ನೇಪಾಳ ಚುಣಾವಣೆ ಫಲಿತಾಂಶ ಅಂತಿಮ, ಬಲೇಂದ್ರ ಶಾ ಪಕ್ಷಕ್ಕೆ ಒಟ್ಟು 119 ಸ್ಥಾನ | Nepal Election 2026 | Nepal Election 2026 Results And Here Is How Much Seat Balendra Shah Party Won In This Election

International

-Malathesha M

ಭಾರತದ ನೆರೆಯ ದೇಶದಲ್ಲಿ ಇದೀಗ ಶಾಂತಿ ನೆಲೆಸಿದ್ದು, ಕಣಿವೆ ದೇಶ ನೇಪಾಳದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. 2025ರ ಕೊನೆಯಲ್ಲಿ ಘೋರವಾದ ಆಂತರಿಕ ಹಿಂಸಾಚಾರಕ್ಕೆ ನಲುಗಿ ಹೋಗಿದ್ದ ನೇಪಾಳ ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಚುನಾವಣೆ ನಡೆಸಲಾಗಿತ್ತು. ಇದೀಗ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭ್ರಷ್ಟ ರಾಜಕೀಯ ನಾಯಕರಿಗೆ ನೆಪಾಳದ ಹೊಸ ತಲೆಮಾರಿನ ಯುವ ಮತದಾರರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಈ ಮೂಲಕ ಬಲೇಂದ್ರ ಶಾ ಎಂಬ ರ‍್ಯಾಪರ್ ಕಟ್ಟಿದ್ದ ಪಕ್ಷಕ್ಕೆ ಪ್ರಚಂಡ ಗೆಲುವು ಸಿಕ್ಕಿದೆ. ಹಾಗಾದರೆ ಬಲೇಂದ್ರ ಶಾ ಪಕ್ಷ ಯಾವುದು? ಒಟ್ಟು ಎಷ್ಟು ಸ್ಥಾನ ಗೆದ್ದಿದೆ ಬಲೇಂದ್ರ ಶಾ ಪಕ್ಷ? ಮುಂದೆ ಓದಿ.

ಝೆನ್‌ಜೀ ಎಂದರೆ ಹೊಸ ತಲೆಮಾರಿನ ಯುವಕರು ಸೇರಿ ನೇಪಾಳ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ ನೇಪಾಳ ದೇಶದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಡತನವು ಮತ್ತು ಸಮಸ್ಯೆಗಳು ಇದ್ದರೂ ಅದನ್ನ ಸರಿ ಮಾಡಲು ಅಲ್ಲಿನ ರಾಜಕೀಯ ನಾಯಕರು ಮುಂದಾಗಿಲ್ಲ. ಬದಲಾಗಿ ನೇಪಾಳ ರಾಜಕೀಯ ನಾಯಕರ ಮಕ್ಕಳು ಹಾಗೂ ಹೆಂಡತಿ ಮತ್ತು ಕುಟುಂಬದ ಸದಸ್ಯರು ಜನರ ದುಡ್ಡು ಮತ್ತು ಲಂಚದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ದೊಡ್ಡ ಗಲಾಟೆ ಶುರುವಾಗಿತ್ತು.

Nepal Election 2026

ನೇಪಾಳ ದೇಶದಲ್ಲಿ ಹಿಂಸಾಚಾರದ ಕಿಡಿ

ಕೊನೆಗೆ ನೇಪಾಳ ಸಂಸತ್ ಕಟ್ಟಡಕ್ಕೆ ಕೂಡ ಬೆಂಕಿಯನ್ನ ಹಚ್ಚಿ ಆಕ್ರೋಶ ಹೊರಹಾಕಿದ್ದ ಯುವಕರು, ಈಗ ಕ್ರಾಂತಿಕಾರಿ ನಾಯಕನ ಆಯ್ಕೆ ಮಾಡಿದ್ದಾರೆ. ರ‍್ಯಾಪರ್ ಆಗಿ ಜನಪ್ರಿಯತೆ ಗಳಿಸಿದ್ದ ಬಲೇಂದ್ರ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಾರ್ಟಿ ಎಂದರೆ ಆರ್‌ಎಸ್‌ಪಿ ಪಕ್ಷ ದೊಡ್ಡ ಗೆಲುವು ದಾಖಲಿಸಿ ಗಮನವನ್ನ ಸೆಳೆದಿದೆ. ಅಲ್ಲದೆ ನೇಪಾಳ ನೆಲದಲ್ಲಿ ಹೊಸತನದ ಆಡಳಿತ ನೀಡುವ ಮುನ್ಸೂಚನೆ ಕೂಡ ಈ ಮೂಲಕ ಇದೀಗ ಹೊರಬೀಳುತ್ತಾ ಇದೆ.

ನೇಪಾಳ ಸಂಸತ್‌ನ 165 ಸ್ಥಾನಗಳಿಗೆ ನೇರ ಚುನಾವಣೆ ನಡೆಸಿ, ಫಲಿತಾಂಶಕ್ಕೆ ಕಾಯುತ್ತಿದ್ದರು ಪ್ರಜೆಗಳು. ಈಗ ಹೊರಬಿದ್ದಿರುವ ರಿಸಲ್ಟ್, ಸಂಪೂರ್ಣವಾಗಿ ಬಲೇಂದ್ರ ಶಾ ಪಕ್ಷದ ಪರ ಇದೆ. 165 ಸ್ಥಾನಗಳಲ್ಲಿ ಬರೋಬ್ಬರಿ 119 ಸೀಟ್‌ ಗೆದ್ದಿದೆ ನೇಪಾಳ ದೇಶದ ನೂತನ ಪಕ್ಷ ರಾಷ್ಟ್ರೀಯ ಸ್ವತಂತ್ರ ಪಾರ್ಟಿ. ಅದ್ರಲ್ಲೂ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿರುದ್ಧ ಬಲೇಂದ್ರ ಶಾ ಬರೋಬ್ಬರಿ 50,000 ಮತಗಳ ಭಾರಿ ಅಂತರದ ನೇರವಾದ ಗೆಲುವು ಸಾಧಿಸಿರುವುದು ಮತ್ತೊಂದು ಇತಿಹಾಸ ಸೃಷ್ಟಿಸಿದೆ ನೇಪಾಳದಲ್ಲಿ.

35 ವರ್ಷದ ಬಲೇಂದ್ರ ಶಾ ಪ್ರಧಾನಿ

ನೇಪಾಳ ದೇಶ ಇದೀಗ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯನ್ನು ಕಾಣಲಿದ್ದು, ಬಲೇಂದ್ರ ಶಾ ಈಗ ನೇಪಾಳ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ. ಭಾರತದ ಜೊತೆ ಕೂಡ ಬಲೇಂದ್ರ ಶಾ ಉತ್ತಮ ಸಂಬಂಧ ಹೊಂದಿದ್ದು, ಎರಡೂ ದೇಶಗಳ ನಡುವೆ ಮತ್ತೆ ಸಂಬಂಧ ಗಟ್ಟಿಯಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಎರಡೂ ದೇಶಗಳು ಮತ್ತಷ್ಟು ವಿಚಾರಗಳಲ್ಲಿ ಒಟ್ಟಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಲು ನೇಪಾಳದ ಹೊಸ ಸರ್ಕಾರ ದಾರಿ ಮಾಡಿಕೊಡುವ ನಿರೀಕ್ಷೆ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/nepal-election-2026-results-and-here-is-how-much-seat-balendra-shah-party-won-in-this-election-011-446403.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo