಿಸಿದೆ: ಗೋಪಾಲಕೃಷ್ಣ ಕುಂಟಿನಿ ಬರಹ
-

Ali Khamenei: ಇರಾನ್ ಸುಪ್ರೀಂ ನಾಯಕ ಖಮೇನಿ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮದ ವಿಶೇಷವೇನು
-

ಗೌರಿಬಿದನೂರಿನ ಅಲೀಪುರಕ್ಕೂ ಇರಾನ್ ನಾಯಕ ಖಮೇನಿಗೂ ಇದೆ ನಂಟು, ಹತ್ಯೆ ಖಂಡಿಸಿ ಅಘೋಷಿತ ಬಂದ್
-

ದುಬೈನಲ್ಲಿ ಬಳ್ಳಾರಿಯ 32 ಮಂದಿ ಅತಂತ್ರ: ಮರಳಿ ಕರೆತರಲು, ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಸೂಚನೆ
-

ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಬಂದ್: ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ
-

Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-earthquake-of-4-3-magnitude-creating-storm-for-this-reason-011-445811.html. xn--babytilbehr-pgb.com does not claim ownership of this content. All rights remain with the original publisher.
