
Entertainment
oi-Hitesh Y
Kiccha Sudeep: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ (Dog Satish) ಇದೀಗ ಮತ್ತೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯಗಳಿಗೆ ಕಿಚ್ಚ ಸುದೀಪ್ ಅವರ ಹಾಡು ಹಾಕಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಡಾಗ್ ಸತೀಶ್ ಇದೀಗ ಇನ್ನೊಂದು ಕಾರಣಕ್ಕೆ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶೌಚಾಲಯದಲ್ಲಿ ಇರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ರೀಲ್ಸ್‌ಗೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ದಾದಾ ಯಾರ್ ಗೊತ್ತಾ ಎನ್ನುವ ಹಾಡನ್ನು ಬಳಸಲಾಗಿತ್ತು. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಹಲವು ವರ್ಷಗಳ ಕಾಲ ಕಷ್ಟಪಟ್ಟು ಸುದೀಪ್ (Kichcha Sudeep) ಅವರು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಎತ್ತರಕ್ಕೆ ಬೆಳೆದಿದ್ದಾರೆ ಅವರನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಈ ವಿಚಾರವಾಗಿ Tv9 ಸಂದರ್ಶನದಲ್ಲಿ ಮಾತನಾಡಿದ್ದು ಇದು ಸಹ ಮತ್ತೊಂದು ವಿವಾದವನ್ನು ಸೃಷ್ಟಿ ಮಾಡಿದೆ.

ಸುದೀಪ್ ಸರ್ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ ಅಂತ ನೀವು ಹೇಳುತ್ತಿದ್ದೀರಿ. ಹಾಗದ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ ಅಂತ ಸತೀಶ್ ಪ್ರಶ್ನೆ ಮಾಡಿದ್ದಾರೆ. ಗೂಗಲ್‌ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವ ಹಂತಕ್ಕೆ ಅವರು ಸಾಧನೆ ಮಾಡಿದ್ದಾರಾ ಹೇಳಿ, ನಟ ಆದ ಮಾತ್ರಕ್ಕೆ ತಲೆ ಮೇಲೆ ಏನು ಕೊಂಬು ಇರುತ್ತಾ. ನಾನು ನಾಯಿ ಫೀಲ್ಡ್ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಗೂಗಲ್‌ನಲ್ಲಿ ಬರುತ್ತೆ ಅವರ ಹೆಸರು ಬರುತ್ತಾ. ಸುದೀಪ್ ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ತಿಳಿದಿರಬಹುದು.
ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್‌ನಲ್ಲಿ ಹಾಕಿದರೆ ಸುದೀಪ್ ಸರ್ ಅವರ ಹೆಸರು ಬರುತ್ತಾರಾ ಎಂದು ಕೇಳಿದ್ದು. ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ನಾಯಿ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ
ಇನ್ನು ಸುದೀಪ್ ಅವರು ಕಷ್ಟಪಟ್ಟು ಸಿನಿಮಾ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿರಬಹುದು. ಆದರೆ ನಾನು ನನ್ನದ್ದೇ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ. ನಾನು ಕೂಡ ಕಷ್ಟಪಟ್ಟೇ ಬಂದಿದ್ದೀನಿ. ನನ್ನ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಯಾವ ಸಂದರ್ಭದಲ್ಲೂ ಹೇಳಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ ಎಂದು ಅದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
Kiccha Sudeep: ವಿಡಿಯೋ ವೈರಲ್ ಆಗುವುದಕ್ಕೆ ಇವರೇ ಕಾರಣ
ನನ್ನ ವಿಡಿಯೋ ವೈರಲ್ ಆಗುವುದಕ್ಕೆ ರಜತ್, ವಿನಯ್ ಹಾಗೂ ಧನರಾಜ್ ಅವರೇ ಕಾರಣ. ಇವರೆಲ್ಲರೂ ಪ್ರಚೋದನೆ ಮಾಡಿದ್ದರಿಂದಲೇ ಇಷ್ಟೆಲ್ಲ ಆಗಿದೆ. ಎಲ್ಲ ಕಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಮಾಡಿದ್ದು ಅವರೇ ತಾನೇ. ಅವರು ಸುಮ್ಮನೇ ಇದ್ದಿದ್ದರೆ ಮಾಮೂಲಿಯಾಗಿ ಈ ವಿಡಿಯೋ ಇಷ್ಟೊಂದು ಸುದ್ದಿ ಆಗುತ್ತಿತ್ತಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Dog Satisha cooking Kiccha Sudeep for real😂😭. pic.twitter.com/fpRqHZD2TX
— 𝗚𝗼𝗼𝗹𝗶-𝗩𝗞18ᵀᵒˣᴵᶜ (@nKD_tweetz18) March 7, 2026
ಇನ್ನು ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಕ್ಕೆ ಆದರೆ ಅದರಲ್ಲಿ ತಪ್ಪು ಇಲ್ಲದೆ ಇರುವ ಕಾರಣಕ್ಕೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಡಾಗ್ ಸತೀಶ್ ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/bigg-boss-ex-contestant-dog-satish-sparks-row-questions-is-kiccha-sudeep-s-no-1-on-google-fame-446379.html. xn--babytilbehr-pgb.com does not claim ownership of this content. All rights remain with the original publisher.
