
Entertainment
oi-Manohara M
ನಟ ರಾಕಿಂಗ್ ಸ್ಟಾರ್ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಯಶ್ ಅವರ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್ ಸಿನಿಮಾದಿಂದಲೂ ಯಶ್ ಗಡ್ಡ ಬೆಳೆಸುವ ಮೂಲಕ ಟ್ರೆಂಡ್ ಹುಟ್ಟುಹಾಕಿದ್ದರು. ನಂತರ ಟಾಕ್ಸಿಕ್ ಸಿನಿಮಾ ಪಾತ್ರಕ್ಕೆ ಕ್ಲೀನ್ ಶೇವ್ ಮಾಡಿ ಶಾಕ್ ಕೂಡ ಕೊಟ್ಟಿದ್ದರು.
ಇದಾದ ನಂತರ ಯಶ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಪ್ರಸ್ತುತ ಅವರ ಲುಕ್ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಇನ್ನು ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಹಿನ್ನೆಲೆ ದಂಪತಿ ಒಟ್ಟಿಗೆ ಏರ್ಪೋರ್ಟ್ನಲ್ಲಿ ಕ್ಯಾಮೆರಾಗಳ ಕಣ್ಣಿಗೆ ಸೆರೆಸಿಕ್ಕಿದ್ದಾರೆ. ಇದರಲ್ಲಿ ಯಶ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಯಂಗ್ ಲುಕ್ನಲ್ಲಿ ರಾಕಿಭಾಯ್
“ಟಾಕ್ಸಿಕ್” ಚಿತ್ರಕ್ಕಾಗಿ ಯಶ್ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ ಎಂಬ ಮಾತುಗಳ ನಡುವೆಯೇ, ವಿಮಾನ ನಿಲ್ದಾಣದಲ್ಲಿ ಅವರು ಸಣ್ಣಗೆ ಕತ್ತರಿಸಿದ ಗಡ್ಡ ಮತ್ತು ಸ್ಟೈಲಿಶ್ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟನ ಹೊಸ ಲುಕ್ ಕಂಡ ಅಭಿಮಾನಿಗಳು “ಬಾಸ್ 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅವರ ಹೊಸ ಗೆಟಪ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.
ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ವಿಶೇಷ ಪ್ರವಾಸವನ್ನು ಮುಗಿಸಿ ರಾಕಿಂಗ್ ಸ್ಟಾರ್ ಯಶ್ ಇಂದು ಬೆಂಗಳೂರಿಗೆ ಮರಳಿದ್ದಾರೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಈ ಜೋಡಿಯನ್ನು ಕಂಡ ತಕ್ಷಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಫೋಟೋ ಮತ್ತು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ನೂಕುನುಗ್ಗಲಿನ ನಡುವೆಯೂ ಯಶ್ ಅವರು ಅತ್ಯಂತ ತಾಳ್ಮೆಯಿಂದ ಕಿರುನಗೆ ಬೀರುತ್ತಾ ಎಲ್ಲರಿಗೂ ಕೈಬೀಸಿದ್ದಾರೆ.
#Yash ‘s new loook💥💥🔥🔥#ToxicTheMovie
— ಸಿನಿಮಾ ವಂಶ (@Cinema_Vamsha) March 6, 2026
‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಿಕೆಯಾದ ನಂತರ ಯಶ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಆಗಮಿಸಿದ ಯಶ್, ಕಾರಿನಿಂದ ಇಳಿಯುತ್ತಿದ್ದಂತೆ ಅಲ್ಲಿದ್ದ ಮಾಧ್ಯಮದವರಿಗೆ ನಗುಮುಖದಿಂದಲೇ ಪೋಸ್ ನೀಡಿದರು. ವಿಮಾನ ನಿಲ್ದಾಣದಿಂದ ಹೊರಬರುವಾಗ ಯಶ್ ಮತ್ತು ರಾಧಿಕಾ ಪರಸ್ಪರ ತೋರಿದ ಅನ್ಯೋನ್ಯತೆ ಮತ್ತು ಕಾಳಜಿಯು ನೆರೆದಿದ್ದವರ ಗಮನ ಸೆಳೆಯಿತು. ವಿಮಾನ ನಿಲ್ದಾಣದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ ಯಶ್ ಅವರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಿನಿಮಾದ ರಿಲೀಸ್ ಡೇಟ್ ಬದಲಾದರೂ, ರಾಕಿ ಭಾಯ್ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಟಾಕ್ಸಿಕ್ ಬಿಡುಗಡೆ ಮುಂದೂಡಿಕೆ
ಯಶ್ ಅವರ ಆಕ್ಷನ್-ಥ್ರಿಲ್ಲರ್ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಈ ಮೊದಲು ಮಾರ್ಚ್ ತಿಂಗಳಿನಲ್ಲಿ ತೆರೆಗೆ ಬರಬೇಕಿದ್ದ ಈ ಚಿತ್ರವು ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಚಿತ್ರದೊಂದಿಗೆ ಬಾಕ್ಸ್ ಆಫೀಸ್ನಲ್ಲಿ ನೇರ ಹಣಾಹಣಿ ನಡೆಸಬೇಕಿತ್ತು. ಆದರೆ, ಈಗ ಚಿತ್ರದ ಬಿಡುಗಡೆ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಈ ಬದಲಾವಣೆಯು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕೇವಲ ಯಶ್ ಅಷ್ಟೇ ಅಲ್ಲದೆ, ದೊಡ್ಡ ತಾರಾಗಣವೇ ಇದೆ. ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ತಾರಾ ಸುತಾರಿಯಾ ಅಂತಹ ಘಟಾನುಘಟಿ ನಟಿಯರು ಈ ಆಕ್ಷನ್ ಥ್ರಿಲ್ಲರ್ನಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಆಕರ್ಷಣೆಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-appears-in-new-look-with-wife-radhika-pandit-on-her-birthday-at-the-airport-fans-go-crazy-446241.html. xn--babytilbehr-pgb.com does not claim ownership of this content. All rights remain with the original publisher.
