
India
oi-Hitesh Y
Petrol – Diesel: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು. ಇರಾನ್ನಲ್ಲಿ ಮಾರಣಹೋಮವೇ ನಡೆದಿದೆ. ಇರಾನ್ನಲ್ಲಿ ಮಾತ್ರವಲ್ಲದೇ ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲೂ ಸೈನಿಕರು, ಜನ ಸಾವನ್ನಪ್ಪಿದ್ದಾರೆ. ಯುದ್ಧದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಸಂಗ್ರಹ ಹಾಗೂ ಮಿತಿಯ ಬಗ್ಗೆ ಭಾರತೀಯರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧದಿಂದ ಭಾರತಕ್ಕೆ ಕಚ್ಚಾ ತೈಲ ಸರಬರಾಜು ಆಗುವುದು ನಿಂತಿದ್ದು, ಇದರಿಂದ ಭಾರತದಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿ ಆಗುವ ಆತಂಕ ಶುರುವಾಗಿದೆ. ಈಗ ಭಾರತದ ಬಳಿ ಎಷ್ಟು ದಿನಗಳಿಗೆ ಆಗುವ ಕಚ್ಚಾ ತೈಲವಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಜನ ಪೆಟ್ರೋಲ್ ಬಂಕ್ನ ಮುಂದೆ ನಿಲ್ಲುತ್ತಿರುವುದೇಕೆ ಎನ್ನುವ ವಿವರ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಸನ್ನಿವೇಶದಿಂದಾಗಿ ಭಾರತದಲ್ಲೂ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಖಾಲಿ ಆಗುವ ಆತಂಕ ಶುರುವಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟ ಮಾಹಿತಿಯನ್ನು ಹಂಚಿಕೊಂಡಿದೆ. ಅಲ್ಲದೆ ತುರ್ತು ಸಂದರ್ಭ ಎದುರಾದರೆ ಭಾರತಕ್ಕೆ ಕಚ್ಚಾ ತೈಲವನ್ನು ಸರಬರಾಜು ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ರಷ್ಯಾ ಈಗಾಗಲೇ ಹೇಳಿದೆ. ಈ ನಡುವೆ ಭಾರತದ ವಿವಿಧ ನಗರಗಳಲ್ಲಿ ಜನ ಪೆಟ್ರೋಲ್ ಬಂಕ್ಗಳ ಮುಂದೆ ನಿಲ್ಲುವ ಸಂಖ್ಯೆ ಹೆಚ್ಚಾಗಿದೆ. ಇಂಧನ ಕೊರತೆಯ ಸಾಧ್ಯತೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹೆಚ್ಚಾಗಿದ್ದು, ಹೈದರಾಬಾದ್ನಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ ಗ್ರಾಹಕರ ಸಂಖ್ಯೆಯು ಭಾರೀ ಹೆಚ್ಚಳವಾಗಿದೆ.

ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಪೆಟ್ರೋಲ್ ಸರಬರಾಜು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರೀ ಹೆಚ್ಚಳವಾಗಲಿದೆ ಎನ್ನುವ ಸಂದೇಶಗಳನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಜನರು ಭೀತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡುತ್ತಿದ್ದಾರೆ. ಕಚ್ಚಾ ತೈಲ ಕೊರತೆಯ ಭಯ ಮತ್ತು ಪೆಟ್ರೋಲ್ ಬಂಕ್ಗಳು ಮುಚ್ಚಬಹುದು ಎನ್ನುವ ವದಂತಿಗಳಿಂದಾಗಿ ಭಾರತದ ಹಲವು ನಗರಗಳಲ್ಲಿನ ಪೆಟ್ರೋಲ್ ಬಂಕ್ಗಳಲ್ಲಿ ಜನದಟ್ಟಣೆ ಹೆಚ್ಚಳವಾಗಿದೆ. ಅಲ್ಲದೆ ಜನ ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವುದು ಕಂಡುಬರುತ್ತಿದೆ.
ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಾಗುವ ಆತಂಕ
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ಕನಿಷ್ಠ ನಾಲ್ಕು ವಾರಗಳ ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿರುವುದು ಸಹ ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂಧನ ಬೆಲೆಗಳು ಲೀಟರ್ಗೆ 500 ರೂಪಾಯಿ ಆಗಬಹುದು ಎನ್ನುವ ಸಂದೇಶಗಳನ್ನು ಕೆಲವರು ಹಂಚಿಕೊಳ್ಳುತ್ತಿರುವುದರಿಂದಾಗಿ ಜನ ಪೆಟ್ರೋಲ್ ಬಂಕ್ನ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು ಹೆಚ್ಚಾಗಿದೆ.
ಹೈದರಾಬಾದ್ ನಗರದಲ್ಲಿ ಸಂಕಷ್ಟ
ಇನ್ನು ಹೈದರಾಬಾದ್ನಲ್ಲಿ ಜನ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಾಗಲಿದೆ. ಕಚ್ಚಾ ತೈಲ ಖಾಲಿ ಆಗಲಿದೆ ಎನ್ನುವ ವದಂತಿಗಳನ್ನು ನಂಬಿ ಪೆಟ್ರೋಲ್ ಪಂಪ್ಗಳಿಗೆ ಬರುತ್ತಿದ್ದಾರೆ. ಹೈದರಾಬಾದ್ ನಗರದಲ್ಲಿ ಈ ಭೀತಿ ಹೆಚ್ಚಾಗಿದ್ದು, ಪೆಟ್ರೋಲ್ ಪಂಪ್ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿ ಸಮಸ್ಯೆ ಆಗಿರುವ ವಿಡಿಯೋಗಳು ವೈರಲ್ ಆಗಿವೆ. ವಾಹನ ಚಾಲಕರ ಬೃಹತ್ ಸರತಿ ಸಾಲುಗಳು ನಿಲ್ಲುತ್ತಿದ್ದು, ಇನ್ನೂ ಕೆಲವರು ಬಾಟಲಿಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಳ್ಳುವುದಕ್ಕೆ ಸರ್ಕಸ್ ಮಾಡುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿಲ್ಲ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಮತ್ತು ಟೆಹ್ರಾನ್ನ ಪ್ರತೀಕಾರದ ಮುಷ್ಕರಗಳ ನಂತರ ಅಂತರರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ 9ದಷ್ಟು ಏರಿಕೆಯಾಗಿವೆ. ಆದರೆ ಭಾರತದಲ್ಲಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ.
ಭಾರತವು ತನ್ನ ಕಚ್ಚಾ ತೈಲದ ಅಗತ್ಯದ 88 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ. ಹೆಚ್ಚಿನ ಜಾಗತಿಕ ಬೆಲೆಗಳು ದೊಡ್ಡ ಆಮದು ಬಿಲ್ ಮತ್ತು ಸಂಭಾವ್ಯ ಹಣದುಬ್ಬರ ಒತ್ತಡಗಳಿಗೆ ಕಾರಣವಾಗುತ್ತವೆ.
ಆದಾಗ್ಯೂ, ಪೆಟ್ರೋಲ್ ಮತ್ತು ಡೀಸೆಲ್ನ ಇಂಧನ ಬೆಲೆಗಳನ್ನು ತಕ್ಷಣವೇ ಹೆಚ್ಚಿಸುವ ನಿರೀಕ್ಷೆಯಿಲ್ಲ, ಏಕೆಂದರೆ ಸರ್ಕಾರವು ಅಂತರರಾಷ್ಟ್ರೀಯ ಬೆಲೆಗಳು ಕಡಿಮೆಯಾದಾಗ ಕಂಪನಿಗಳು ಲಾಭ ಗಳಿಸಲು ಅವಕಾಶ ನೀಡುವ ಮತ್ತು ದರಗಳು ಏರಿಕೆಯಾದಾಗ ಗ್ರಾಹಕರಿಗೆ ತೊಂದರೆ ಆಗದಂತಹ ಸಮತೋಲಿತ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಲಾಗಿದೆ.
ಏಪ್ರಿಲ್ 2022 ರಿಂದ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ನಂತಹ ಇಂಧನ ಚಿಲ್ಲರೆ ವ್ಯಾಪಾರಿಗಳು ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ನಷ್ಟವನ್ನು ಭರಿಸುತ್ತಾರೆ ಮತ್ತು ದರಗಳು ಕಡಿಮೆಯಾದಾಗ ಲಾಭ ಗಳಿಸುತ್ತಾರೆ.
ಯುಕೆ ಪೆಟ್ರೋಲ್ ಬಂಕ್ಗಳಲ್ಲಿ ದೀರ್ಘ ಸರತಿ ಸಾಲು
ಇನ್ನು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಉಲ್ಬಣಗೊಂಡ ನಂತರ ಪೆಟ್ರೋಲ್ ಕೊರತೆಯ ಭೀತಿ ಹೆಚ್ಚುತ್ತಿರುವ ಕಾರಣ ಯುಕೆಯಾದ್ಯಂತ ಪೆಟ್ರೋಲ್ ಬಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಕಾರುಗಳ ಸಂಖ್ಯೆ ಹೆಚ್ಚಳವಾಗಿದೆ. ಲಂಡನ್, ಮ್ಯಾಂಚೆಸ್ಟರ್ ಮತ್ತು ಲಿವರ್ಪೂಲ್ನಂತಹ ಸ್ಥಳಗಳಲ್ಲಿ ವಾಹನ ಸವಾರರು ಪೆಟ್ರೋಲ್ – ಡೀಸೆಲ್ ತುಂಬಿಸಿಕೊಳ್ಳಲು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ವರದಿ ಆಗಿದೆ.
ಭಾರತದಲ್ಲಿ ಕಚ್ಚಾ ತೈಲ ಕೊರತೆ ಆತಂಕ: ಕೇಂದ್ರ ಸರ್ಕಾರ ಹೇಳಿದ್ದೇನು
ಮಧ್ಯಪ್ರಾಚ್ಯಾದಲ್ಲಿ ಯುದ್ಧವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಆದರೆ ಸದ್ಯಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ. ಮುಂದಿನ 25 ದಿನಗಳಿಗೆ ಅವಶ್ಯವಿರುವ ಕಚ್ಚಾ ತೈಲ (ಪೆಟ್ರೋಲ್ – ಡೀಸೆಲ್) ಭಾರತದ ಬಳಿ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದಾಗ್ಯೂ ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಲಾಗಿದೆ.
खबर आई नहीं कि कल से रेट बढ़ सकते हैं
और पूरे शहर का चक्का पेट्रोल पंप की तरफ मुड़ गया। ऐसा लगता है जैसे पूरे शहर की गाड़ियां आज ही प्यासी मर रही हैं pic.twitter.com/g5NOubbM4B— Manzar (@manz39754) March 4, 2026
ಪೆಟ್ರೋಲಿಯಂ ಸಚಿವಾಲಯವು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಅಲ್ಲದೆ ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
-

ಮಾರ್ಚ್ 3ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
-

ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
-

Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ
-

ಭಾರತದ ಸನಿಹವೇ ಮುಳುಗಿತು ಇರಾನ್ ಯುದ್ಧನೌಕೆ: ವಿಶಾಖಪಟ್ಟಣದಿಂದ ಹಿಂದಿರುಗುತ್ತಿದ್ದ ಹಡಗಿಗೆ ಅಮೆರಿಕ ಬಾಂಬ್
-

ಇರಾನ್ನಲ್ಲಿ 1000 ದಾಟಿದ ಸಾವು: ಯುಎಸ್- ಇಸ್ರೇಲ್ ತೀವ್ರ ವಾಯುದಾಳಿಗೆ ಸಜ್ಜು, 10 ಪ್ರಮುಖಾಂಶಗಳು
-

Gulf: ನಾವಿಲ್ಲಿ ಸುರಕ್ಷಿತ: ಕತಾರ್ ಸರ್ಕಾರದ ನೆರವು ನೆನೆದ ಕನ್ನಡಿಗರು
-

Khamenei Funeral: ಮಾ.4ರಂದು ಆಯತೊಲ್ಲಾ ಅಲಿ ಖಮೇನಿಗೆ ಅಂತಿಮ ವಿದಾಯ, ಅಂತ್ಯಕ್ರಿಯೆ ಅಪ್ಡೇಟ್
-

Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: “ಟಾಕ್ಸಿಕ್” ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ
-

PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು?
-

Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ ‘ಕ್ಲಾಸ್ ಟಾಪರ್’ ಈಗ ರ್ಯಾಪಿಡೋ ರೈಡರ್
-

Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ?
-

ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ
-

Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್
-

Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು
-

Property: ಖಾತಾ ಎಂದರೇನು, ಇ, ಬಿ – ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/middle-east-war-fuel-panic-india-people-rush-buy-petrol-diesel-govt-assures-25-days-crude-oil-stock-445995.html. xn--babytilbehr-pgb.com does not claim ownership of this content. All rights remain with the original publisher.
