Sachin Tendulkar: ಅಭಿಷೇಕ್‌ ಶರ್ಮಾಗೆ ಕ್ರಿಕೆಟ್‌ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ | Sachin Tendulkar Praises Abhishek Sharma and Team India’s Batting Blitz in T20 World Cup 2026 Final

Sports

oi-Madhusudhan KR

Sachin Tendulkar: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಟರ್‌ಗಳು ಆಕ್ರಮಣಕಾರಿ ಆಟ ಆಡಿದರು. ಇದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷ ಸಂದೇಶದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 255/5 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಈ ಸಾಧನೆಯನ್ನು ಶ್ಲಾಘಿಸಿರುವ ಸಚಿನ್ ತೆಂಡೂಲ್ಕರ್, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.

Sachin Tendulkar Praises Abhishek Sharma and Team India s Batting Blitz in T20 World Cup 2026 Final

ವಿಶೇಷವಾಗಿ ಅಭಿಷೇಕ್ ಶರ್ಮಾ ಬಗ್ಗೆ ಮಾತನಾಡಿದ ಸಚಿನ್, “ಈ ಟೂರ್ನಿಯುದ್ದಕ್ಕೂ ಅಭಿಷೇಕ್ ಶರ್ಮಾ ಕಠಿಣ ಸಮಯವನ್ನು ಎದುರಿಸಿದ್ದರು. ಆದರೆ, ಮಹತ್ವದ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ, ತಂಡದ ನಾಯಕತ್ವ ಮತ್ತು ಆಡಳಿತ ಮಂಡಳಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಅವರು ಸಮರ್ಥವಾಗಿ ಉಳಿಸಿಕೊಂಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೆಂಡ್ಯೂಲ್ಕರ್ ಸಂದೇಶದಲ್ಲಿ ಏನಿದೆ?

“ಅಭಿಷೇಕ್ ಶರ್ಮಾ ಪಾಲಿಗೆ ಈ ಟೂರ್ನಿಯು ಸುಲಭವಾಗಿರಲಿಲ್ಲ, ಆದರೆ ಆಟಗಾರನಾಗಿ ಅವರ ಸಾಮರ್ಥ್ಯದ ಮೇಲೆ ತಂಡವು ವಿಶ್ವಾಸವಿಟ್ಟಿತ್ತು. ಆ ನಂಬಿಕೆಯನ್ನು ಅವರು ಫೈನಲ್ ಪಂದ್ಯದದಲ್ಲಿ ಉತ್ತಮ ಇನಿಂಗ್ಸ್ ಮೂಲಕ ಸಮರ್ಥವಾಗಿ ಉಳಿಸಿಕೊಂಡಿದ್ದಾರೆ. ಇಶಾನ್ ಕಿಶನ್ ತಂಡದ ಮೊತ್ತಕ್ಕೆ ಉತ್ತಮ ವೇಗ ನೀಡುತ್ತಿದ್ದರೆ, ಮತ್ತು ಸಂಜು ಸ್ಯಾಮ್ಸನ್ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದಾರೆ,” ಎಂದು ಸಚಿನ್ ಬರೆದುಕೊಂಡಿದ್ದಾರೆ.

ಭಾರತದ ಬ್ಯಾಟಿಂಗ್ ಅಬ್ಬರ

ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅವರು ಸಿಡಿಸಿದ ಅರ್ಧಶತಕಗಳು ಮತ್ತು ಅಂತಿಮ ಹಂತದಲ್ಲಿ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 255/5 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಇದು ಗರಿಷ್ಠ ಮೊತ್ತವಾಗಿದೆ.

ವಿಶೇಷವಾಗಿ ಅಂತಿಮ ಓವರ್‌ನಲ್ಲಿ ಶಿವಂ ದುಬೆ ಅವರು ಜೇಮ್ಸ್ ನೀಶಮ್ ಬೌಲಿಂಗ್‌ನಲ್ಲಿ 24 ರನ್ ದೋಚಿದರು. ಕೇವಲ 8 ಎಸೆತಗಳನ್ನು ಎದುರಿಸಿದ ದುಬೆ, ಅಜೇಯ 26 ರನ್ ಗಳಿಸಿ ಮಿಂಚಿದರು. ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಆದರೆ, ಭಾರತದ ಆರಂಭಿಕ ಜೋಡಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪವರ್‌ಪ್ಲೇನಲ್ಲಿಯೇ ಭಾರತ 92 ರನ್ ಗಳಿಸಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ. ಆರಂಭಿಕರಾದ ಸ್ಯಾಮ್ಸನ್ ಮತ್ತು ಅಭಿಷೇಕ್ ಟಿ20 ವಿಶ್ವಕಪ್ ಫೈನಲ್‌ನಲ್ಲಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ ಮೊದಲ ಜೋಡಿಯಾದರು.

ಬಳಿಕ ರಚಿನ್‌ ರವೀಂದ್ರ ಅವರು ಅಭಿಷೇಕ್‌ ಅವರ ವಿಕೆಟ್‌ ಕಿತ್ತರು. ವೇಗಿಗಳಾದ ಲಾಕಿ ಫರ್ಗುಸನ್ ಮತ್ತು ಮ್ಯಾಟ್ ಹೆನ್ರಿ ಭಾರತದ ಬ್ಯಾಟರ್‌ಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಫರ್ಗುಸನ್ ತಮ್ಮ ಎರಡು ಓವರ್‌ಗಳಲ್ಲೇ 48 ರನ್ ಬಿಟ್ಟುಕೊಟ್ಟರು. 16ನೇ ಓವರ್‌ನಲ್ಲಿ ಜೇಮ್ಸ್ ನೀಶಮ್ ಅವರು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು. ಆದರೂ, ಅಂತಿಮ ಹಂತದಲ್ಲಿ ಭಾರತದ ಬ್ಯಾಟರ್‌ಗಳು ಆಕ್ರಮಣಕಾರಿ ಆಟದಿಂದ ತಂಡವು 255 ರನ್‌ಗಳ ಬೃಹತ್ ಮೊತ್ತವನ್ನು ತಲುಪಲು ಸಾಧ್ಯವಾಯಿತು.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/sachin-tendulkar-praises-abhishek-sharma-and-team-india-s-batting-blitz-in-t20-world-cup-2026-final-446409.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo