
Sports
oi-Madhusudhan KR
T20 World Cup 2026: ನ್ಯೂಜಿಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆಯು ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಮುಖವಾಗಿ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ತೀವ್ರ ಕಳವಳಕ್ಕೆ ಕಾರಣವಾಗಿದೆ. ಆದ್ದರಿಂದ ಅವರನ್ನು ಕೈಬಿಡುವ ಸೂಚನೆಯನ್ನು ಸುನೀಲ್ ಗವಾಸ್ಕರ್ ನೀಡಿದ್ದಾರೆ.
ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ ಕೇವಲ 80-89 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ಅವರು ಗಳಿಸಿದ 55 ರನ್ ಮಾತ್ರ ಈವರೆಗಿನ ಏಕೈಕ ಗಮನಾರ್ಹ ಸಾಧನೆಯಾಗಿದೆ. ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್‌ಮೆಂಟ್‌ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಭಾನುವಾರ ನಡೆಯಲಿರುವ ನಿರ್ಣಾಯಕ ಫೈನಲ್ ಪಂದ್ಯದಿಂದ ಅಭಿಷೇಕ್ ಅವರನ್ನು ಕೈಬಿಡಬೇಕೆಂದು ಅವರು ಸಲಹೆ ನೀಡಿದ್ದಾರೆ.

ಅಭಿಷೇಕ್ ಬದಲಿಗೆ ರಿಂಕು ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡು, ಇಶಾನ್ ಕಿಶನ್ ಅವರನ್ನು ಸಂಜು ಸ್ಯಾಮ್ಸನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸುವುದು ಉತ್ತಮ ಎಂಬುದು ಗವಾಸ್ಕರ್ ಅವರ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಬದಲಾವಣೆ ಮಾಡುತ್ತದೆಯೇ ಅಥವಾ ಅಭಿಷೇಕ್ ಶರ್ಮಾ ಅವರ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟು ಮುಂದುವರೆಸುತ್ತದೆಯಾ ಎಂದು ಕಾದುನೋಡಬೇಕಿದೆ.
ಅಭಿಷೇಕ್ ಶರ್ಮಾ ಬಗ್ಗೆ ಗವಾಸ್ಕಾರ್ ಹೇಳಿದ್ದೇನು?
“ಇದು ಅತ್ಯಂತ ಕಠಿಣ ನಿರ್ಧಾರ. ಅಭಿಷೇಕ್ ಶರ್ಮಾ ಅವರು ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ ನಿಜ. ಆದರೆ, ಅವರು ಪದೇ ಪದೇ ಒಂದೇ ರೀತಿಯಲ್ಲಿ ಔಟ್ ಆಗುತ್ತಿದ್ದಾರೆ. ಅಂದರೆ, ಬಿಗ್ ಶಾಟ್ ಮಾಡುವಾಗ ವಿಫಲರಾಗುತ್ತಿದ್ದಾರೆ,” ಎಂದು ಗವಾಸ್ಕರ್ ತಿಳಿಸಿದ್ದಾರೆ.
“ಬೌಲರ್‌ಗಳು ಅವರ ಜಾಗವನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಒತ್ತಡ ಹೇರಿ ತಪ್ಪು ಮಾಡುವಂತೆ ಮಾಡುತ್ತಿದ್ದಾರೆ. ನನ್ನ ಆತಂಕವೇನೆಂದರೆ, ಅವರು ಇನ್ನೂ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿಲ್ಲ ಅಥವಾ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಅರಿತುಕೊಂಡಿರುವ ಎದುರಾಳಿ ಬೌಲರ್‌ಗಳು ಅವರನ್ನು ಸುಲಭವಾಗಿ ಔಟ್ ಮಾಡುತ್ತಾ ಬಂದಿದ್ದಾರೆ,” ಎಂದು ಹೇಳಿದರು.
ರಿಂಕು ಸಿಂಗ್‌ಗೆ ಅವಕಾಶ ನೀಡಲು ಸಲಹೆ
“ಅಭಿಷೇಕ್ ಶರ್ಮಾ ಬದಲಿಗೆ ಫಿನಿಶರ್ ರಿಂಕು ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಮತ್ತು ಸಂಜು ಸ್ಯಾಮ್ಸನ್ ಅವರ ಜೊತೆಗೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಗವಾಸ್ಕರ್ ಬಯಸಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, “ವರುಣ್ ಚಕ್ರವರ್ತಿ ಅವರ ಬದಲಿಗೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಗವಾಸ್ಕರ್ ಸಲಹೆ ನೀಡಿದ್ದಾರೆ.”
“ನರೇಂದ್ರ ಮೋದಿ ಕ್ರೀಡಾಂಗಣದಂತಹ ದೊಡ್ಡ ಬೌಂಡರಿಗಳಿರುವ ಮೈದಾನದಲ್ಲಿ, ಕುಲದೀಪ್ ಯಾದವ್ ಉತ್ತಮ ಆಯ್ಕೆಯಾಗಬಹುದು. ಏಕೆಂದರೆ, ಅವರು ಫ್ಲಾಟ್ ಪಿಚ್‌ಗಳಲ್ಲೂ ಚೆಂಡನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ,” ಎಂದು ಗವಾಸ್ಕರ್ ತಿಳಿಸಿದ್ದಾರೆ. ಆದರೆ, ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಬದಲಾವಣೆ ಮಾಡುತ್ತದೆಯೇ ಅಥವಾ ಅಭಿಷೇಕ್ ಶರ್ಮಾ ಅವರ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟು ಮುಂದುವರೆಸುತ್ತದೆಯಾ ಎಂದು ಕಾದುನೋಡಬೇಕಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/sunil-gavaskar-urges-india-to-drop-abhishek-sharma-for-t20-world-cup-2026-final-vs-new-zealand-446385.html. xn--babytilbehr-pgb.com does not claim ownership of this content. All rights remain with the original publisher.
