ನೇಪಾಳ ಚುನಾವಣೆ ಫಲಿತಾಂಶ ಹಿನ್ನೆಲೆ ಭಾರತದ ನೆರೆ ದೇಶದಲ್ಲಿ ಭಾರಿ ಕಟ್ಟೆಚ್ಚರ | Nepal Election 2026 | Nepal Election 2026 Results And Explore Here The Complete Details About The Nepal Election Results

International

-Malathesha M

ಭಾರತದ ನೆರೆಯ ದೇಶ ನೇಪಾಳ ಭಾರಿ ದೊಡ್ಡ ಕಂಟಕಕ್ಕೆ ಸಿಲುಕಿ ನರಳಿ ಹೋಗಿದ್ದು, ಅದರಲ್ಲೂ ಈ ದೇಶದಲ್ಲಿ ಎದುರಾಗಿದ್ದ ಜೆನ್-ಜಿ (Gen-Z) ಪ್ರತಿಭಟನೆಯು ಸರ್ಕಾರವನ್ನೇ ಉಡಾಯಿಸಿತ್ತು. ಕೊನೆಗೂ ನೇಪಾಳದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು, ಹೊಸ ಸರ್ಕಾರ ಮತ್ತು ಉತ್ತಮ ರಾಜಕಾರಣಿಗಳು ಅಧಿಕಾರಕ್ಕೆ ಬರಲಿ ಎಂದು ಯುವಕ ಹಾಗೂ ಯುವತಿಯರು ಆಗ್ರಹ ಮಾಡಿದ್ದರು. ಇದೀಗ ಅವರ ಇಚ್ಛೆಗೆ ಅನುಸಾರವಾಗಿ ಚುನಾವಣೆ ನಡೆದಿದ್ದು, ಮತ ಎಣಿಕೆ ಕೂಡ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ನೆಪಾಳ ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದ್ದು, ಕುತೂಹಲ ಕೂಡ ತೀವ್ರವಾಗಿದೆ. ಚುನಾವಣೆ ಫಲಿತಾಂಶ ಹಿನ್ನೆಲೆ ನೇಪಾಳದಲ್ಲಿ ಮತ್ತೆ ಪ್ರತಿಭಟನೆ ಹಾಗೂ ಹೋರಾಟ ಭುಗಿಲೇಳದ ರೀತಿ ಮುನ್ನೆಚ್ಚರಿಕೆ ವಹಿಸಿ ಭದ್ರತೆ ಹೆಚ್ಚಿಸಲಾಗಿದೆ.

ನೇಪಾಳ ನೆಲದಲ್ಲಿ ರಾಜಕೀಯ ನಾಯಕರು ಭ್ರಷ್ಟಾಚಾರ ಮಾಡುತ್ತಾ, ಅಭಿವೃದ್ಧಿ ಮಾಡದೇ ತಮ್ಮದೇ ಲೋಕದಲ್ಲಿ ಇದ್ದಾರೆ ಎಂದು 2025ರ ಅಂತ್ಯದಲ್ಲಿ ದೊಡ್ಡ ದೊಡ್ಡ ಹೋರಾಟಗಳು ನಡೆದಿದ್ದವು. ಈ ಬೆಳವಣಿಗೆ ನಂತರ ಹಲವು ರಾಜಕೀಯ ನಾಯಕರು ದೇಶಬಿಟ್ಟು ಓಡಿ ಹೋಗಲು ಪ್ರಯತ್ನಿಸಿ, ಕೊನೆಗೆ ಪ್ರತಿಭಟನಾಕಾರರ ಕೈಯಲ್ಲಿ ಒದೆ ಕೂಡ ತಿಂದಿದ್ದರು. ಈ ಎಲ್ಲಾ ಘಟನೆಗಳ ನಂತರ ಇದೀಗ ಭಾರತದ ನೆರೆ ದೇಶ ನೇಪಾಳದಲ್ಲಿ ಸರ್ಕಾರ ಬಿದ್ದು ಹೋಗಿ, ಚುನಾವಣೆ ನಡೆಸಲಾಗಿತ್ತು. ನೇಪಾಳ ದೇಶದ ಒಟ್ಟು 275 ಸಂಸತ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 3,406 ಅಭ್ಯರ್ಥಿಗಳು ಕಣದಲ್ಲಿದ್ದರು. ಇದೀಗ ಅವರ ಭವಿಷ್ಯ ನಿರ್ಧಾರ ಆಗಲಿದ್ದು, ನೇಪಾಳ ಆಳುವ ರಾಜಕೀಯ ನಾಯಕರ ಯಾರು? ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ನಿರ್ಧಾರ ಆಗಲಿದೆ. ಹೀಗಾಗಿ ಇಡೀ ಜಗತ್ತಿನ ಕಣ್ಣು ಕಣಿವೆ ದೇಶದ ಮೇಲೆಯೇ ನೆಟ್ಟಿದೆ.

Nepal Election 2026

ಮಾಜಿ ರ‍್ಯಾಪರ್ ಪಕ್ಷಕ್ಕೆ ಬಹುಮತ?

ನೇಪಾಳದಲ್ಲಿ ಇದೀಗ ಹೊಸ ತಲೆಮಾರಿನ ಯುವಕರ ಮತ ಸೆಳೆಯುವಲ್ಲಿ ಮಾಜಿ ರ‍್ಯಾಪರ್ ಬಾಲೇಂದ್ರ ಶಾ ಕಟ್ಟಿರುವ ಹೊಸ ಪಕ್ಷ ಯಶಸ್ವಿಯಾಗುತ್ತಿದೆ. ನೇಪಾಳ ಪಾರ್ಲಿಮೆಂಟ್ ಎಲೆಕ್ಷನ್ ಅಖಾಡದಲ್ಲಿ ಈಗ ರಾಷ್ಟ್ರೀಯ ಸ್ವತಂತ್ರ ಪಕ್ಷ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಆರಂಭಿಕ ಮತ ಎಣಿಕೆಯ ಟ್ರೆಂಡ್‌ನ ಪ್ರಕಾರ ನೇಪಾಳ ದೇಶಾದ್ಯಂತ 94 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ದೇಶಾದ್ಯಂತ ಒಟ್ಟು 67 ರಾಜಕೀಯ ಪಕ್ಷಗಳು 165 ಸ್ಥಾನಗಳಿಗೆ ಸ್ಪರ್ಧಿಸಿವೆ. ಬಾಲೆನ್ ಶಾ ನೇತೃತ್ವದ ಆರ್‌ಎಸ್‌ಪಿ ಕಠ್ಮಂಡು ಕಣಿವೆ ಕ್ಷೇತ್ರಗಳ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಹೊಸ ಸರ್ಕಾರ ರಚನೆಗೆ ಈಗ ಸರ್ಕಸ್ ಶುರುವಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/nepal-election-2026-results-and-explore-here-the-complete-details-about-the-nepal-election-results-011-446109.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo