Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು | Yash Fans Support Toxic Release postponed to June 4 Call It a Visionary responsible Decision

Entertainment

-Manohara M

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ನಟ ಯಶ್ ಅವರ ನಿರ್ಧಾರಕ್ಕೆ ಅಭಿಮಾನಿಗಳಿಂದ ಬೆಂಬಲವೂ ವ್ಯಕ್ತವಾಗಿದೆ. “ಇದು ಕೇವಲ ಸಿನಿಮಾ ಬಿಡುಗಡೆಯ ದಿನಾಂಕ ಬದಲಾವಣೆಯಲ್ಲ, ಬದಲಿಗೆ ಯಶ್ ಅವರ ದೂರದೃಷ್ಟಿ ಮತ್ತು ಜವಾಬ್ದಾರಿಯ ಸಂಕೇತ” ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಶ್ ಬಾಸ್ ನಿರ್ಧಾರವೇ ಫೈನಲ್

“ಸಿನಿಮಾ ಬಿಡುಗಡೆ ವಿಳಂಬವಾಗಬಹುದು, ಆದರೆ ಅದರ ಅಬ್ಬರ ಕಡಿಮೆಯಾಗುವುದಿಲ್ಲ. ಯಶ್ ಬಾಸ್ ನಿರ್ಧಾರವೇ ನಮಗೆ ಅಂತಿಮ. ನಾವು ಎಂದಿಗೂ ಅವರೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಯಶ್ ಅಭಿಮಾನಿಗಳ ಒಕ್ಕೂಟ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದು ಜಾಗತಿಕ ಪರಿಸ್ಥಿತಿಯ ಅರಿವು, ಹೊಣೆಗಾರಿಕೆ ಮತ್ತು ದೀರ್ಘಕಾಲೀನ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ತನ್ನ ಸಿನಿ ಪ್ರಯಾಣದ ಎಲ್ಲಾ ಹಂತಗಳಲ್ಲೂ ಯೋಚಿಸಿ ನಿರ್ಧಾರ ತೆಗೆದುಕೊಂಡಿರುವ ಯಶ್, ಈ ಬಾರಿ ಕೂಡ ಅದೇ ನಾಯಕತ್ವದ ಗುಣವನ್ನು ತೋರಿಸಿದ್ದಾರೆ ಎಂದಿದ್ದಾರೆ.‌

Yash Fans

ಇಡೀ ಜಗತ್ತು ಯುದ್ಧ ಮತ್ತು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿರುವಾಗ, ಅಂತರಾಷ್ಟ್ರೀಯ ಮಟ್ಟದ ಸಿನಿಮಾವೊಂದನ್ನು ಬಿಡುಗಡೆ ಮಾಡಲು ಇದು ಸೂಕ್ತ ಸಮಯವಲ್ಲ ಎಂಬುದನ್ನು ಯಶ್ ಮನಗಂಡಿದ್ದಾರೆ. ಅವರ ಈ ಸಾಮಾಜಿಕ ಪ್ರಜ್ಞೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. “ಟಾಕ್ಸಿಕ್” ಅಂತಹ ಬೃಹತ್ ಚಿತ್ರಕ್ಕೆ ವಿಶ್ವದಾದ್ಯಂತ ಪ್ರೇಕ್ಷಕರ ಪೂರ್ಣ ಗಮನ ಬೇಕು. ಅವಸರದಲ್ಲಿ ಬಿಡುಗಡೆ ಮಾಡುವ ಬದಲು, ಸರಿಯಾದ ವಾತಾವರಣಕ್ಕಾಗಿ ಕಾಯುವ ಯಶ್ ಅವರ ನಿರ್ಧಾರವು ಅವರ ನಾಯಕತ್ವದ ಗುಣವನ್ನು ಎತ್ತಿ ತೋರಿಸುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಶ್‌ ಅವರೊಂದಿಗೆ ನಾವು ನಿಲ್ತೀವಿ

ಯಶ್ ಬಾಸ್ ಅವರ ಯಾವುದೇ ನಿರ್ಧಾರದ ಹಿಂದೆ ಒಂದು ಬಲವಾದ ಕಾರಣವಿರುತ್ತದೆ. ಅವರ ಜಡ್ಜ್‌ಮೆಂಟ್ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಸಿನಿಮಾ ಯಾವಾಗ ಬಿಡುಗಡೆಯಾದರೂ ನಮ್ಮ ಬೆಂಬಲ ಸದಾ ಅವರ ಜೊತೆಗಿರುತ್ತದೆ ಎಂದು ಅಭಿಮಾನಿ ಸಂಘಟನೆಗಳು ಒಕ್ಕೊರಲಿನಿಂದ ಹೇಳಿವೆ. ಪರಿಸ್ಥಿತಿ ಏನೇ ಇರಲಿ, ಸಿನಿಮಾ ಬಿಡುಗಡೆ ವಿಳಂಬವಾದರೂ ನಾವು ಯಶ್ ಅವರ ಬೆನ್ನಿಗೆ ಭದ್ರವಾಗಿ ನಿಲ್ಲುತ್ತೇವೆ. ಸರಿಯಾದ ಸಮಯ ಬಂದಾಗ ‘ಟಾಕ್ಸಿಕ್’ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಾಗಿ ನಾವು ಸದಾ ಅವರ ನಿರ್ಧಾರಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲೂ, ಯಾವುದೇ ತೀರ್ಮಾನವಾದರೂ ನಮ್ಮ ಬೆಂಬಲ ಅಚಲ. ಸರಿಯಾದ ಸಮಯ ಬಂದಾಗ ಟಾಕ್ಸಿಕ್‌ ಬಂದೇ ಬರುತ್ತದೆ. ಅಲ್ಲಿವರೆಗೆ ನಾವು ಸದಾ ಯಶ್ ಬಾಸ್ ಜೊತೆ ಒಂದಾಗಿ ನಿಂತಿದ್ದೇವೆ ಎಂದಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-fans-support-toxic-release-postponed-to-june-4-call-it-a-visionary-responsible-decision-011-445911.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo