
India
-Malathesha M
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ಶುರು ಮಾಡಿದ ನಂತರ ತೈಲ ಸರಬರಾಜು ವ್ಯತ್ಯಯವಾಗಿದೆ. ಅದರಲ್ಲೂ ಭಾರತ ಸೇರಿ ಯುರೋಪ್ ದೇಶಗಳಿಗೆ ಇದೀಗ ಮಧ್ಯಪ್ರಾಚ್ಯ ಭಾಗದಿಂದ ಪ್ರತಿನಿತ್ಯ ಸಪ್ಲೈ ಆಗಬೇಕಿದ್ದ ತೈಲ ನಿಂತು ಹೋಗಿದೆ. ಇದರ ಪರಿಣಾಮ, ಜಗತ್ತಿನ ಹಲವು ದೇಶಗಳಲ್ಲಿ ತೈಲದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅರಬ್ & ತೈಲ ಸಿಗುವ ದೇಶಗಳನ್ನು ಬಿಟ್ಟು ಪ್ರಪಂಚದ ಮೂಲೆ ಮೂಲೆಯಲ್ಲೂ ಕಚ್ಚಾ ತೈಲಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಹರ್ಮುಜ್ ಜಲಸಂಧಿಯ ಮೇಲೆ ಇರಾನ್ ದಾಳಿ ಮಾಡುತ್ತಿದ್ದು, ಹರ್ಮುಜ್ ಜಲಸಂಧಿ ಬಂದ್ ಆಗಿದೆ. ಇಂತಹ ಸಮಯದಲ್ಲೂ ಭಾರತ ಮಾತ್ರ ತೈಲದ ವಿಚಾರದಲ್ಲಿ ಫುಲ್ ಸೇಫ್ ಆಗಿದೆ.
ಅಂದಹಾಗೆ ಅಮೆರಿಕ ಮತ್ತು ಚೀನಾ ಇಡೀ ಜಗತ್ತಿನಲ್ಲಿ ಅತಿಹೆಚ್ಚು ತೈಲ ಬಳಸುವ ದೇಶಗಳಾಗಿದ್ದು, ಈ ಎರಡು ದೇಶಗಳನ್ನ ಬಿಟ್ಟರೆ ಭಾರತವೇ ಇಡೀ ಜಗತ್ತಿನ 3ನೇ ಅತಿದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ ಎಂಬುದು ಗಮನಾರ್ಹ ವಿಚಾರ. ಪ್ರತಿದಿನ ಭಾರತ ಸುಮಾರು 5.5 ದಶಲಕ್ಷ ಬ್ಯಾರೆಲ್ ಕಚ್ಚಾತೈಲದ ಬಳಕೆ ಮಾಡುತ್ತಿದ್ದು, ಈ ಪೈಕಿ ಬರೋಬ್ಬರಿ 1.5 ರಿಂದ 2 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವು ಇದೇ ಹರ್ಮುಜ್ ಜಲಸಂಧಿ ಮೂಲಕ ಸಪ್ಲೈ ಆಗುತ್ತಿದೆ. ಆದರೆ ದಿಢೀರ್ ಈ ಹರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣಕ್ಕೆ ತಲ್ಲಣ ಸೃಷ್ಟಿಯಾಗಿದ್ದು, ಜಗತ್ತಿನ ಹಲವು ದೇಶಗಳು ಪರದಾಡುತ್ತಿವೆ. ಆದರೆ ಈ ವಿಚಾರದಲ್ಲಿ ಭಾರತ ತುಂಬಾ ಜಾಣ ನಡೆ ಇಟ್ಟಿರುವ ಕಾರಣಕ್ಕೆ, ಯುದ್ಧ ಇದೇ ರೀತಿ ಮುಂದುವರಿದು ದಾಳಿ ಆಗುತ್ತಿದ್ದರೂ ಮುಂದಿನ 74 ದಿನಗಳ ತನಕ ಯಾವುದೇ ಸಮಸ್ಯೆ ಇಲ್ಲವಂತೆ.

ಇಸ್ರೇಲ್ ಸೇನೆಯಿಂದ ಮತ್ತಷ್ಟು ದಾಳಿ?
ಇರಾನ್ ನಡೆಸುತ್ತಿರುವ ಪ್ರತಿದಾಳಿಗೆ ಉತ್ತರ ಕೊಡಲು ಅಮೆರಿಕ ಮತ್ತು ಇಸ್ರೇಲ್ ಸಜ್ಜಾಗಿದ್ದು, ಈಗ ಮತ್ತೊಂದು ಸುತ್ತಿನಲ್ಲಿ ಘೋರವಾಗಿ ಇರಾನ್ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಸಾಗಿವೆ. ಇದೇ ಕಾರಣಕ್ಕೆ ಇರಾನ್ ಇನ್ನಷ್ಟು ಸೇಡಿನ ಕ್ರಮಗಳಿಗೆ ಅರಬ್ ದೇಶಗಳು ಅಂದ್ರೆ ಕುವೈತ್, ಯುಎಇ, ಕತಾರ್ ಸೇರಿ ಹಲವು ದೇಶಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ನಡುವೆ ಕಚ್ಚಾತೈಲ ಪೂರೈಕೆ ಕೂಡ ಇನ್ನಷ್ಟು ಕಷ್ಟವಾಗಲಿದೆ. ಆದರೆ ಭಾರತ ಮುನ್ನೆಚ್ಚರಿಕೆ ವಹಿಸಿ ತೈಲ ಸಂಗ್ರಹವನ್ನ ಮಾಡಿಕೊಂಡಿದ್ದು, ಮುಂದಿನ 74 ದಿನಗಳ ತನಕ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಮಾಹಿತಿ ನೀಡಿದ್ದಾರೆ.
-

ಇರಾನ್-ಇಸ್ರೇಲ್ ಸಂಘರ್ಷ: ಕತಾರ್ನಲ್ಲಿ LNG ಉತ್ಪಾದನೆ ಸ್ಥಗಿತ: ಗಗನಕ್ಕೇರಿದ ತೈಲ ಮತ್ತು ಅನಿಲ ಬೆಲೆ
-

ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military
-

ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿ ಮೇಲೆ ದಿಢೀರ್ ದಾಳಿ, ಹಿಂಸಾಚಾರದಲ್ಲಿ 8 ಸಾವು | Israel Military
-

ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military
-

Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
-

Iran Vs Israel War: ಇರಾನ್ – ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ
-

ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ
-

ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಹಿಂದೆ ಅಮೆರಿಕ–ಇಸ್ರೇಲ್ ಮಾಸ್ಟರ್ ಪ್ಲ್ಯಾನ್, ಯುದ್ಧತಂತ್ರದ ರಹಸ್ಯ: ಆಶಿಶ್ ಸಾರಡ್ಕ ಬರಹ
-

ದುಬೈ ಏರ್ಪೋರ್ಟ್ನಲ್ಲಿ ಕನ್ನಡಿಗರು: ಡ್ರೋನ್ ಪ್ರತಾಪ್, ಪಿ.ವಿ ಸಿಂಧು, ವಿಷ್ಣು ಮಂಚು, ಸೋನಾಲ್ ಚೌಹಾಣ್ಗೆ ಸಂಕಷ್ಟ
-

ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಬಂದ್: ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ
-

ಮಧ್ಯಪ್ರಾಚ್ಯ ಸಂಘರ್ಷ: ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
-

ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
Disclaimer: This content was automatically imported from a third-party source via RSS feed. The original source is: https://kannada.oneindia.com/news/india/operation-roaring-lion-against-iran-and-here-is-how-indian-oil-reserve-is-safe-for-next-70-days-011-445823.html. xn--babytilbehr-pgb.com does not claim ownership of this content. All rights remain with the original publisher.
