ಸಿದ್ದರಾಮಯ್ಯ ಬಜೆಟ್; ಹಣಕಾಸು ಶಿಸ್ತು, AI ಉತ್ತೇಜನ ಸ್ವಾಗತಾರ್ಹ:ರಂಗಸ್ವಾಮಿ ಮೂಕನಹಳ್ಳಿ | Karnataka Budget 2026: Rangaswamy Mookanahalli Calls Siddaramaiah’s Budget Overall Satisfactory

Karnataka

oi-Shiddalingesh S

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಕರ್ನಾಟಕ ಬಜೆಟ್ 2026 ಕುರಿತು ಸಾರ್ವಜನಿಕ ವಲಯದಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಅನವಶ್ಯಕ ಅಂಶಗಳ ಬಗ್ಗೆ ಟೀಕೆಗಳಿದ್ದರೂ, ಒಟ್ಟಾರೆ ಇದು ತೃಪ್ತಿದಾಯಕ ಬಜೆಟ್ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಹೇಳಿದ್ದಾರೆ. ಹಣಕಾಸು ಶಿಸ್ತನ್ನು ಕಾಪಾಡುವುದು, AI-ರೋಬೋಟಿಕ್ಸ್ ಕ್ಷೇತ್ರಕ್ಕೆ ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವುದನ್ನು ಅವರು ಸ್ವಾಗತಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಜೆಟ್ ಕುರಿತು ಬಹಳಷ್ಟು ಅನಿಸಿಕೆಗಳನ್ನು ನೋಡಿದೆ. ಒಂದಷ್ಟು ಅನವಶ್ಯಕ ಅಂಶಗಳು ಇರುವುದು ಸತ್ಯ. ಆದರೆ ಓವರ್ ಆಲ್ ತೃಪ್ತಿದಾಯಕ ಬಜೆಟ್. ಫಿಸ್ಕಲ್ ಡೆಫಿಸಿಟ್ 2.95ರಲ್ಲಿ ನಿಲ್ಲಿಸಿರುವುದು ,AI ಮತ್ತು ರೋಬಟಿಕ್ಸ್ ಗೆ ಹಣ ತೆಗೆದಿರಿಸಿರುವುದು. ಡೋಮೆಸ್ಟಿಕ್ ಏರ್ಪೋರ್ಟ್ ಗಳಿಗೆ ಹಣ ಮೀಸಲು ಇಟ್ಟಿರುವುದು. ಬೆಂಗಳೂರು ರಿಂಗ್ ರೋಡ್ ವಿಸ್ತರಣೆ ಇತ್ಯಾದಿ.

Karnataka Budget 2026

16ಕ್ಕಿಂತ ಕೆಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸದಂತೆ ಕಡಿವಾಣ ಹಾಕುವ ಬಗ್ಗೆ ಕೂಡ ಉಲ್ಲೇಖವಿದೆ. ಇದು ಜಾರಿಗೆ ಬಂದರೆ ಹೀಗೆ ಮಾಡಿದ ಭಾರತದ ಪ್ರಥಮ ರಾಜ್ಯ ಎನ್ನುವ ಹೆಗ್ಗಳಿಕೆ ಕೂಡ ಸಿಗಲಿದೆ.

ಕೇಂದ್ರವಿರಲಿ ,ರಾಜ್ಯವಿರಲಿ ಎಲ್ಲರನ್ನೂ ಮೆಚ್ಚಿಸುವ ಬಜೆಟ್ ನೀಡಲು ಸಾಧ್ಯವಿಲ್ಲ 🙏

ಶುಭವಾಗಲಿ

ಕರ್ನಾಟಕ ಬಜೆಟ್‌ನ ಮುಖ್ಯಾಂಶಗಳು

ಕರ್ನಾಟಕ ಬಜೆಟ್‌ನ ಮುಖ್ಯಾಂಶಗಳು ಕರ್ನಾಟಕದ 2026 – 2027ನೇ ಸಾಲಿನ ಬಜೆಟ್ ಗಾತ್ರ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6, 2026 ರಂದು ಮಂಡಿಸಿದ ಕರ್ನಾಟಕ ಬಜೆಟ್‌ನ ಗಾತ್ರವು ಒಟ್ಟು 4,48,004 ಕೋಟಿ ಆಗಿದೆ. ಈ ಬಾರಿಯೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ಮತ್ತು ಮೂಲಸೌಕರ್ಯ ವಿಸ್ತರಣೆಗೆ ಒತ್ತು ಕೊಡಲಾಗಿದೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ 47,224 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 34,929 ಕೋಟಿ ರೂ. ಹಾಗೂ ಕೃಷಿ ವಲಯಕ್ಕೆ 8,373 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಸಾಲ ಪ್ರಮಾಣ ಹೆಚ್ಚಳ: ಇನ್ನು ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಾಲದ ಪ್ರಮಾಣವು ಸಹ ಹೆಚ್ಚಳವಾಗಿದೆ. ಒಟ್ಟು ಬಜೆಟ್ ಗಾತ್ರ 4,48,004 ಕೋಟಿ ರೂ. (13.3% ಹೆಚ್ಚಳ). ರಾಜ್ಯ ಸರ್ಕಾರವು ಸುಮಾರು 1.26 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ.

ಬೆಂಗಳೂರು ಅಭಿವೃದ್ಧಿಗೆ ಆದ್ಯತೆ: ಈ ಬಾರಿಯು ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಜೆಟ್‌ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ 3,000 ಕೋಟಿಯಿಂದ 7,000 ಕೋಟಿ ರೂ. ವರೆಗೆ ಅನುದಾನ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 80,000 ಆಸನಗಳ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಘೋಷಣೆ ಮಾಡಲಾಗಿದೆ.

ನಮ್ಮ ಮೆಟ್ರೋ ವಿಸ್ತರಣೆ: 2026-27 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯನ್ನು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಉದ್ಯೋಗ ಸೃಷ್ಟಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಆದ್ಯತೆ ನೀಡುವುದಾಗಿ ಹೇಳಲಾಗಿದೆ. ಇದರಲ್ಲಿ ಗೃಹ ಇಲಾಖೆಯ 8,000 ಹುದ್ದೆಗಳು ಸೇರಿವೆ.

ಕೃಷಿ ಮತ್ತು ನೀರಾವರಿ: ಕೃಷಿ ವಲಯಕ್ಕೆ 8,373 ಕೋಟಿ ರೂ. ಮತ್ತು ನೀರಾವರಿ ಯೋಜನೆಗಳಿಗೆ 22,436 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುವುದು.

ಕಂದಾಯ ಮತ್ತು ಹಣಕಾಸು: ಅಬಕಾರಿ ಇಲಾಖೆಗೆ 45,000 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಒಟ್ಟಾರೆ ಈ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-2026-rangaswamy-mookanahalli-calls-siddaramaiah-s-budget-overall-satisfactory-446247.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo