ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ, ಜನಪ್ರತಿನಿಧಿಗಳ ಮಹತ್ವದ ನಿರ್ಧಾರ… Baby Girl | Baby Girl Will Get Special Benefits From This Grama Panchayat In Karnataka And Explore More Details

Karnataka

-Malathesha M

ಹೆಣ್ಣು ಕುಟುಂಬದ ಕಣ್ಣು ಅನ್ನೋ ಮಾತು ಇದೆ, ಅದರಲ್ಲೂ ಮನೆ ಎಂದರೆ ಹೆಣ್ಣು ಮಗುವೊಂದು ಇರಲೇಬೇಕು ಎಂಬ ಮಾತು ಹಿರಿಯರದ್ದು. ಮನೆಯಲ್ಲಿ ಕಾಲ್ಗೆಜ್ಜೆ ಹಾಕಿ ಹೆಣ್ಣು ಮಗು ಓಡಾಡುತ್ತಿದ್ದರೆ ಲಕ್ಷ್ಮೀದೇವಿ ಕೂಡ ಆ ಮನೆಯಲ್ಲಿ ನಲಿಯುತ್ತಾ ಇರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಕಾರಣಕ್ಕೆ ಹೆಣ್ಣು ಮಗು ಹುಟ್ಟಿದ ಸುದ್ದಿ ಕೇಳಿದರೆ, ಲಕ್ಷ್ಮೀ ಬಂದಳು ಅಂತಾ ಸಿಹಿಹಂಚಿ ಖುಷಿಪಡುತ್ತಾರೆ ನಮ್ಮ ಭಾರತೀಯರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಹಲವು ಆಘಾತಕಾರಿ ಘಟನೆ ನಡುವೆ, ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ ಇಡುವ ನಿರ್ಧಾರಕ್ಕೆ ಬಂದಿದ್ದಾರೆ ಇಲ್ಲೊಂದು ಗ್ರಾಮದ ಜನಪ್ರತಿನಿಧಿಗಳು.

ಹೌದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಇಲ್ಲೊಂದು ಭರ್ಜರಿ ಸುದ್ದಿ ಇದೆ. ಏನೆಂದರೆ ಹೆಣ್ಣು ಮಗು ಹುಟ್ಟುವ ಕುಟಂಬಕ್ಕೆ ಸಣ್ಣ ಊರಿನ ಗ್ರಾಮಪಂಚಾಯಿತಿ ಬೆಂಬಲ ನೀಡುತ್ತಾ ಇಡೀ ದೇಶಕ್ಕೆ ಮಾದರಿ ಆಗುತ್ತಿದೆ. ಅಂದಹಾಗೆ ಗಡಿನಾಡು ಹಾಗೂ ಕುಂದಾನಗರಿ ಎಂಬ ಖ್ಯಾತಿಯನ್ನ ಪಡೆದಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯಿತಿ ಈಗ ಇಡೀ ದೇಶಕ್ಕೆ ಮಾದರಿಯಾಗಿದೆ. ಹೂಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ಸತತ 2ನೇ ಬಾರಿಗೆ ಹೆಣ್ಣು ಮಗು ಜನಿಸಿದರೆ ಆಗ ಆ ಮಗುವಿನ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯು 5,500 ರೂಪಾಯಿ ಠೇವಣಿ ಇರಿಸಲಿದೆ.

Baby Girl

2.46 ಲಕ್ಷ ರೂಪಾಯಿ ಠೇವಣಿ

ಅಂದಹಾಗೆ ಈ ಯೋಜನೆ ಹಲವು ವರ್ಷಗಳಿಂದಲೂ ಜಾರಿಯಲ್ಲಿ ಇದ್ದು, 2022ರ ಆಗಸ್ಟ್ 15 ಟು 2025 ಆಗಸ್ಟ್ 15ರ ತನಕ 5,000 ರೂಪಾಯಿ ಠೇವಣಿಯನ್ನು ಹೆಣ್ಣು ಮಗುವಿನ ಹೆಸರಲ್ಲಿ ಇರಿಸಲಾಗುತ್ತಿತ್ತು. ಆದರೆ ಆ ನಂತರ, ಎಂದರೆ 2025 ಆಗಸ್ಟ್ 16 ನಂತರ ಈ ಮೊತ್ತವನ್ನು 5,500 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಈವರೆಗೂ 49 ಮಕ್ಕಳ ಹೆಸರಲ್ಲಿ ಬರೋಬ್ಬರಿ 2.46 ಲಕ್ಷ ರೂಪಾಯಿ ಹಣ ಠೇವಣಿ ಇರಿಸಲಾಗಿದೆಯಂತೆ. ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಈ ಕಾರ್ಯ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಈ ಯೋಜನೆಗೆ ‘ಕುಮಾರಿ ಸಮೃದ್ಧಿ’ ಎಂದು ಹೆಸರನ್ನು ಇಡಲಾಗಿದೆ. ಈ ಯೋಜನೆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಸಾಗಿದ್ದು, ಇಂತಹ ಕಾರ್ಯಗಳು ದೇಶಾದ್ಯಂತ ವಿಸ್ತರಣೆ ಆಗಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/baby-girl-will-get-special-benefits-from-this-grama-panchayat-in-karnataka-and-explore-more-details-011-446353.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo