
Sports
oi-Madhusudhan KR
Sanju Samson: ಟಿ20 ವಿಶ್ವಕಪ್ 2026 ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಈ ನಿರ್ಣಾಯಕ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 89 ರನ್ ಸಿಡಿಸಿ ಗಮನ ಸೆಳೆದರು. ಸಂಜು 16 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ಕೈಚೆಲ್ಲಿದ ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿತು. ಇದೇ ಅವಕಾಶವನ್ನು ಸಂಜು ಉತ್ತಮವಾಗಿ ಬಳಸಿಕೊಂಡು ಅರ್ಧಶತಕ ಬಾರಿಸುವ ಜೊತೆಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಸಂಜು ಕೇವಲ 42 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ರ್ಗಳೊಂದಿಗೆ 89 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಈ ಹಿಂದೆ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸ್ ಸಿಡಿಸಿ ಅಜೇಯ 89 ರನ್ ಕಲೆಹಾಕಿದ್ದರು.

ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರು
100* – ಫಿನ್ ಅಲೆನ್, ನ್ಯೂಜಿಲೆಂಡ್ Vs ದಕ್ಷಿಣ ಆಫ್ರಿಕಾ (2026)
96* – ತಿಲಕರತ್ನೆ ದಿಲ್ಶ್ಯಾನ್, ಶ್ರೀಲಂಕಾ Vs ವೆಸ್ಟ್ ಇಂಡೀಸ್ (2009)
89* – ವಿರಾಟ್ ಕೊಹ್ಲಿ ಭಾರತ Vs ವೆಸ್ಟ್ ಇಂಡೀಸ್ (2016)
89* – ಸಂಜು ಸ್ಯಾಮ್ಸನ್ ಭಾರತ Vs ಇಂಗ್ಲೆಂಡ್ (2026)
86*- ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) Vs ಭಾರತ (2022)
ಟೀ ಇಂಡಿಯಾ ಪರ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ 89, ಇಶಾನ್ ಕಿಶನ್ 39, ಶಿವಂ ದುಬೆ 43, ಹಾರ್ದಿಕ್ ಪಾಂಡ್ಯ 27, ತಿಲಕ್ ವರ್ಮಾ 21 ರನ್ಗಳನ್ನು ಸಿಡಿಸಿದರು. ಈ ಮೂಲಕ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ಗಳನ್ನು ಕಲೆಹಾಕಿ ಇಂಗ್ಲೇಂಡ್ಗೆ ಬೃಹತ್ ಮೊತ್ತದ ಗುರಿ ನೀಡಿದೆ.
ಟಿ20 ವಿಶ್ವಕಪ್ 2026ರಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಪ್ರದರ್ಶನ ಟೀಂ ಇಂಡಿಯಾ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಭಾರತ ತಂಡದಲ್ಲಿ ಎರಡನೇ ಆರಂಭಿಕ ಆಟಗಾರನಾಗಿ ಆಯ್ಕೆಯಾದ ಸಂಜುಗೆ ಲೀಗ್ ಹಂತದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೀಡಾದ ಹಿನ್ನೆಲೆ ಲೀಗ್ ಹಂತದಲ್ಲಿ ಒಂದೇ ಪಂದ್ಯದಲ್ಲಿ ಕಣಕ್ಕಿಳಿದ ಅವರು ನಂತರ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವಕಾಶ ಪಡೆದರು. ಆ ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತಕ್ಕೆ ಸಂಜು ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಅಜೇಯ 97 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಸೆಮಿಫೈನಲ್ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದರು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮಾಡಿದ ಅವರು ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ಗಳ ನೆರವಿನಿಂದ 89 ರನ್ ಗಳಿಸಿದರು. ವಿಶೇಷ ಅಂದರೆ, ಈ ಇನ್ನಿಂಗ್ಸ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳಿಂದಲೇ ಅವರು 74 ರನ್ ಕಲೆಹಾಕಿದರು. ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಗಮನ ಸೆಳೆದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-sanju-samson-s-explosive-89-vs-england-equals-virat-kohli-s-semi-final-record-446067.html. xn--babytilbehr-pgb.com does not claim ownership of this content. All rights remain with the original publisher.
