
International
-Malathesha M
ಇರಾನ್ ಮತ್ತು ಅಮೆರಿಕ ಒಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲಿ ಬಡಿದಾಡುತ್ತಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಇದೆ. ಇಸ್ರೇಲ್ ಜೊತೆಗೆ ಸೇರಿ ಅಮೆರಿಕ ಘೋರವಾಗಿ ದಾಳಿ ಮಾಡುತ್ತಾ ಇದ್ದು, ಇರಾನ್ ನೆಲವನ್ನು ಪುಡಿಪುಡಿ ಮಾಡಲು ಮುಂದೆ ನುಗ್ಗಿದೆ. ಈವರೆಗೂ ಸುಮಾರು 800 ಜನ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನೆಲದಲ್ಲಿ ಬಲಿಯಾಗಿದ್ದು, ದೊಡ್ಡ ದೊಡ್ಡ ನಾಯಕರು ಜೀವ ಬಿಟ್ಟಿರುವುದು ಚಿಂತೆ ಹೆಚ್ಚು ಮಾಡಿಸಿದೆ ಇರಾನ್ ಆಡಳಿತಕ್ಕೆ. ಆದರೆ ಇಂತಹ ಭಾರಿ ಗಂಭೀರವಾದ ಸಮಯದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಹೆಸರು ವೈರಲ್ ಆಗ್ತಿದೆ. ಯಾಕೆ ಗೊತ್ತಾ?
ಎಲ್ಲೆಲ್ಲೂ ಯುದ್ಧದ ಕಿಚ್ಚು ಹಬ್ಬುತ್ತಿದ್ದು, ತೈಲ ಪೂರೈಕೆ ಮಾಡುವ ದೇಶಗಳು ನಲುಗಿ ಹೋಗುತ್ತಿವೆ. ಮಧ್ಯಪ್ರಾಚ್ಯ ಒಂದು ರೀತಿಯಲ್ಲಿ ಕುಲುಮೆಯಲ್ಲಿ ಬೇಯುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನೇನು ಇಡೀ ಮಿಡಲ್ ಈಸ್ಟ್ ಭವಿಷ್ಯವೇ ನಾಶವಾಗಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ ಹಲವಾರು ಅರಬ್ ಪ್ರದೇಶಗಳ ಮೇಲೆ ಹಿಂದೆ ಮುಂದೆ ಯೋಚನೆ ಮಾಡದೆ ದಾಳಿ ನಡೆಸುತ್ತಿದೆ ಇರಾನ್. ಇಂತಹ ಸಮಯದಲ್ಲಿ ಇರಾನ್ ಪರಮಾಣು ಬಾಂಬ್ ಪ್ರಯೋಗ ಮಾಡುತ್ತಾ? ಎಂಬ ಪ್ರಶ್ನೆ ಮೂಡಿರುವಾಗಲೇ ದಿಢೀರ್ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೆಸರು ಟ್ರೆಂಡ್ ಹುಟ್ಟುಹಾಕುತ್ತಿದೆ.

ಕಿಮ್ ಜಾಂಗ್ ಉನ್ ಹೆಸರೇಕೆ ವೈರಲ್?
ಅಂದಹಾಗೆ ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ಆರಂಭಿಸಿದ ನಂತರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ಕ್ಷಿಪಣಿ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ್ದಾನೆ ಎಂಬ ಮಾಹಿತಿ ಇದೀಗ ಹರಿದಾಡುತ್ತಿದೆ. ಆದರೆ ಯಾವ ಕಾರಣಕ್ಕೆ ಕಿಮ್ ಹೀಗೆ ಉತ್ತರ ಕೊರಿಯಾದಲ್ಲಿರುವ ತನ್ನ ಮಿಸೈಲ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇರಾನ್‌ನ ಮೇಲೆ ಭೀಕರ ದಾಳಿ ನಡೆಯುತ್ತಿರುವ ಸಮಯದಲ್ಲೇ ಕಿಮ್ ನಡೆ ಸಾಕಷ್ಟು ಕುತೂಹಲ ಕೆರಳಿಸುತ್ತಿದ್ದು, ಮತ್ತೊಂದು ಯುದ್ಧ ಭೀತಿಯನ್ನೂ ಹುಟ್ಟುಹಾಕುತ್ತಿದೆ. ಹಾಗೇ ಉತ್ತರ ಕೊರಿಯಾ ಅಕ್ಕಪಕ್ಕ ಇರುವ ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳ ನಾಯಕರ ನಿದ್ದೆ ಹಾರಿ ಹೋಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-explore-why-north-korea-leader-kim-jong-un-name-is-on-trend-011-445889.html. xn--babytilbehr-pgb.com does not claim ownership of this content. All rights remain with the original publisher.
