
Entertainment
-Shankrappa Parangi
Dhurandhar 2 The Revenge: ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಿಂದಾಗಿ ನೆಲಕಚ್ಚಿದ್ದ ಬಾಲಿವುಡ್ ಚಿತ್ರರಂಗವು ನಿಟ್ಟುಸಿರುವ ಬಿಡುವಂತೆ ಮಾಡಿದ ಸಿನಿಮಾ ನಟ ರಣವೀರ್ ಸಿಂಗ್ ‘ಧುರಂಧರ್’ ಸಿನಿಮಾ. ಎರಡು ಭಾಗಗಳಲ್ಲಿ ಸಿದ್ಧವಾಗಿದ್ದು, ಮೊದಲ ಭಾಗ ಬಿಗ್ ಸಕ್ಸಸ್ ಕಂಡಿದೆ. ಅದರ ಮುಂದುವರಿದ ಭಾಗ (ಸೀಕ್ವೆಲ್) ಧುರಂಧರ್ 2 ಟ್ರೈಲರ್ ಇಂದು ಶನಿವಾರ (ಮಾ.07) ಬಿಡುಗಡೆ ಆಗಿದೆ. ಸಾಕಷ್ಟು ನಿರೀಕ್ಷೆ ಇರುವ ಈ ಸಿನಿಮಾಗಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.
3.25 ನಿಮಿಷಗಳ ಟ್ರೈಲರ್ ಬಿಡುಗಡೆ ಮಾಡಿರುವ ಚಿತ್ರತಂಡವು ಅದರಲ್ಲಿ ಅರಂಭದಲ್ಲಿ ಧುರಂಧರ್ ಪಾರ್ಟ್ 1ರ ಕೊನೆ ಸನ್ನಿವೇಶ ರಿಕಾಲ್ ಮಾಡುತ್ತಿದ್ದಂತೆ ಪಾರ್ಟ್ 2ರ ಸಂಬಂಧಿಸಿದ ಫೈಟಿಂಗ್, ಡೈಲಾಗ್ ದೃಶ್ಯಗಳು ತೆರೆದುಕೊಳ್ಳುತ್ತದೆ. ಲಿಯಾರಿಯಾ ರಕ್ತ ಚರಿತ್ರೆ ಬರೆಯಲು ಮುಂದಾಗಿದೆ ಎಂದು ಟ್ರೈಲರ್ ನೋಡಿದ ಫ್ಯಾನ್ಸ್ ಹೇಳುತ್ತಿದ್ದಾರೆ. ರಣವೀರ್ ಸಿಂಗ್ ಧುರಂಧರ್ ನಲ್ಲಿ ಮಾಸ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪಾರ್ಟ್ 2ರಲ್ಲಿ ಅವರ ಉದ್ದನೆಯ ಕೂದಲಿಗೆ ಕತ್ತರಿ ಬಿದ್ದಿದೆ. ನಟ ಸಂಜಯ್ ದತ್ತ ಅವರ ಲೂಕ್ ಫ್ಯಾನ್ಸ್‌ಗೆ ಇಷ್ಟವಾಗುವಂತಿದೆ. ಸಿನಿಮಾದ ಉದ್ದಕ್ಕೂ ಆಕ್ಷನ್ ದೃಶ್ಯಗಳಿವೆ ಎಂಬುದನ್ನು ಟ್ರೈಲರ್ ಸಾರಿ ಹೇಳುತ್ತಿದೆ.

ಇದೇ ಮಾರ್ಚ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧುರಂಧರ್ 2 ರಿಲೀಸ್ ಆಗುತ್ತಿದೆ. ಈ ಬಾರಿ ಇದನ್ನು ಕನ್ನಡದಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವುದು ಮತ್ತೊಂದು ವಿಶೇಷ. ಈ ಮೂಲಕ ದಕ್ಷಿಣ ಭಾರತದ ಯಾವೊಂದು ರಾಜ್ಯವನ್ನು ಕಡಿಮೆ ಎಂಬಂತ ಕಾಣದೇ ಪ್ರಾಶಸ್ತ್ಯ ಕೊಡುತ್ತಿರುವುದನ್ನು ಗಮನಿಸಬಹುದು.
ದುರಂಧರ್ 2 ಕಲೆಕ್ಷನ್ ಮೇಲೆ ಭಾರೀ ನಿರೀಕ್ಷೆ
ಇನ್ನು ‘ಧುರಂಧರ್’ ಕಣ್ತುಂಬಿಕೊಂಡವರಿಗೆ ಆ ಚಿತ್ರದ ಕ್ಲೈಮ್ಯಾಕ್ಸ್ ಇನ್ನೂ ನೆನಪಿರಬಹುದು. ಅಕ್ಷಯ್ ಖನ್ನಾ ಅವರ ಗಾಡಿ ರೋಕ್ ಡೈಲಾಗ್‌ನ ಯಾರು ಮರೆತಿಲ್ಲ. ಆಸ್ಪತ್ರೆಯ ಸನ್ನಿವೇಶವು ಬಭದಸ್ತ್ ಇದೆ. ‘ಧುರಂಧರ್ 2’ ಕಥೆ ಇಲ್ಲಿಂದನೇ ಶುರುವಾಗಲಿದೆ. ‘ಧುರಂಧರ್’ ಸಿನಿಮಾವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಮೊದಲ ಪಾರ್ಟ್‌ಗಿಂತಲೂ ಈ ಸೀಕ್ವೆಲ್ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.
ಕ್ರೇಜ್ ಹೆಚ್ಚಿಸಿದ್ದ ರಿಲೀಸ್ ದಿನಾಂಕ
ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನದಂತೆ ‘ಧುರಂಧರ್ 2’ ರಿಲೀಸ್ ಆಗಲಿದೆ. ಎರಡು ಸಿನಿಮಾಗಳು ಮುಖಾ ಮುಖಿ ಆಗುತ್ತವೆ ಎನ್ನಲಾಗಿತ್ತು. ಯಶ್ ಅವರ ಕೆಜಿಎಫ್ ಹವಾ ಸೃಷ್ಟಿಸಿದ್ದವು. ದುರಂಧರ್ ಪಾರ್ಟ್ 1 ಪ್ರೇಕ್ಷಕರ ಮನ ಗೆದ್ದಿತ್ತು. ಹೀಗಾಗಿ ಎರಡು ಸಿನಿಮಾಗಳು ಒಂದೇ ದಿನ ಬರುತ್ತಿದ್ದದ್ದು ಅಭಿಮಾನಗಳಲ್ಲಿ ಕ್ರೇಜ್ ಹೆಚ್ಚಾಗಲು ಕಾರಣವಾಗಿತ್ತು. ಇದೀಗ ಮಧ್ಯಪ್ರಾಚ್ಯದ ಯುದ್ಧದ ಸನ್ನಿವೇಶ ಹಿನ್ನೆಲೆ ಗ್ಲೋಬಲ್ ಸಿನಿಮಾ ಟಾಕ್ಸಿಕ್ ರಿಲೀಸ್ ದಿನಾಂಕ ಜೂನ್ 4ಕ್ಕೆ ಮುಂದೂಡಿಕೆ ಆಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dhurandhar-2-the-revenge-trailer-out-ranveer-singh-action-thriller-to-release-in-kannada-on-march-1-011-446293.html. xn--babytilbehr-pgb.com does not claim ownership of this content. All rights remain with the original publisher.
